ವೈಭವ್ ಸೂರ್ಯವಂಶಿ - ಮೊಹಮ್ಮದ್ ಸಿರಾಜ್ 
ಕ್ರಿಕೆಟ್

'ಆಗ ಕೈಲ್ ಜೇಮಿಸನ್, ಈಗ ಮೊಹಮ್ಮದ್ ಸಿರಾಜ್'; ಪ್ರತಿಯೊಬ್ಬ ಬೌಲರ್‌ನಲ್ಲೂ ವೈಭವ್ ಸೂರ್ಯವಂಶಿ ಭಯ ಹುಟ್ಟಿಸಿದ್ದಾರೆ: ಮಾಜಿ ಆಟಗಾರ ಮೊಹಮ್ಮದ್ ಕೈಫ್

ವೈಭವ್ ಸೂರ್ಯವಂಶಿಯನ್ನು ಇನ್ನು ಮುಂದೆ 'ಕೇವಲ ವಿಕೆಟ್' ಎಂದು ನೋಡುವುದಿಲ್ಲ. ಬದಲಿಗೆ ಪ್ರತಿಯೊಬ್ಬ ಬೌಲರ್ ಅವರನ್ನು ಅತ್ಯಂತ ಅಮೂಲ್ಯ ಆಟಗಾರನೆಂದೇ ಪರಿಗಣಿಸುತ್ತಾರೆ ಎಂದು ಹೇಳಿದರು.

ರಾಜಸ್ಥಾನ್ ರಾಯಲ್ಸ್ (RR) ತಂಡದ 15 ವರ್ಷದ ಬ್ಯಾಟಿಂಗ್ ಸೆನ್ಶೇಷನ್ ವೈಭವ್ ಸೂರ್ಯವಂಶಿಯನ್ನು ಔಟ್ ಮಾಡಿದ ನಂತರ ಗುಜರಾತ್ ಟೈಟಾನ್ಸ್ (GT) ತಂಡದ ವೇಗಿ ಮೊಹಮ್ಮದ್ ಸಿರಾಜ್ ಅವರ ಆಕ್ರಮಣಕಾರಿ ಸಂಭ್ರಮಾಚರಣೆಯು ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಕೈಲ್ ಜೇಮಿಸನ್ ಅವರ ಆಚರಣೆಯನ್ನು ನೆನಪಿಸುತ್ತದೆ. ಎರಡೂ ಘಟನೆಗಳನ್ನು ಹೋಲಿಸಿದಾಗ, ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್, 15 ವರ್ಷದ ಬಾಲಕ ಮೊಹಮ್ಮದ್ ಸಿರಾಜ್ ಮತ್ತು ಕೈಲ್ ಜೇಮಿಸನ್ ಅವರಂತಹ ಅನುಭವಿ ವೇಗಿಗಳಲ್ಲಿಯೂ ಭಯವನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾಗಿದ್ದಾರೆ ಎಂದಿದ್ದಾರೆ.

ವೈಭವ್ ಸೂರ್ಯವಂಶಿಯನ್ನು ಇನ್ನು ಮುಂದೆ 'ಕೇವಲ ವಿಕೆಟ್' ಎಂದು ನೋಡುವುದಿಲ್ಲ. ಬದಲಿಗೆ ಪ್ರತಿಯೊಬ್ಬ ಬೌಲರ್ ಅವರನ್ನು ಅತ್ಯಂತ ಅಮೂಲ್ಯ ಆಟಗಾರನೆಂದೇ ಪರಿಗಣಿಸುತ್ತಾರೆ. ಅವರನ್ನು ಔಟ್ ಮಾಡುವ ಮೂಲಕ ಆಟವನ್ನು ತಮ್ಮ ಪರವಾಗಿ ತಿರುಗಿಸಬಹುದು ಎಂದು ತಿಳಿದಿದ್ದಾರೆ ಎಂದು ಹೇಳಿದರು.

