ವೈಭವ್ ಸೂರ್ಯವಂಶಿ 
ಕ್ರಿಕೆಟ್

T20ಯಲ್ಲಿ 200 ರನ್ ಬಾರಿಸುವ ಮೂಲಕ ಗೇಲ್ ದಾಖಲೆ ಮುರಿಯುವುದು ನನ್ನ ಗುರಿ: ವೈಭವ್ ಸೂರ್ಯವಂಶಿ

ಕೆವಿನ್ ಪೀಟರ್ಸನ್ ಅವರ ಯೂಟ್ಯೂಬ್ ಶೋ 'ದಿ ಸ್ವಿಚ್' ನಲ್ಲಿ ಮಾತನಾಡಿದ ರಾಜಸ್ಥಾನ್ ರಾಯಲ್ಸ್‌ನ ಯುವ ಆಟಗಾರ, ಅರ್ಧಶತಕಗಳನ್ನು ಗಳಿಸುವುದರತ್ತ ಗಮನಹರಿಸುವುದಿಲ್ಲ.

IPL 2026ರಲ್ಲಿ ಸ್ಫೋಟಕ ಬ್ಯಾಟಿಂಗ್ ನಿಂದ ಭಾರೀ ಸದ್ದು ಮಾಡುತ್ತಿರುವ ಹದಿನೈದು ವರ್ಷದ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಟಿ20 ಇತಿಹಾಸದಲ್ಲಿ ಹೊಸ ದಾಖಲೆ ಬರೆಯುವ ಗುರಿಯನ್ನು ಹೊಂದಿದ್ದು, ಈ ಮಾದರಿಯ ಮೊದಲ ದ್ವಿಶತಕ ಗಳಿಸುವ ಮತ್ತು ಕ್ರಿಸ್ ಗೇಲ್ ಅವರ ಅತ್ಯಧಿಕ ಸ್ಕೋರ್(175) ದಾಖಲೆಯ ಮುರಿಯುವ ಬಯಕೆ ಹೊಂದಿರುವುದಾಗಿ ಹೇಳಿದ್ದಾರೆ.

ಇಂಗ್ಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ಕೆವಿನ್ ಪೀಟರ್ಸನ್ ಅವರ ಯೂಟ್ಯೂಬ್ ಶೋ 'ದಿ ಸ್ವಿಚ್' ನಲ್ಲಿ ಮಾತನಾಡಿದ ರಾಜಸ್ಥಾನ್ ರಾಯಲ್ಸ್‌ನ ಯುವ ಆಟಗಾರ, ಅರ್ಧಶತಕಗಳನ್ನು ಗಳಿಸುವುದರತ್ತ ಗಮನಹರಿಸುವುದಿಲ್ಲ. ಬದಲಿಗೆ ಟಿ20 ಕ್ರಿಕೆಟ್‌ನಲ್ಲಿ ದೊಡ್ಡ ಮೈಲಿಗಲ್ಲನ್ನು ಸಾಧಿಸಲು ಬಯಸುತ್ತಿರುವುದಾಗಿ ತಿಳಿಸಿದ್ದಾರೆ.

"ಇಲ್ಲ, (ಅರ್ಧ ಶತಕದ ಬಗ್ಗೆ) ನಾನು ಟಿ20ಗಳಲ್ಲಿ 200 ರನ್ ಗಳಿಸಲು ಬಯಸುತ್ತೇನೆ. ನಾನು ಗೇಲ್ ದಾಖಲೆಯನ್ನು ಮುರಿಯಲು ಬಯಸುತ್ತೇನೆ" ಎಂದು ಪೀಟರ್ಸನ್‌ಗೆ ವೈಭವ್ ಹೇಳಿದ್ದಾರೆ.

ಐಪಿಎಲ್ 2013 ರಲ್ಲಿ ಪುಣೆ ವಾರಿಯರ್ಸ್ ಇಂಡಿಯಾ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಗೇಲ್ ಗಳಿಸಿದ ಅಜೇಯ 175 ರನ್, ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ಆಗಿ ಉಳಿದಿದೆ. ವೆಸ್ಟ್ ಇಂಡೀಸ್ ದಂತಕಥೆ ಕೇವಲ 30 ಎಸೆತಗಳಲ್ಲಿ ಶತಕವನ್ನು ಗಳಿಸಿದ್ದರು. ಇದು ಇನ್ನೂ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕವಾಗಿದೆ.

ವೈಭವ್ ಸೂರ್ಯವಂಶಿ, ರಾಜಸ್ಥಾನ ರಾಯಲ್ಸ್ ಪರ ಐಪಿಎಲ್ 2026 ರಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿದ್ದು, 14 ಪಂದ್ಯಗಳಲ್ಲಿ ಸರಾಸರಿ 41.64 ರನ್ ಮತ್ತು 232.27 ಸ್ಟ್ರೈಕ್ ರೇಟ್‌ನಲ್ಲಿ 583 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಮೂರು ಅರ್ಧಶತಕಗಳು ಸೇರಿವೆ. ಆದರೆ ಅವರ 53 ಸಿಕ್ಸರ್‌ಗಳು ಒಂದೇ ಐಪಿಎಲ್ ಆವೃತ್ತಿಯ ಭಾರತೀಯ ಆಟಗಾರ ಗಳಿಸಿದ ಅತಿ ಹೆಚ್ಚು ಸಿಕ್ಸರ್ ಆಗಿದೆ. ಗೇಲ್ ಅವರ ಒಂದೇ ಆವೃತ್ತಿಯಲ್ಲಿ 59 ಸಿಕ್ಸರ್‌ ಬಾರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