ಹರ್ಭಜನ್ ಸಿಂಗ್ 
ಕ್ರಿಕೆಟ್

IPL 2026 ಪ್ಲೇಆಫ್ ರೇಸ್‌ನಿಂದ ಔಟ್: ಮುಂಬೈ ಇಂಡಿಯನ್ಸ್ ತಂಡದ ಬಾಡಿ ಲಾಂಗ್ವೇಜ್ ಬಗ್ಗೆ ಹರ್ಭಜನ್ ಸಿಂಗ್ ಕಿಡಿ

ಜಸ್ಪ್ರೀತ್ ಬುಮ್ರಾ ಯಾವುದೇ ಕ್ಷಣದಲ್ಲಿ ಪಂದ್ಯವನ್ನು ಬದಲಿಸಬಲ್ಲ ಬೌಲರ್. ಆದರೆ, ಅವರ ಮೇಲೆ ಹೆಚ್ಚು ಅವಲಂಬಿತರಾಗುವುದು ಸರಿಯಲ್ಲ. ಟ್ರೆಂಟ್ ಬೌಲ್ಟ್, ದೀಪಕ್ ಚಾಹರ್ ಮತ್ತು ಹಾರ್ದಿಕ್ ಪಾಂಡ್ಯರಂತಹ ತಂಡದಲ್ಲಿರುವ ಇತರ ಬೌಲರ್‌ಗಳಿಗೆ ಆತ್ಮವಿಶ್ವಾಸದ ಕೊರತೆಯಿದೆ.

ಐಪಿಎಲ್ 2026ರ ಪ್ಲೇಆಫ್ ರೇಸ್‌ನಿಂದ ಮುಂಬೈ ಇಂಡಿಯನ್ಸ್ (MI) ಹೊರಬಿದ್ದಿದೆ. ಕಳೆದ ಆರು ವರ್ಷಗಳಲ್ಲಿ ಮುಂಬೈ ಪ್ಲೇಆಫ್‌ಗೆ ಅರ್ಹತೆ ಪಡೆಯದಿರುವುದು ಇದು ನಾಲ್ಕನೇ ಬಾರಿ. ಐಪಿಎಲ್ 2026ರ ಅಭಿಯಾನದ ಹೀನಾಯ ಆರಂಭದ ನಂತರ, ಭಾನುವಾರ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಎರಡು ವಿಕೆಟ್‌ಗಳ ಸೋಲಿನಿಂದ ಮುಂಬೈ ಇಂಡಿಯನ್ಸ್ ಅಧಿಕೃತವಾಗಿ ಹೊರಬಿದ್ದಿದೆ. ಕೃನಾಲ್ ಪಾಂಡ್ಯ ಅವರ 73 ರನ್ ಮತ್ತು ಭುವನೇಶ್ವರ್ ಕುಮಾರ್ ಅವರ ಆಲ್‌ರೌಂಡ್ ವಿರೋಚಿತ ಪ್ರದರ್ಶನ (4/23, 7 ನಾಟ್ ಔಟ್) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎರಡು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಲು ಸಹಾಯ ಮಾಡಿತು. ಈ ಗೆಲುವಿನಿಂದ ಆರ್‌ಸಿಬಿ 11 ಪಂದ್ಯಗಳಿಂದ 14 ಅಂಕಗಳೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ರಾಜ್ ಬಾವಾ ಎಸೆದ ಅಂತಿಮ ಓವರ್‌ನಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ತಂಡಕ್ಕೆ 15 ರನ್‌ಗಳ ಅಗತ್ಯವಿತ್ತು. ಮಾನ್ಯತೆ ಪಡೆದ ಕೊನೆಯ ಬ್ಯಾಟ್ಸ್‌ಮನ್ ರೊಮಾರಿಯೊ ಶೆಫರ್ಡ್ (4) ಅವರನ್ನೂ ಕಳೆದುಕೊಂಡಿತು. ನಂತರ ಭುವನೇಶ್ವರ್ ಕುಮಾರ್ ಅವರ ಸಿಕ್ಸರ್ ನೆರವಿನಿಂದ ಆರ್‌ಸಿಬಿ ಗೆಲುವು ಸಾಧಿಸಿತು. ಅಂತಿಮವಾಗಿ ಮುಂಬೈನ 166/7 ಸ್ಕೋರ್‌ಗೆ ಉತ್ತರವಾಗಿ ಎಂಟು ವಿಕೆಟ್‌ ನಷ್ಟಕ್ಕೆ 167 ರನ್ ಗಳಿಸಿತು.

'ಮುಂಬೈ ಇಂಡಿಯನ್ಸ್ ತಂಡದ ದೇಹಭಾಷೆಯೂ ಸಹ ಪ್ರಮುಖ ಪಾತ್ರ ವಹಿಸುತ್ತದೆ, ನಾನು ಈ ಹಿಂದೆ ಎಂದಿಗೂ ಈ ರೀತಿ ನೋಡಿಲ್ಲ' ಎಂದು 30 ಪಂದ್ಯಗಳಲ್ಲಿ ಮುಂಬೈ ತಂಡದ ನಾಯಕತ್ವ ವಹಿಸಿದ್ದ ಹರ್ಭಜನ್ ಸಿಂಗ್ ಜಿಯೋಸ್ಟಾರ್‌ನಲ್ಲಿ ಹೇಳಿದರು.

