ಐಪಿಎಲ್ ಕ್ವಾಲಿಫೈಯರ್ ಹಂತಕ್ಕೆ ಮಳೆ ಆತಂಕ 
ಕ್ರಿಕೆಟ್

IPL 2026: RCB vs GT ಕ್ವಾಲಿಫೈಯರ್ ಪಂದ್ಯಕ್ಕೆ ಮಳೆ ಆತಂಕ; ರಿಸರ್ವ್ ಡೇ ಕೂಡ ಇಲ್ಲ... ಪಂದ್ಯ ರದ್ದಾದರೆ ಯಾರು ಫೈನಲ್ ಗೆ?

ಈ ಪಂದ್ಯವನ್ನು ಗೆಲ್ಲುವ ತಂಡ ನೇರವಾಗಿ ಟೂರ್ನಿಯ ಫೈನಲ್ ಪಂದ್ಯಕ್ಕೆ ಪ್ರವೇಶ ಪಡೆಯಲಿದೆ. ಆದರೆ ಈ ಕುತೂಹಲಕಾರಿ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ..

ಧರ್ಮಶಾಲಾ: ಇಂದು ಧರ್ಮಶಾಲಾದಲ್ಲಿ ನಡೆಯಲಿರುವ ಐಪಿಎಲ್ ಟೂರ್ನಿಯ ನಿರ್ಣಾಯಕ ಕ್ವಾಲಿಫೈಯರ್ ಪಂದ್ಯಕ್ಕೆ ಮಳೆ ಆತಂಕ ಎದುರಾಗಿದ್ದು, ಇಂದು ಶೇ.80ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

IPL 2026ರ ಕ್ವಾಲಿಫೈಯರ್ 1ರಲ್ಲಿ ಮಂಗಳವಾರ ಧರ್ಮಶಾಲಾದ ಸುಂದರ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಮತ್ತು ಗುಜರಾತ್ ಟೈಟನ್ಸ್ (Gujarat Titans) ತಂಡಗಳು ಫೈನಲ್ ಪ್ರವೇಶಕ್ಕೆ ಪರಸ್ಪರ ಮುಖಾಮುಖಿಯಾಗುತ್ತಿದ್ದು, ಈ ಪಂದ್ಯವನ್ನು ಗೆಲ್ಲುವ ತಂಡ ನೇರವಾಗಿ ಟೂರ್ನಿಯ ಫೈನಲ್ ಪಂದ್ಯಕ್ಕೆ ಪ್ರವೇಶ ಪಡೆಯಲಿದೆ. ಆದರೆ ಈ ಕುತೂಹಲಕಾರಿ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಧರ್ಮಶಾಲಾದ HPCA ಸ್ಟೇಡಿಯಂನಲ್ಲಿ ಟಾಸ್‌ಗೂ ಮುನ್ನ ಮಳೆ ಬೀಳುವ ನಿರೀಕ್ಷೆಯಿದೆ. AccuWeather ವರದಿ ಪ್ರಕಾರ ನಗರದಲ್ಲಿ ಸುಮಾರು 14ರಿಂದ 25 ಶೇಕಡಾ ಮೋಡ ಕವಿದ ವಾತಾವರಣ ