ವಿರಾಟ್ ಕೊಹ್ಲಿ 
ಕ್ರಿಕೆಟ್

'ಇಡೀ ಜಗತ್ತು ಬೇಕಿದ್ದರೆ ಅನ್‌ಫಿಟ್ ಆಗಬಹುದು, ಆದರೆ ವಿರಾಟ್ ಕೊಹ್ಲಿ ಸಾಧ್ಯವಿಲ್ಲ': ಭಾರತದ ಮಾಜಿ ಆಟಗಾರ ಮದನ್ ಲಾಲ್

ಅಫ್ಘಾನಿಸ್ತಾನ ವಿರುದ್ಧ ಜೂನ್ 6 ರಂದು ಏಕೈಕ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ನಂತರ ಜೂನ್ 14 ರಂದು ಧರ್ಮಶಾಲಾದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ.

ಭಾರತದ ಮಾಜಿ ಕ್ರಿಕೆಟಿಗ ಮದನ್ ಲಾಲ್ ಮಂಗಳವಾರ ಭಾರತದ ಬ್ಯಾಟಿಂಗ್ ಐಕಾನ್ ವಿರಾಟ್ ಕೊಹ್ಲಿ ಅವರ ಅಸಾಧಾರಣ ಫಿಟ್ನೆಸ್ ಅನ್ನು ಶ್ಲಾಘಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್‌ಗಳೊಂದಿಗೆ ನಿರಂತರವಾಗಿ ಸ್ಟ್ರೈಕ್ ಅನ್ನು ತಿರುಗಿಸುವ ಅವರ ಸಾಮರ್ಥ್ಯವನ್ನು ಹೊಗಳಿದ್ದಾರೆ. ಕೊಹ್ಲಿ ಅವರ ಫಿಟ್ನೆಸ್ ಇತರ ಆಟಗಾರರಿಗೆ ಮಾದರಿಯಾಗಿದೆ ಮತ್ತು ನಿರಂತರ ಆಟದ ಮೂಲಕ ಸ್ಥಿರತೆಯನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಒತ್ತಿ ಹೇಳಿದರು.

'ನೋಡಿ, ಇಡೀ ಜಗತ್ತು ಬೇಕಿಕ್ಕದೆ ಅನ್‌ಫಿಟ್ ಆಗಬಹುದು, ಆದರೆ ವಿರಾಟ್ ಆಗುವುದಿಲ್ಲ. ಟಿ20 ಕ್ರಿಕೆಟ್‌ನಲ್ಲಿ ಅವರನ್ನು ನೋಡಿದರೆ, ಅವರು ಸಿಂಗಲ್ಸ್ ಮತ್ತು ಡಬಲ್ಸ್ ಮೂಲಕ ಹೆಚ್ಚು ರನ್ ಗಳಿಸುತ್ತಾರೆ. ಆದ್ದರಿಂದ ಅವರ ಫಿಟ್ನೆಸ್ ಮಟ್ಟ ಅದ್ಭುತವಾಗಿದೆ ಮತ್ತು ಇತರರಿಗೆ ಇದೊಂದು ಪಾಠವಾಗಿದೆ. ಆದರೆ, ನಿರಂತರವಾಗಿ ಆಡುವುದು ಬಹಳ ಮುಖ್ಯ' ಎಂದು ಮದನ್ ಲಾಲ್ ಎಎನ್‌ಐಗೆ ತಿಳಿಸಿದರು.

ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ನೀಲಿ ಜೆರ್ಸಿಯಲ್ಲಿ ಮತ್ತೆ ಭಾರತದ ಪರ ಕಾಣಿಸಿಕೊಳ್ಳಲಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ತಂಡವನ್ನು ಪ್ರಕಟ ಮಾಡಿದೆ.

ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರ ಸಮ್ಮುಖದಲ್ಲಿ, ಅಧ್ಯಕ್ಷ ಅಜಿತ್ ಅಗರ್ಕರ್ ನೇತೃತ್ವದ ಪುರುಷರ ಆಯ್ಕೆ ಸಮಿತಿಯು ಶಿವ ಸುಂದರ್ ದಾಸ್, ಅಜಯ್ ರಾತ್ರ, ಆರ್.ಪಿ. ಸಿಂಗ್ ಮತ್ತು ಪ್ರಗ್ಯಾನ್ ಓಜಾ ಅವರೊಂದಿಗೆ ತಂಡವನ್ನು ಪ್ರಕಟಿಸಿತು.

ಜೂನ್ 6 ರಂದು ಏಕೈಕ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ನಂತರ ಜೂನ್ 14 ರಂದು ಧರ್ಮಶಾಲಾದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಎರಡನೇ ಏಕದಿನ ಪಂದ್ಯ ಜೂನ್ 17 ರಂದು ಲಕ್ನೋದಲ್ಲಿ ನಡೆಯಲಿದ್ದು, ಜೂನ್ 20 ರಂದು ಚೆನ್ನೈನಲ್ಲಿ ಸರಣಿ ಮುಕ್ತಾಯಗೊಳ್ಳಲಿದೆ.

ಅಫ್ಘಾನಿಸ್ತಾನ ವಿರುದ್ಧ ಭಾರತದ ಏಕದಿನ ತಂಡ

ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪ ನಾಯಕ), ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಅರ್ಶದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್, ಗುರ್ನೂರ್ ಬ್ರಾರ್, ಹರ್ಷ್ ದುಬೆ.

ಅಮೆರಿಕಾ ಜೊತೆ ಒಪ್ಪಂದಕ್ಕೆ ಇರಾನ್‌ ಕಾತರ, ಶೀಘ್ರದಲ್ಲೇ ಯುದ್ಧ ಅಂತ್ಯ: ತೈಲ ಬೆಲೆ ಭಾರೀ ಕುಸಿತ; ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಇಟಲಿಯಲ್ಲಿ ಪ್ರಧಾನಿ ಮೋದಿ: “ವೆಲ್‌ಕಮ್ ಟು ರೋಮ್ ಮೈ ಫ್ರೆಂಡ್” ಎಂದು ಆತ್ಮೀಯ ಸ್ವಾಗತ ಕೋರಿದ ಜಾರ್ಜಿಯಾ ಮೆಲೋನಿ..!

Operation Epic Fury: ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕಾಗೆ ಮಹಾಘಾತಕ: F-35 ಸೇರಿ 42 ಯುದ್ಧ ವಿಮಾನ, ಡ್ರೋನ್‌ಗಳಿಗೆ ಹಾನಿ..!

ಪ್ರಧಾನಿ ಮೋದಿಯನ್ನು 'ಹಾವಾಡಿಗ'ನಂತೆ ಬಿಂಬಿಸಿ ವಿಕೃತಿ: ಭಾರತವನ್ನು ಹೀಯಾಳಿಸಿದ ನಾರ್ವೆ ಪತ್ರಿಕೆ; ನೆಟ್ಟಿಗರು ತೀವ್ರ ಕಿಡಿ

Bangladesh ಸರ್ಕಾರಿ ಕಚೇರಿಯಲ್ಲಿ ಭಾರತೀಯ ಅಧಿಕಾರಿ ನಿಗೂಢ ಸಾವು, ತನಿಖೆ ಆರಂಭ

SCROLL FOR NEXT