ಪಂಜಾಬ್ ವಿರುದ್ಧ ಗೆದ್ದು ಟ್ರೋಲ್ ಮಾಡಿದ ಆರ್ ಸಿಬಿ 
ಕ್ರಿಕೆಟ್

IPL 2026: 'It’s okay ಮತ್ತೆ ಈ ರೀತಿ ಮಾಡ್ಬೇಡ': 49 ಎಂದು ಗೇಲಿ ಮಾಡಿದ್ದ ಪಂಜಾಬ್ ಗೆ ಬಟ್ಟೆ ಸುತ್ತಿ ಹೊಡೆದ RCB

ಬೆಂಗಳೂರು ತಂಡ ನೀಡಿದ್ದ 223 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಪಂಜಾಬ್ ತಂಡ 20 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿ 23 ರನ್ ಗಳ ಅಂತರದ ಹೀನಾಯ ಸೋಲುಕಂಡಿತು.

ಧರ್ಮಶಾಲಾ: ಐಪಿಎಲ್ 2026 ಟೂರ್ನಿಯಲ್ಲಿ ಇಂದಿನ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 23 ರನ್ ಗಳ ಅಂತರದಲ್ಲಿ ಮಣಿಸಿದ್ದು ಮಾತ್ರವಲ್ಲದೇ ಈ ಗೆಲುವಿನ ಬಳಿಕ ಪಂಜಾಬ್ ತಂಡವನ್ನು ಸಾಮಾಜಿಕ ಜಾಲತಾಣದಲ್ಲಿ ಭೀಕರ ಟ್ರೋಲ್ ಮಾಡಲಾಗಿದೆ.

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆದ ಲೀಗ್ ಹಂತದ ಪಂದ್ಯದಲ್ಲಿ ಬೆಂಗಳೂರು ತಂಡ ಪಂಜಾಬ್ ತಂಡವನ್ನು 23 ರನ್ ಗಳ ಅಂತರದಲ್ಲಿ ಮಣಿಸಿ ಐಪಿಎಲ್ 2026 ಟೂರ್ನಿಯ ಪ್ಲೇಆಫ್ ಗೆ ಲಗ್ಗೆ ಇಟ್ಟಿದೆ.

ಬೆಂಗಳೂರು ತಂಡ ನೀಡಿದ್ದ 223 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಪಂಜಾಬ್ ತಂಡ 20 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿ 23 ರನ್ ಗಳ ಅಂತರದ ಹೀನಾಯ ಸೋಲುಕಂಡಿತು.

ಪಂಜಾಬ್ ಪರ ಕೋಪರ್ ಕೊನೋಲಿ (37), ಸೂರ್ಯಾಂಷ್ ಷೆಡ್ಗೆ (35), ಮಾರ್ಕಸ್ ಸ್ಟಾಯ್ನಿಸ್ (37) ಮತ್ತು ಶಶಾಂಕ್ ಸಿಂಗ್ (56) ಗೆಲುವಿಗಾಗಿ ಶತಪ್ರಯತ್ನ ಪಟ್ಟರಾದರೂ ಪಂಜಾಬ್ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ.

ಪ್ಲೇಆಫ್ ಹಾದಿ ದುರ್ಗಮ

ಇಂದಿನ ಗೆಲುವಿನ ಬಳಿಕ ಆರ್​ಸಿಬಿ ಅಂಕಗಳಿಗೆ 18ಕ್ಕೆ ಏರಿಕೆಯಾಗಿದ್ದು, ಮಾತ್ರವಲ್ಲದೇ ಮೊಟ್ಟ ಮೊದಲ ತಂಡವಾಗಿ ಪ್ಲೇಆಫ್​ಗೆ ಅರ್ಹತೆ ಪಡೆದಿದೆ. ಇತ್ತ ಆರ್​ಸಿಬಿ ವಿರುದ್ಧ ಸೋತ ಪಂಜಾಬ್ ಪ್ಲೇಆಫ್‌ ರೇಸ್​ನಿಂದ ಹೊರಬೀಳುವ ಆತಂಕದಲ್ಲಿದೆ.

ಇತ್ತ ಕೊನೆಯ ಲೀಗ್ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಆರ್‌ಸಿಬಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಖಚಿತವಾಗಲಿದೆ. ಸೋತರೂ ಇತರ ಪಂದ್ಯಗಳ ಫಲಿತಾಂಶ ಅನುಕೂಲಕರವಾಗಿದ್ದರೆ ಟಾಪ್-2 ಸ್ಥಾನ ಉಳಿಸಿಕೊಳ್ಳುವ ಅವಕಾಶ ತಂಡಕ್ಕಿದೆ.

