ಕೈಲ್ ಜೇಮಿಸನ್ 
ಕ್ರಿಕೆಟ್

'ನಾನು ಹೆದರಿದ್ದೆ': ವೈಭವ್ ಸೂರ್ಯವಂಶಿ ಮುಂದೆ ಅತಿರೇಕದ ಸಂಭ್ರಮಾಚರಣೆಗೆ ಕೈಲ್ ಜೇಮಿಸನ್ ಕೊಟ್ಟ ಉತ್ತರ ಹೀಗಿದೆ..; Video!

ಸತತ ಮೂರು ಸೋಲುಗಳ ನಂತರ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್ 2026ರ 43ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ತಮ್ಮ ತವರು ಮೈದಾನದಲ್ಲಿ ಗೆಲ್ಲಲು ಎದುರು ನೋಡುತ್ತಿತ್ತು.

ಸತತ ಮೂರು ಸೋಲುಗಳ ನಂತರ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್ 2026ರ 43ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ತಮ್ಮ ತವರು ಮೈದಾನದಲ್ಲಿ ಗೆಲ್ಲಲು ಎದುರು ನೋಡುತ್ತಿತ್ತು. ದೆಹಲಿ ತಂಡವು ತಮ್ಮ ಪ್ಲೇಆಫ್ ಭರವಸೆಯನ್ನು ಜೀವಂತವಾಗಿಡಲು ಈ ಪಂದ್ಯವನ್ನು ಗೆಲ್ಲಲೇಬೇಕಿತ್ತು. ಡೆಲ್ಲಿಗೆ ವೈಭವ್ ಸೂರ್ಯವಂಶಿ ದೊಡ್ಡ ಬೆದರಿಕೆಯನ್ನು ಒಡ್ಡಿದರು. ಆದಾಗ್ಯೂ, ನ್ಯೂಜಿಲೆಂಡ್ ವೇಗದ ಬೌಲರ್ ಕೈಲ್ ಜೇಮಿಸನ್ ಯುವ ಬ್ಯಾಟರ್ ನನ್ನು ಔಟ್ ಮಾಡುವ ಮೂಲಕ ದೆಹಲಿಗೆ ಸಮಾಧಾನ ತಂದರು.

ವೈಭವ್ ಅವರನ್ನು ಔಟ್ ಮಾಡಿದ ನಂತರ, ಕೈಲ್ ತಮ್ಮ ಆಕ್ರಮಣಕಾರಿ ಆಚರಣೆಗಾಗಿ ಅಭಿಮಾನಿಗಳ ಆಕ್ರೋಶ ಮತ್ತು ಬಿಸಿಸಿಐನಿಂದ ಶಿಕ್ಷೆಯನ್ನೂ ಪಡೆದರು. ಪಂದ್ಯದ ನಂತರ, ಜೇಮಿಸನ್ ಸೂರ್ಯವಂಶಿ ಮುಂದೆ ಅಷ್ಟೋಂದು ಆಕ್ರಣಕಾರಿ ಆಗಲು ಕಾರಣವೇನೆಂಬುದನ್ನು ಬಿಚ್ಚಿಟ್ಟಿದ್ದಾರೆ. ತಾನು ಅಷ್ಟೊಂದು ಆಕ್ರಮಣಕಾರಿಯಾಗಿ ಸಂಭ್ರಮಿಸಲು ಕಾರಣವೇನು ಎಂಬುದನ್ನು ಬಹಿರಂಗಪಡಿಸಿದ್ದಾರೆ. ನನ್ನ ಜೀವನದಲ್ಲಿ ನಾನು ಎಂದಿಗೂ ಒಬ್ಬ 15 ವರ್ಷದ ಬಾಲಕನಿಗೆ ಈ ಮಟ್ಟಿಗೆ ಹೆದರಿರಲಿಲ್ಲ. ಆತ ಅಷ್ಟು ಭಯಾನಕ ಬ್ಯಾಟಿಂಗ್ ಮಾಡುತ್ತಾನೆ ಎಂದು ಜೇಮಿಸನ್ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.

ವೈಭವ್ ಸೂರ್ಯವಂಶಿ ಪಂದ್ಯದ ಎರಡನೇ ಓವರ್‌ನ ಐದನೇ ಎಸೆತದಲ್ಲಿ ಜೇಮಿಸನ್ ಎಸೆದ ಅದ್ಭುತ ಯಾರ್ಕರ್ ಆಡಲು ವಿಫಲರಾಗಿ ಬೌಲ್ಡ್ ಆದರು. ಹಿಂದಿನ ಎಸೆತದಲ್ಲಿ ಕೈಲ್ ಗೆ ವೈಭವ್ ಬೌಂಡರಿ ಬಾರಿಸಿದ್ದರು. ವೈಭವ್ ಔಟಾಗಿದ್ದು ಡೆಲ್ಲಿ ಕ್ಯಾಪಿಟಲ್ಸ್ ಬೌಲರ್‌ಗಳಿಗೆ ಸ್ವಲ್ಪ ನೆಮ್ಮದಿ ಕೊಟ್ಟಿತ್ತು. ಆದಾಗ್ಯೂ, ರಿಯಾನ್ ಪರಾಗ್, ಧ್ರುವ್ ಜುರೆಲ್ ಮತ್ತು ಡೊನೊವನ್ ಫೆರೇರಾ ಅವರಂತಹ ಆಟಗಾರರು ಮತ್ತೆ ಆಟಕ್ಕೆ ಇಳಿದು ರಾಜಸ್ಥಾನ 225 ರನ್ ಗಳಿಸಲು ಸಹಾಯ ಮಾಡಿದರು.

