ಮುಂಬೈ ಇಂಡಿಯನ್ಸ್ 
ಕ್ರಿಕೆಟ್

'ಮುಂಬೈ ಇಂಡಿಯನ್ಸ್ ಅಡುಗೆಮನೆಯಲ್ಲಿ ತುಂಬಾ ಮಂದಿ ಇದ್ದಾರೆ, ಒಬ್ಬ ಬಾಣಸಿಗನನ್ನು ಹೊರಗೆ ಕರೆದೊಯ್ಯುತ್ತೇನೆ': ಇಂಗ್ಲೆಂಡ್‌ ಮಾಜಿ ನಾಯಕ

ಹಾರ್ದಿಕ್ ಅವರು ಐಪಿಎಲ್ 2026ರಲ್ಲಿ ಒಂಬತ್ತು ಪಂದ್ಯಗಳಲ್ಲಿ 128.35 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 172 ರನ್ ಗಳಿಸಿದ್ದಾರೆ ಮತ್ತು ಕೇವಲ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದಾರೆ.

ನಾಯಕನಾಗಿ ಮುಂಬೈ ಇಂಡಿಯನ್ಸ್ (MI) ಜೊತೆ ಹಾರ್ದಿಕ್ ಪಾಂಡ್ಯ ಅವರ ಎರಡನೇ ಅವಧಿಯು ಯೋಜಿಸಿದಂತೆ ನಡೆದಿಲ್ಲ. 2024ರ ಆವೃತ್ತಿಯಲ್ಲಿ ಫ್ರಾಂಚೈಸಿಗೆ ಮರಳಿದ ನಂತರ ಮತ್ತು ರೋಹಿತ್ ಶರ್ಮಾ ಅವರನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಿ, ನಾಯಕತ್ವ ವಹಿಸಿಕೊಂಡ ನಂತರ ಹಾರ್ದಿಕ್ ಮುಂಬೈ ತಂಡವನ್ನು ಮೂರು ವರ್ಷಗಳಲ್ಲಿ ಕೇವಲ ಒಂದು ಬಾರಿ ಪ್ಲೇಆಫ್‌ಗೆ ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. 2024ರಲ್ಲಿ, ಮುಂಬೈ ಅಂಕಪಟ್ಟಿಯಲ್ಲಿ ಕೊನೆಯಲ್ಲಿತ್ತು. 2026ರ ಐಪಿಎಲ್‌ನಲ್ಲಿ ಕೂಡ ಒಂಬತ್ತನೇ ಸ್ಥಾನದಲ್ಲಿದೆ. ಇಂಗ್ಲೆಂಡ್‌ ಮಾಜಿ ನಾಯಕ ಮೈಕೆಲ್ ವಾಘನ್, ಮುಂಬೈ ಮತ್ತು ಹಾರ್ದಿಕ್ ಪಾಂಡ್ಯ ಬೇರ್ಪಡಬೇಕು ಮತ್ತು ಮತ್ತೊಂದು ತಂಡಕ್ಕೆ ಟ್ರೇಡಿಂಗ್ ಮಾಡಿಕೊಳ್ಳಬೇಕು ಎಂದಿದ್ದಾರೆ.

ಮುಂಬರುವ ಹರಾಜಿಗೂ ಮೊದಲು ಹಾರ್ದಿಕ್ ಪಾಂಡ್ಯ ಅವರ ವಿಚಾರದಲ್ಲಿ ಮುಂಬೈ ಇಂಡಿಯನ್ಸ್ ತಂಡ ಏನು ಮಾಡಬೇಕು ಎಂದು ಕೇಳಿದಾಗ, ಯಾವುದೇ ಹಿಂಜರಿಕೆಯಿಲ್ಲದೆ 'ಬಿಡುಗಡೆ' ಮಾಡಬೇಕು ಎಂದು ವಾಘನ್ ಕ್ರಿಕ್‌ಬಜ್‌ನಲ್ಲಿ ಹೇಳಿದರು.