13 ಪಂದ್ಯಗಳಲ್ಲಿ 6 ಗೆಲುವುಗಳೊಂದಿಗೆ 13 ಅಂಕಗಳನ್ನು ಹೊಂದಿರುವ ಪಂಜಾಬ್ ಕಿಂಗ್ಸ್ ಇದೀಗ ಐಪಿಎಲ್ 2026 ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಪ್ಲೇಆಫ್ ಆಸೆಯನ್ನು ಜೀವಂತವಾಗಿಡಲು ಪಂಜಾಬ್ ಕಿಂಗ್ಸ್ ತಮ್ಮ ಮುಂದಿನ ಪಂದ್ಯವನ್ನು ಕಡ್ಡಾಯವಾಗಿ ಗೆಲ್ಲಬೇಕಾಗಿದೆ.

ಒಂದು ವೇಳೆ ಗೆದ್ದರೂ ಪ್ಲೇಆಫ್ ಪ್ರವೇಶ ಖಚಿತವಾಗುವುದಿಲ್ಲ. ಇತರೆ ತಂಡಗಳ ಪ್ರದರ್ಶನದ ಮೇಲೆ ಪಂಜಾಬ್ ಪ್ಲೇಆಫ್ ಭವಿಷ್ಯ ನಿಂತಿದೆ. ಆ ಮೂಲಕ ಕಳೆದ ಐಪಿಎಲ್ 2025ರ ರನ್ನರ್-ಅಪ್ ತಂಡಕ್ಕೆ ಈಗ ಪ್ಲೇಆಫ್ ಸಾಧ್ಯತೆಗಳು ಬಹಳ ಕ್ಷೀಣವಾಗಿವೆ.

ಅಪಮಾನದ ಸೇಡು ತೀರಿಸಿಕೊಂಡ ಆರ್ ಸಿಬಿ

ಈ ಸೇಡಿನ ಸಮರದಲ್ಲಿ ಮೇಲುಗೈ ಸಾಧಿಸಿದ ಆರ್​ಸಿಬಿ, ಪಂಜಾಬ್ ತಂಡವನ್ನು ಪಂದ್ಯದಲ್ಲಿ ಮಣಿಸಿದ್ದು ಮಾತ್ರವೇ ಅಲ್ಲದೇ ಸಾಮಾಜಿಕ ಜಾಲತಾಣದಲ್ಲೂ ಭರ್ಜರಿಯಾಗಿ ಟ್ರೋಲ್ ಮಾಡಿದೆ.

It’s okay ಮತ್ತೆ ಈ ರೀತಿ ಮಾಡ್ಬೇಡ

ಏಪ್ರಿಲ್ 28 ರಂದು ಪಂಜಾಬ್ ಮಾಡಿದ್ದ ಅವಮಾನಕರ ಪೋಸ್ಟ್​ಗೆ ತಿರುಗೇಟು ನೀಡಿರುವ ಆರ್​ಸಿಬಿ, ತನ್ನ ಎಕ್ಸ್​ ಖಾತೆಯಲ್ಲಿ ಎರಡು ಪೋಸ್ಟ್​ಗಳನ್ನು ಹಂಚಿಕೊಂಡಿದೆ. ಮೊದಲನೆಯ ಪೋಸ್ಟ್​ನಲ್ಲಿ ‘6 ಓವರ್​ಗಳಲ್ಲಿ 49 ರನ್​ ನೀಡಿ 3 ವಿಕೆಟ್ ಕಿತ್ತಿದ್ದೇವೆ’ ಎಂಬುದನ್ನು ತೊರಿಸಿಲಾಗಿದೆ.

ಹಾಗೆಯೇ ಎರಡನೇ ಪೋಸ್ಟ್​ನಲ್ಲಿ ‘ಪಂಜಾಬ್ ವಿರುದ್ಧ 23 ರನ್​ಗಳಿಂದ ಗೆದ್ದಿದ್ದೇವೆ. ಆಗಿದ್ದು ಆಯ್ತು, ಮತ್ತೊಮ್ಮೆ ಹೀಗೆ ಮಾಡಬೇಡಿ’ ಎಂದು ಬರೆದು ಪೋಸ್ಟ್ ಮಾಡುವ ಮೂಲಕ ಪಂಜಾಬ್ ತಂಡಕ್ಕೆ ಬಟ್ಟೆ ಸುತ್ತಿ ಭಾರಿಸಿದೆ.

ಆರ್ ಸಿಬಿ ಕಳಪೆ ಮೊತ್ತ

ಐಪಿಎಲ್‌ನಲ್ಲಿ ಆರ್​ಸಿಬಿ ಅತ್ಯಂತ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ. 2017 ರಲ್ಲಿ ನಡೆದಿದ್ದ ಐಪಿಎಲ್ ಪಂದ್ಯದಲ್ಲಿ ಕೆಕೆಆರ್ ನೀಡಿದ್ದ 137 ರನ್​ಗಳ ಗುರಿ ಬೆನ್ನಟ್ಟಿದ್ದ ಆರ್​ಸಿಬಿ 49 ರನ್​ಗಳಿಗೆ ಆಲೌಟ್ ಆಗಿ ಅವಮಾನಕರ ಸೋಲು ಕಂಡಿತ್ತು. ಅಂದಿನ ಕಹಿ ಘಟನೆಯನ್ನು ಆರ್​ಸಿಬಿಗೆ ಮತ್ತೆ ನೆನೆಪಿಸುವ ಕೆಲಸವನ್ನು ಪಂಜಾಬ್ ಮಾಡಿತ್ತು.