'ಮೊದಲು ಕೈಲ್ ಜೇಮಿಸನ್ ಮತ್ತು ನಂತರ ಮೊಹಮ್ಮದ್ ಸಿರಾಜ್. ಇಬ್ಬರೂ ಅನುಭವಿ ವೇಗಿಗಳು ವೈಭವ್ ಸೂರ್ಯವಂಶಿ ಅವರ ವಿಕೆಟ್ ಪಡೆದ ನಂತರ ಉತ್ಸಾಹಭರಿತ ಸಂಭ್ರಮಾಚರಣೆ ಮಾಡಿದರು. 15 ವರ್ಷದ ಬಾಲಕ ಐಪಿಎಲ್‌ನಲ್ಲಿ ಹೇಗೆ ಪ್ರಮುಖ ವಿಕೆಟ್ ಆಗಿದ್ದಾನೆ ಎಂಬುದನ್ನು ಇದು ತೋರಿಸುತ್ತದೆ. ಅವರ ಕಠಿಣ ಪರಿಶ್ರಮ ಮತ್ತು ಪ್ರತಿಭೆಗೆ ಮನ್ನಣೆ ಸಿಕ್ಕಿದೆ' ಎಂದು ಕೈಫ್ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಈಮಧ್ಯೆ, ವೈಭವ್ ಸೂರ್ಯವಂಶಿ ಪುರುಷರ ಟಿ20 ಇತಿಹಾಸದಲ್ಲಿ ಕೇವಲ 29 ಇನಿಂಗ್ಸ್‌ಗಳಲ್ಲಿ 100 ಸಿಕ್ಸರ್‌ಗಳನ್ನು ಬಾರಿಸಿದ ಅತ್ಯಂತ ವೇಗದ ಮತ್ತು ಕಿರಿಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಅಲ್ಲದೆ, ಕೇವಲ 514 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿದ ಅತ್ಯಂತ ವೇಗದ ಆಟಗಾರ ಎಂಬ ದಾಖಲೆಯನ್ನು ಸಹ ಅವರು ಬರೆದರು.

ಶನಿವಾರ ರಾತ್ರಿ ಜೈಪುರದಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌ನ ವೈಭವ್ ಸೂರ್ಯವಂಶಿ ಈ ಸಾಧನೆ ಮಾಡಿದ್ದಾರೆ.

ಆಕ್ರಣಕಾರಿಯಾಗಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ವೈಭವ್ ಸೂರ್ಯವಂಶಿ ಮೊಹಮ್ಮದ್ ಸಿರಾಜ್ ಅವರ ಮೊದಲ ಎಸೆತದಲ್ಲೇ ಲಾಂಗ್-ಆನ್‌ನಲ್ಲಿ ಬೃಹತ್ ಸಿಕ್ಸರ್ ಬಾರಿಸಿದರು.

ಪವರ್‌ಪ್ಲೇ ಉದ್ದಕ್ಕೂ ಆಕ್ರಮಣಕಾರಿ ಆಟ ಮುಂದುವರಿಸಿದ ಅವರು, ಕೇವಲ 16 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 36 ರನ್ ಗಳಿಸಿದರು. ಆದಾಗ್ಯೂ, ಸಿರಾಜ್ ಅಂತಿಮವಾಗಿ ಅವರ ವಿಕೆಟ್ ಕಬಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕ ಸೇರಿ ದೇಶಾದ್ಯಂತ Pakನ ISI ಬೆಂಬಲಿತ ಗ್ಯಾಂಗಸ್ಟರ್ ಶಹಜಾದ್ ಭಟ್ಟಿ ಜಾಲದ 200ಕ್ಕೂ ಹೆಚ್ಚು ಜನರ ಬಂಧನ: ಅಮಿತ್ ಶಾ

ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಬಿಗಿಪಟ್ಟು: ವಿಧಾನಸಭೆಯಲ್ಲಿ ಪ್ರತಿಭಟನೆ, ಗದ್ದಲ, ಕಲಾಪಕ್ಕೆ ಅಡ್ಡಿ!

'ಸ್ವಲ್ಪ ತಾಳ್ಮೆಯಿಂದ ಕಾಯಿರಿ' ಪಾಕಿಸ್ತಾನ, ಬಾಂಗ್ಲಾದೇಶ, ಅಪ್ಘಾನಿಸ್ತಾನ ಮತ್ತೆ ಭಾರತಕ್ಕೆ ಸೇರಿಕೊಳ್ಳುವ ದಿನ ಬರುತ್ತದೆ- ಬಾಬಾ ರಾಮದೇವ್!

ಆಪ್ ಕಿ ಅದಾಲತ್‌ನಲ್ಲಿ 'ಗಡ್ಡದ ಹಿಂದಿನ ಕಥೆ ಬಿಚ್ಚಿಟ್ಟ ಸೂಪರ್ ಸ್ಟಾರ್ ಯಶ್! Video

BJYM: Tejasvi Surya ಸ್ಥಾನಕ್ಕೆ ನೂತನ ನೇಮಕ; ಯಾರು ಈ ಡಾ. ಹೇಮಾಂಗ್ ಜೋಶಿ?