ಸಾಯಿ ಸುದರ್ಶನ್ ಮತ್ತು ಶುಭ್ ಮನ್ ಗಿಲ್ ಜೋಡಿ 
ಕ್ರಿಕೆಟ್

IPL 2026: ಕೊನೆಗೂ 13 ವರ್ಷಗಳ ಹಳೆಯ Chris Gayle ದಾಖಲೆ ಮುರಿದ Sai Sudharsan

ಇಂದು ಗುಜರಾತ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಗುಜರಾತ್ ಟೈಟನ್ಸ್ 89 ರನ್ ಗಳ ಅಂತರದಲ್ಲಿ ಭರ್ಜರಿಯಾಗಿ ಸೋಲಿಸಿತು.

ಅಹ್ಮದಾಬಾದ್: ಐಪಿಎಲ್ ಟೂರ್ನಿಯ ಇಂದಿನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಗುಜರಾತ್ ಟೈಟನ್ಸ್ ಸ್ಫೋಟಕ ಬ್ಯಾಟರ್ ಸಾಯಿಸುದರ್ಶನ್ 13 ವರ್ಷಗಳ ಹಳೆಯ ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್ (Chris Gayle) ದಾಖಲೆ ಮುರಿದಿದ್ದಾರೆ.

ಇಂದು ಗುಜರಾತ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಗುಜರಾತ್ ಟೈಟನ್ಸ್ 89 ರನ್ ಗಳ ಅಂತರದಲ್ಲಿ ಭರ್ಜರಿಯಾಗಿ ಸೋಲಿಸಿತು. ತಂಡದ ಗೆಲುವಿನಲ್ಲಿ ಸಾಯಿ ಸುದರ್ಶನ್ ಪಾತ್ರ ಪ್ರಮುಖವಾಗಿತ್ತು. ಗುಜರಾತ್ ಪರ ಆರಂಭಿಕರಾಗಿ ಕಣಕ್ಕಿಳಿದ ಸಾಯಿಸುದರ್ಶನ್ ನಾಯಕ ಶುಭ್ ಮನ್ ಗಿಲ್ ಜೊತೆಗೂಡಿ ಭರ್ಜರಿ ಬ್ಯಾಟಿಂಗ್ ನಡೆಸಿದರು.

ಮೊದಲ ವಿಕೆಟ್ ಗೆ ಈ ಜೋಡಿ 125 ರನ್ ಗಳ ಅಮೋಘ ಜೊತೆಯಾಟವಾಡಿತು. ಈ ಪೈಕಿ ಗಿಲ್ 65 ರನ್ ಗಳಿಸಿ ಔಟಾದರೆ ಸಾಯಿಸುದರ್ಶನ್ 84 ರನ್ ಗಳಿಸಿ ಔಟಾದರು. ಸಾಯಿ ಸುದರ್ಶನ್ ಕೇವಲ 53 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 7 ಬೌಂಡರಿ ಸಹಿತ 84 ರನ್ ಗಳಿಸಿದರು. ಈ ಸ್ಫೋಟಕ ಬ್ಯಾಟಿಂಗ್ ನೊಂದಿಗೆ ಸಾಯಿ ಸುದರ್ಶನ್ ಹಲವು ದಾಖಲೆಗಳನ್ನು ಮುರಿದಿದ್ದಾರೆ.

ಟಿ20ಯಲ್ಲಿ ಅತೀ ಹೆಚ್ಚು ಬಾರಿ ಶತಕದ ಜೊತೆಯಾಟ

ಇನ್ನು ಈ ಪಂದ್ಯದಲ್ಲಿ ಗಿಲ್ ಜೊತೆಗೂಡಿ ಸಾಯಿ ಸುದರ್ಶನ್ 125 ರನ್ ಗಳ ಜೊತೆಯಾಟವಾಡಿದರು. ಆ ಮೂಲಕ ಗಿಲ್ ಮತ್ತು ಸಾಯಿ ಸುದರ್ಶನ್ ಜೋಡಿ ಕ್ರಿಸ್ ಗೇಯ್ಲ್ ಮತ್ತು ವಿರಾಟ್ ಕೊಹ್ಲಿ ಜೋಡಿಯ ದಾಖಲೆ ಸರಿಗಟ್ಟಿದರು. ಕ್ರಿಸ್ ಗೇಯ್ಲ್ ಮತ್ತು ಕೊಹ್ಲಿ ಜೋಡಿ ಒಟ್ಟು 10 ಬಾರಿ ಶತಕದ ಜೊತೆಯಾಟವಾಡಿತ್ತು. ಆದರೆ ಈ ಸಾಧನೆಗೆ ಆ ಜೋಡಿ 63 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದರೆ ಗಿಲ್ ಮತ್ತು ಸಾಯಿ ಜೋಡಿ ಕೇವಲ 46 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದೆ.