ಇನ್ನೊಂದೆಡೆ, ಆರ್‌ಸಿಬಿ ಇದೀಗ ಟಾಪ್-2 ಸ್ಥಾನ ಗುರಿಯಾಗಿಸಿಕೊಂಡಿದೆ. ಐಪಿಎಲ್ 2026 ಪ್ಲೇಆಫ್ ಪ್ರವೇಶಿಸಿದ ಮೊದಲ ತಂಡವಾಗಿರುವ ಬೆಂಗಳೂರು ತಂಡ 13 ಪಂದ್ಯಗಳಲ್ಲಿ 9 ಗೆಲುವುಗಳೊಂದಿಗೆ 18 ಅಂಕಗಳನ್ನು ಹೊಂದಿದೆ.

ಏಪ್ರಿಲ್ 28 ರಂದು ನಡೆದಿದ್ದ ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್ ಮೊದಲ 4.3 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು 49 ರನ್ ಕಲೆಹಾಕಿತ್ತು. ಈ ಸ್ಕೋರ್ ಕಾರ್ಡ್​ ಅನ್ನು ಪಂಜಾಬ್ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿತ್ತು.

ಈ ಪೋಸ್ಟ್ ಮೂಲಕ ಪಂಜಾಬ್, ಆರ್​ಸಿಬಿ ತಂಡವನ್ನು ಗೇಲಿ ಮಾಡುವ ಕೆಲಸ ಮಾಡಿತ್ತು. ಇದೇ ಪೋಸ್ಟ್ ಆರ್ ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಪಂಜಾಬ್​ ಮಾಡಿದ್ದ ಪೋಸ್ಟ್​ ಆರ್​ಸಿಬಿ ಫ್ರಾಂಚೈಸಿ ಹಾಗೂ ಅದರ ಅಭಿಮಾನಿಗಳನ್ನು ಕೆರಳಿಸಿತ್ತು.

ಸತತ ಸೋಲು

ಅಚ್ಚರಿ ಎಂದರೆ ಟೂರ್ನಿ ಅಲ್ಲಿಯವರೆಗೂ ಅಜೇಯವಾಗಿ ಉಳಿದಿದ್ದ ಪಂಜಾಬ್ ಕಿಂಗ್ಸ್ ತಂಡ ಈ ಪೋಸ್ಟ್ ಬಳಿಕ ಸೋಲುಗಳ ಸರಮಾಲೆಯನ್ನೇ ಹಾಕಿಕೊಂಡಿತು. ಗೆಲುವಿನ ಅಮಲಿನಲ್ಲಿ ತೇಲುತ್ತಿದ್ದ ಪಂಜಾಬ್, ಈ ಪೋಸ್ಟ್ ಬಳಿಕ ಸತತ ಆರು ಸೋಲುಗಳನ್ನು ಕಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶಾಂತಿ ಒಪ್ಪಂದಕ್ಕೆ ಒಪ್ಪದಿದ್ದರೆ ಏನೂ ಉಳಿಯಲ್ಲ, ಯುರೇನಿಯಂ ಕೊಟ್ಬಿಡಿ; ಇರಾನ್ ಗೆ ಮತ್ತೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ಯುರೇನಿಯಂ ಹಸ್ತಾಂತರ, ಪರಮಾಣು ನಿರ್ಬಂಧ: 5 ಷರತ್ತುಗಳನ್ನು ಇರಾನ್ ಮುಂದಿಟ್ಟ ಅಮೆರಿಕ!

IPL 2026: ಕೊನೆಯ ಓವರ್ ನಲ್ಲಿ ಭರ್ಜರಿ ಜಯ, ಪ್ಲೇಆಫ್ ಗೆ RCB ಲಗ್ಗೆ; ರೇಸ್ ನಿಂದ PBKS ಔಟ್, CSK ಆಸೆ ಜೀವಂತ!

Assam: ಸಫಾರಿ ಜೀಪ್ ಮೇಲೆ Rhino ದಾಳಿ, ಒಂದೇ ಹೊಡೆತಕ್ಕೆ ಟೈರ್ ಛಿದ್ರ, ವಾಹನವನ್ನೇ ಉರುಳಿಸಲು ಯತ್ನ, Video Viral

IPL 2026: RCB vs PBKS ಪಂದ್ಯದಲ್ಲಿ ಎರಡು ದೊಡ್ಡ ದಾಖಲೆ ನಿರ್ಮಿಸಿದ Virat Kohli

SCROLL FOR NEXT