ಐಪಿಎಲ್ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ವೈಭವ್ ಸೂರ್ಯವಂಶಿ ಬಗ್ಗೆ ಜೇಮೀಸನ್ ಹೀಗೆ ಹೇಳಿದ್ದಾರೆ. ನನ್ನ ಜೀವನದಲ್ಲಿ 15 ವರ್ಷದ ಹುಡುಗನಿಗೆ ನಾನು ಎಂದಿಗೂ ಇಷ್ಟೊಂದು ಹೆದರಿರಲಿಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ ಹೌದು, ನಾವು ಆಟಕ್ಕೆ ಹೋಗುವ ಮೊದಲು ಸ್ವಲ್ಪ ಯೋಜನೆ ಹಾಕಿಕೊಂಡಿದ್ದೇವೆ. ಅದು ಫಲ ನೀಡಿತು ಎಂದರು.

ಡೆಲ್ಲಿ ಕ್ಯಾಪಿಟಲ್ಸ್‌ಗೆ ರಾಜಸ್ಥಾನದ ಆರಂಭಿಕ ಜೋಡಿ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಅವರನ್ನು ಬೇಗನೆ ಔಟ್ ಮಾಡುವುದು ಎಷ್ಟು ಮುಖ್ಯ ಎಂಬುದನ್ನು ಒತ್ತಿ ಹೇಳಿ, ಪಂದ್ಯದ ಮೊದಲು ತಮ್ಮ ತಂಡದ ಯೋಜನೆಯನ್ನು ಜೇಮೀಸನ್ ವಿವರಿಸಿದರು. ಹೆಚ್ಚಿನ ತಂಡಗಳು ರಾಜಸ್ಥಾನವನ್ನು ತಂಡವಾಗಿ ನೋಡುತ್ತವೆ. ಆದರೆ ನಾವು ಅಗ್ರ ಇಬ್ಬರು ಬ್ಯಾಟರ್ ಗಳನ್ನು ಔಟ್ ಮಾಡಿದರೇ ಸಾಕು ಅಂದುಕೊಂಡಿದ್ದೇವು. ಬೇಗನೆ ಔಟ್ ಮಾಡಿದರೇ ಪವರ್‌ಪ್ಲೇನಲ್ಲಿ ರನ್ ಹರಿವನ್ನು ನಿಧಾನಗೊಳಿಸುತ್ತದೆ ಎಂದು ನಾವು ಭಾವಿಸಿದ್ದೇವು ಎಂದು ಕಿವೀಸ್‌ನ ವೇಗಿ ಹೇಳಿದರು.

ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಆಟಗಾರ ಪಥುಂ ನಿಸ್ಸಾಂಕಾ 62, ಕೆಎಲ್ ರಾಹುಲ್ ಆಕರ್ಷಕ 75 ರನ್ ಬಾರಿಸುವುದರೊಂದಿಗೆ ತಂಡಕ್ಕೆ ಗೆಲುವು ತಂದುಕೊಟ್ಟಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ- ಇರಾನ್ ನಡುವಿನ ಒಪ್ಪಂದ ಅಂತಿಮವಲ್ಲ: ಡೊನಾಲ್ಡ್ ಟ್ರಂಪ್ ಹೊಸ ಬಾಂಬ್!

ಪರಿಷತ್ ಚುನಾವಣೆ: ಕಾಂಗ್ರೆಸ್​​ ಕ್ಯಾಂಪ್​ ಸೇರಿಕೊಂಡ ಬಿಜೆಪಿ ಉಚ್ಛಾಟಿತ ಶಾಸಕರು; ಡಿಕೆಶಿ ನೇತೃತ್ವದಲ್ಲಿ ಅಣಕು ಮತದಾನ!

2nd ODI: ಆಫ್ಘಾನಿಸ್ತಾನ ವಿರುದ್ಧ ಸ್ಫೋಟಕ ಬ್ಯಾಟಿಂಗ್, 403 ರನ್ ಗಳ ಬೃಹತ್ ಗುರಿ ನೀಡಿದ ಭಾರತ

ಗೃಹ ಸಚಿವರ ಸ್ವಕ್ಷೇತ್ರ ಕಲಬುರಗಿಯಲ್ಲಿ ನೇಣು ಬಿಗಿದುಕೊಂಡು PSI ಆತ್ಮಹತ್ಯೆಗೆ ಶರಣು!

India vs Afghanistan 2nd ODI: 77 ಎಸೆತಗಳಲ್ಲಿ ಭರ್ಜರಿ ಶತಕ ಬಾರಿಸಿದ ಗಿಲ್; ಕೊಹ್ಲಿಯ ದೊಡ್ಡ ದಾಖಲೆ ಪುಡಿಪುಡಿ!

SCROLL FOR NEXT