Most century stands Men’s T20 cricket (any wicket)

  • 10 - Shubman Gill, Sai Sudharsan (46 inns)

  • 10 - Chris Gayle, Virat Kohli (63 inns)

  • 10 - Babar Azam, Mohammad Rizwan (75 inns)

  • 10 - AB de Villiers, Virat Kohli (77 inns)

ಐಪಿಎಲ್ ನಲ್ಲಿ ಅತೀ ಹೆಚ್ಚು ಸತತ ಅರ್ಧಶತಕ

ಅಂತೆಯೇ ಈ ಪಂದ್ಯದಲ್ಲಿ ಸಾಯಿ ಸುದರ್ಶನ್ ಮತ್ತೊಂದು ಅರ್ಧಶತಕ ಸಿಡಿಸಿದ್ದು, ಇದರೊಂದಿಗೆ ಹಾಲಿ ಟೂರ್ನಿಯಲ್ಲಿ ಸತತ 5ನೇ ಅರ್ಧಶತಕ ಸಿಡಿಸಿದ ಸಾಧನೆ ಮಾಡಿದರು. ಆ ಮೂಲಕ ಸಾಯಿ ಡೇವಿಡ್ ವಾರ್ನರ್ (2019), ಜಾಸ್ ಬಟ್ಲರ್ (2018) ಮತ್ತು ವಿರೇಂದ್ರ ಸೆಹ್ವಾಗ್ (2012) ಅವರ ದಾಖಲೆ ಸರಿಗಟ್ಟಿದ್ದಾರೆ.

Most consecutive 50-plus scores in the IPL

  • 5 - Virender Sehwag in 2012

  • 5 - Jos Buttler in 2018

  • 5 - David Warner in 2019

  • 5 - Sai Sudharsan in 2026

ಒಂದೇ ಐಪಿಎಲ್ ಟೂರ್ನಿಯಲ್ಲಿ 600ಕ್ಕೂ ಅಧಿಕ ರನ್

ಇನ್ನು ಇಂದಿನ ಅರ್ಧಶತಕದೊಂದಿಗೆ ಸಾಯಿ ಸುದರ್ಶನ್ ತಮ್ಮ ರನ್ ಗಳಿಕೆಯನ್ನು 638ಕ್ಕೆ ಏರಿಕೆ ಮಾಡಿಕೊಂಡಿದ್ದು, ಆ ಮೂಲಕ ಆರೆಂಜ್ ಕ್ಯಾಪ್ ಸ್ವೀಕರಿಸಿದ್ದಾರೆ. ಅಂತೆಯೇ ಒಂದೇ ಟೂರ್ನಿಯಲ್ಲಿ ಒಂದೇ ತಂಡದ ಇಬ್ಬರು ಆಟಗಾರರು 600ಕ್ಕೂ ಹೆಚ್ಚು ವೈಯುಕ್ತಿಕ ರನ್ ಗಳಿಸಿದ ಅಪರೂಪದ ಸಾಧನೆ ಇದಾಗಿದೆ.

ಸಾಯಿ ಜೊತೆ ಗಿಲ್ ಕೂಡ ಹಾಲಿ ಟೂರ್ನಿಯಲ್ಲಿ ತಮ್ಮ ರನ್ ಗಳಿಕೆ (616)ಯನ್ನು 600ಕ್ಕೆ ಏರಿಕೆ ಮಾಡಿಕೊಂಡರು. ಈ ಹಿಂದೆ ಆಂದರೆ 2025ರಲ್ಲೂ ಈ ಜೋಡಿ ಇದೇ ರೀತಿಯ ಸಾಧನೆ ಮಾಡಿತ್ತು. 2013ರ ಟೂರ್ನಿಯಲ್ಲಿ ಆರ್ ಸಿಬಿಯ ಕ್ರಿಸ್ ಗೇಯ್ಲ್ ಮತ್ತು ವಿರಾಟ್ ಕೊಹ್ಲಿ ಕೂಡ ಈ ಸಾಧನೆ ಮಾಡಿದ್ದರು.

600-plus runs by two different batters for a team in an IPL edition

  • Chris Gayle & Virat Kohli (RCB, 2013)

  • Virat Kohli & AB de Villiers (RCB, 2016)

  • Ruturaj Gaikwad & Faf du Plessis (CSK, 2021)

  • Virat Kohli & Faf du Plessis (RCB, 2023)

  • Shubman Gill & Sai Sudharsan (GT, 2025)

  • Shubman Gill & Sai Sudharsan (GT, 2026)

ಸತತ ಟೂರ್ನಿಗಳಲ್ಲಿ 600ಕ್ಕೂ ಅಧಿಕ ರನ್ ಸಾಧನೆ

ಅಂತೆಯೇ ಸಾಯಿ ಸುದರ್ಶನ್ ಸತತ 2ನೇ ಬಾರಿಗೆ ಐಪಿಎಲ್ ಟೂರ್ನಿಯಲ್ಲಿ 600ಕ್ಕೂ ಅಧಿಕ ರನ್ ಗಳಿಸಿದ ಸಾಧನೆ ಮಾಡಿದರು. ಈ ಪಟ್ಟಿಯಲ್ಲಿ ಅತೀ ಹೆಚ್ಚು ಬಾರಿ 600ಕ್ಕೂ ಅಧಿಕ ರನ್ ಗಳಿಸಿ ಬ್ಯಾಟರ್ ಗಳ ಪಟ್ಟಿಯಲ್ಲಿ ಕ್ರಿಸ್ ಗೇಯ್ಲ್ ಅಗ್ರಸ್ಥಾನದಲ್ಲಿದ್ದಾರೆ. ಗೇಯ್ಲ್ 2011, 2012 ಮತ್ತು 2013ರಲ್ಲಿ ಈ ಸಾಧನೆ ಮಾಡಿದ್ದರು.