'ನಾನು ಸಾಕಷ್ಟು ನೋಡಿದ್ದೇನೆ. ಅವರನ್ನು ಮರಳಿ ಕರೆತರುವ ಕ್ರಮ ಕೆಲಸ ಮಾಡಿರುವುದನ್ನು ನಾನು ನಿಜವಾಗಿಯೂ ನೋಡಲಿಲ್ಲ. ಅವರು ಗುಜರಾತ್ ಟೈಟಾನ್ಸ್‌ನೊಂದಿಗೆ ಉತ್ತಮ ಕೆಲಸ ಮಾಡುತ್ತಿದ್ದರು. ವಿಭಿನ್ನ ಆಟಗಾರರು ಮತ್ತು ವಿಭಿನ್ನ ತರಬೇತುದಾರರೊಂದಿಗೆ ಪ್ರಶಸ್ತಿಯನ್ನು ಗೆದ್ದರು. ಮುಂಬೈ ಅಡುಗೆಮನೆಯಲ್ಲಿ ತುಂಬಾ ಅಡುಗೆಯವರು ಇದ್ದಾರೆ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ನಾನು ಒಬ್ಬ ಬಾಣಸಿಗನನ್ನು ಹೊರಗೆ ಕರೆದೊಯ್ಯುತ್ತೇನೆ' ಎಂದು ವಾಘನ್ ವಿವರಿಸಿದರು.

ಆದಾಗ್ಯೂ, ಮುಂಬೈ ಇಂಡಿಯನ್ಸ್ ಒಂದು ದಿಟ್ಟ ಟ್ರೇಡ್ ಡೀಲ್ ಅನ್ನು ಪ್ರಯತ್ನಿಸುವುದನ್ನು ಪರಿಗಣಿಸಬಹುದು. ಹಾರ್ದಿಕ್ ಪಾಂಡ್ಯ ಅವರನ್ನು ಕ್ಯಾಮರೂನ್ ಗ್ರೀನ್ ಜೊತೆ ಬದಲಿಸಬಹುದು ಎಂದು ವಾಘನ್ ಸಲಹೆ ನೀಡಿದರು.

ಐಪಿಎಲ್ 2024ಕ್ಕೂ ಮೊದಲು, ಮುಂಬೈ ಕ್ಯಾಮರೂನ್ ಗ್ರೀನ್ ಅನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಗೆ ಟ್ರೇಡಿಂಗ್ ಮಾಡಿಕೊಂಡಿತು ಮತ್ತು ಗುಜರಾತ್ ಟೈಟಾನ್ಸ್ (GT) ನಿಂದ ಹಾರ್ದಿಕ್ ಅವರನ್ನು ಕರೆತಂದಿತು. ಆಗ ಅವರು ರೋಹಿತ್ ಅವರ ಉತ್ತರಾಧಿಕಾರಿಯಾಗಿ ಕಾಣಿಸಿಕೊಂಡರು.

ಕೆಕೆಆರ್ ತಂಡಕ್ಕೆ ನಾಯಕನ ಅವಶ್ಯಕತೆ ಇರುವುದರಿಂದ ಗ್ರೀನ್ ಮತ್ತು ಹಾರ್ದಿಕ್ ನಡುವಿನ ಬದಲಾವಣೆ ಸಾಧ್ಯ ಎಂದು ವಾಘನ್ ಭಾವಿಸಿದ್ದರು.

'ಅವರು ನಾಯಕನಾಗಿ ಮುಂದುವರಿಯಲು ಬಯಸಿದರೆ, ಅವರು ಹೊಸ ತಂಡದೊಂದಿಗೆ ಇರುವುದು ಉತ್ತಮ. ಬಹುಶಃ ಅದು ಕೆಕೆಆರ್ ಆಗಿರಬಹುದು. ಬಹುಶಃ ಅವರು ನಾಯಕನನ್ನು ಹುಡುಕಲಿದ್ದಾರೆ. ಅದಕ್ಕಾಗಿಯೇ, ಕ್ಯಾಮರೂನ್ ಮುಂಬೈಗೆ ಬರುತ್ತಾರೆ, ಬೇರೊಬ್ಬರು ಮುಂಬೈಗೆ ನಾಯಕತ್ವ ವಹಿಸುತ್ತಾರೆ. ಹಾರ್ದಿಕ್ ಕೆಕೆಆರ್‌ಗೆ ಹೋಗುತ್ತಾರೆ, ನಾಯಕನಾಗಿ ಅವರಿಗೆ ಹೊಸ ಆರಂಭ ಅದಾಗುತ್ತದೆ' ಎಂದರು.