'ನಾನು ಸುಮಾರು 10 ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದೆ. ನಾವು ಸತತ ಐದು ಪಂದ್ಯಗಳಲ್ಲಿ ಸೋತಾಗಲೂ, ನಮ್ಮ ಬಾಡಿ ಲಾಂಗ್ವೇಜ್ ಎಂದಿಗೂ ಈ ರೀತಿಯಲ್ಲಿ ಇರಲಿಲ್ಲ; ಹೋರಾಡುವ ಇಚ್ಛೆ ಯಾವಾಗಲೂ ಇತ್ತು. ಆದರೆ ಇದೀಗ, ತಂಡದಲ್ಲಿ ಆ ಆತ್ಮವಿಶ್ವಾಸ ಕಾಣೆಯಾಗಿದೆ' ಎಂದರು.

'ಸದ್ಯಕ್ಕೆ ಯಾರಾದರೂ ದಾರಿ ತೋರಿಸಬೇಕು ಮತ್ತು ಸೂಕ್ತ ನಿರ್ಧಾರ ಕೈಗೊಳ್ಳಬೇಕು. 'ಏನೇ ಆಗಿದ್ದರೂ ಅದು ಹಿಂದೆ ಆಗಿದೆ. ಇಲ್ಲಿಂದ ನಾವು ವಿಷಯಗಳನ್ನು ಹೇಗೆ ಬದಲಾಯಿಸುತ್ತೇವೆ ಎಂಬುದು ನಾವು ಫೀಲ್ಡಿಂಗ್‌ನಲ್ಲಿ ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ'. ಇದು ಒಬ್ಬ ವ್ಯಕ್ತಿಯಿಂದ ಪ್ರಾರಂಭವಾಗುತ್ತದೆ, ಅದು ನಾಯಕನಾಗಿ ಹೆಜ್ಜೆ ಹಾಕಬೇಕಾದ ಮತ್ತು ತಂಡವನ್ನು ಮುಂದೆ ಕೊಂಡೊಯ್ಯಬೇಕಾದ ವ್ಯಕ್ತಿ' ಎಂದು ಅವರು ಹೇಳಿದರು.

'ಜಸ್ಪ್ರೀತ್ ಬುಮ್ರಾ ಯಾವುದೇ ಕ್ಷಣದಲ್ಲಿ ಪಂದ್ಯವನ್ನು ಬದಲಿಸಬಲ್ಲ ಬೌಲರ್. ಆದರೆ, ಅವರ ಮೇಲೆ ಹೆಚ್ಚು ಅವಲಂಬಿತರಾಗುವುದು ಸರಿಯಲ್ಲ. ಟ್ರೆಂಟ್ ಬೌಲ್ಟ್, ದೀಪಕ್ ಚಾಹರ್ ಮತ್ತು ಹಾರ್ದಿಕ್ ಪಾಂಡ್ಯರಂತಹ ತಂಡದಲ್ಲಿರುವ ಇತರ ಬೌಲರ್‌ಗಳೆಲ್ಲರೂ ಆತ್ಮವಿಶ್ವಾಸದ ಕೊರತೆಯಿದೆ ಎಂದು ನಾನು ಭಾವಿಸುತ್ತೇನೆ' ಎಂದು ಹರ್ಭಜನ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿಸಿಟಿವಿ ನಾಪತ್ತೆ, SOP ನಿರ್ಲಕ್ಷ್ಯ, ಶೌಚಾಲಯದಲ್ಲಿ ಹಣ!: ರಾಮ ಮಂದಿರ ದೇಣಿಗೆ ಕುರಿತು ಎಸ್‌ಐಟಿ ತನಿಖೆಯಲ್ಲಿ 'ವಂಚನೆ'ಯ ಜಾಲ ಬಯಲು!

'ಅವ್ರು ನಿಜವಾದ ರಾಮ ಭಕ್ತರಲ್ಲ: ದೇಣಿಗೆ ವಿವಾದ, ಪ್ರಧಾನಿ ಮೋದಿಯ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್!

'ಲವರ್ ಅಲ್ಲ.. ಬಾಂಬರ್..'; ಕಾರಿನಲ್ಲೇ ಯುವತಿಗೆ ಚಾಕು ಇರಿತ, ಪೆಟ್ರೋಲ್ ಬಾಂಬ್ ಸ್ಫೋಟಿಸಿದ ಭಗ್ನ ಪ್ರೇಮಿ, Video

IPL: ರಜತ್ ಪಾಟಿದಾರ್ ಬಳಿಕ RCB ನಾಯಕ ಯಾರು? ಭಾರೀ ಸುಳಿವು ನೀಡಿದ ಫ್ರಾಂಚೈಸಿ, ಕನ್ನಡಿಗರು ಫುಲ್ ಖುಷ್!

ಭಾರತ-ಅಮೆರಿಕ ಬಾಂಧವ್ಯ ಮತ್ತಷ್ಟು ಗಟ್ಟಿ; ಶೀಘ್ರದಲ್ಲೇ ಮಹತ್ವದ ವ್ಯಾಪಾರ ಒಪ್ಪಂದಕ್ಕೆ ಸಹಿ, 2027ರಲ್ಲಿ ಟ್ರಂಪ್ ಭಾರತಕ್ಕೆ..!