600-plus aggregates in consecutive IPL editions

  • 3 - Chris Gayle (2011, 2012, 2013)

  • 3 - David Warner (2016, 2017, 2019)

  • 3 - KL Rahul (2020, 2021, 2022)

  • 3 - Virat Kohli (2023, 2024, 2025)

  • 2 - Shubman Gill (2025, 2026)

  • 2 - Sai Sudharsan (2025, 2026)

ಗರಿಷ್ಠ ಜೊತೆಯಾಟ, ಕೊಹ್ಲಿ ಡುಪ್ಲೆಸಿಸ್ ದಾಖಲೆ ಪತನ

ಅಂತೆಯೇ ಗಿಲ್ ಮತ್ತು ಸಾಯಿ ಜೋಡಿ ಐಪಿಎಲ್ ನಲ್ಲಿ ತಮ್ಮ ಜೊತೆಯಾಟದ ರನ್ ಗಳಿಕೆಯನ್ನು 1898ಕ್ಕೆ ಏರಿಕೆ ಮಾಡಿಕೊಂಡರು. ಆ ಮೂಲಕ ಗರಿಷ್ಠಆರಂಭಿಕ ಜೊತೆಯಾಟದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರು. ಈ ಪಟ್ಟಿಯಲ್ಲಿ ಡೇವಿಡ್ ವಾರ್ನರ್ ಮತ್ತು ಶಿಖರ್ ಧವನ್ ಜೋಡಿ 2220 ರನ್ ಕಲೆಹಾಕಿದ್ದು ಇದು ಅಗ್ರ ಸ್ಥಾನದಲ್ಲಿದೆ. ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲೆಸಿಸ್ ಜೋಡಿ 1890 ರನ್ ಗಳಿಸಿ ಮೂರನೇ ಸ್ಥಾನದಲ್ಲಿದೆ.

Highest opening partnership aggregates in the IPL

  • 2220 - David Warner, Shikhar Dhawan (Avg: 47.23, RR: 8.59)

  • 1898 - Shubman Gill, Sai Sudharsan (Avg: 67.78, RR: 9.87)

  • 1890 - Virat Kohli, Faf du Plessis (Avg: 51.08, RR: 9)

  • 1755 - Abhishek Sharma, Travis Head (Avg: 47.43, RR: 12.41)

  • 1547 - Rohit Sharma, Ishan Kishan (Avg: 35.97, RR: 9.02)

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ ಲೆಕ್ಕಾಚಾರವೇ ತಲೆಕೆಳಗೆ: Iran ನಿಂದ ವೇಗವಾಗಿ ಶಸ್ತ್ರಾಸ್ತ್ರ ನೆಲೆಗಳ ಪುನರ್‌ನಿರ್ಮಾಣ, ಈಗಾಗಲೇ ಡ್ರೋನ್ ಉತ್ಪಾದನೆ ಆರಂಭ: ವರದಿ

No police, No court: ಅಕ್ರಮ ಬಾಂಗ್ಲಾ ವಲಸಿಗರು ಇನ್ನು ಮುಂದೆ ನೇರ BSF ವಶಕ್ಕೆ: CM ಸುವೇಂದು ಅಧಿಕಾರಿ ಸೂಚನೆ

IPL 2026: CSK ಫ್ಲೇಆಫ್ ಕನಸು ಛಿದ್ರ, GT ವಿರುದ್ಧ 89 ರನ್ ಗಳ ಹೀನಾಯ ಸೋಲು, Dhoni ಇಲ್ಲದೇ ಅಭಿಯಾನ ಮುಕ್ತಾಯ!

ಗೋವು ಬಲಿ ಈದ್‌ ಆಚರಣೆಗೆ ಕಡ್ಡಾಯವಲ್ಲ: ಗೋಹತ್ಯೆ ನಿಷೇಧ ಎತ್ತಿಹಿಡಿದ ಕೋಲ್ಕತ್ತಾ ಹೈಕೋರ್ಟ್

ನಾವೂ ಮನುಷ್ಯರೇ, ಚರ್ಚೆ ಪಂದ್ಯಕ್ಕೇ ಸೀಮಿತವಾಗಿದ್ರೆ ಒಳ್ಳೇದು, ಗೌರವ ಕೊಟ್ಟು ಮಾತಾಡಿ: ಕೆಮೆಂಟೇಟರ್ ಗಳಿಗೆ Riyan Parag ಚಾಟಿ!

SCROLL FOR NEXT