ಹಾರ್ದಿಕ್ ಅವರು ಐಪಿಎಲ್ 2026ರಲ್ಲಿ ಒಂಬತ್ತು ಪಂದ್ಯಗಳಲ್ಲಿ 128.35 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 172 ರನ್ ಗಳಿಸಿದ್ದಾರೆ ಮತ್ತು ಕೇವಲ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದಾರೆ.

ಮತ್ತೊಂದೆಡೆ, ಗ್ರೀನ್ ನಿಧಾನವಾಗಿ ಆರಂಭಿಸಿದರು ಆದರೆ ಆಲ್‌ರೌಂಡ್ ಪ್ರದರ್ಶನದೊಂದಿಗೆ ತಮ್ಮ 25.20 ಕೋಟಿ ರೂ. ಬೆಲೆಯನ್ನು ಸ್ಥಿರವಾಗಿ ಸಮರ್ಥಿಸಿಕೊಳ್ಳಲು ಪ್ರಾರಂಭಿಸಿದ್ದಾರೆ. 26 ವರ್ಷದ ಅವರು 13 ಪಂದ್ಯಗಳಲ್ಲಿ 146.78 ಸ್ಟ್ರೈಕ್ ರೇಟ್‌ನಲ್ಲಿ 320 ರನ್ ಗಳಿಸಿದ್ದಾರೆ ಮತ್ತು ಏಳು ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಜಯ್ ಸಂಪುಟ ವಿಸ್ತರಣೆ: 21 ಟಿವಿಕೆ, ಇಬ್ಬರು ಕಾಂಗ್ರೆಸ್ ಶಾಸಕರು ಸಚಿವರಾಗಿ ಪ್ರಮಾಣ; AIADMK ಹೊರಗಿಟ್ಟ ದಳಪತಿ

ಪ್ರಮಾಣ ವಚನ ಸ್ವೀಕಾರದ ವೇಳೆ ಕಾಂಗ್ರೆಸ್ ನಾಯಕನಿಗೆ ತಿದ್ದಿ, ಬುದ್ಧಿ ಹೇಳಿದ ಗವರ್ನರ್; ನೂತನ ಸಚಿವ ಮಾಡಿದ ತಪ್ಪೇನು?

ಹಾರ್ಮುಜ್ ಜಲಸಂಧಿ ಮೇಲೆ ಮತ್ತಷ್ಟು ಹಿಡಿತ ಸಾಧಿಸಲು ಗಡಿಗಳನ್ನು ಹೊಸದಾಗಿ ಗುರುತಿಸಿದ ಇರಾನ್!

ಇರಾನ್ ವಿರುದ್ಧದ ಯುದ್ಧ ತಂತ್ರದಲ್ಲಿ ಬಿರುಕು; ಇಸ್ರೇಲ್-ಅಮೆರಿಕಾ ನಡುವೆ ಭಿನ್ನಮತ ಸ್ಫೋಟ, ಟ್ರಂಪ್ ರಾಜತಾಂತ್ರಿಕ ನಡೆಗೆ ನೆತನ್ಯಾಹು ಕೆಂಡಾಮಂಡಲ..!

ಧರ್ಮ, ಕಾನೂನು, ನೈತಿಕತೆ ಇಲ್ಲದ, ಸ್ವಂತ ಜನರ ಮೇಲೆಯೇ ಬಾಂಬ್ ಹಾಕುವ ದೇಶ: ವಿಶ್ವಸಂಸ್ಥೆಯಲ್ಲಿ ಪಾಕ್ ವಿರುದ್ಧ ಗುಡುಗಿದ ಭಾರತ..!

SCROLL FOR NEXT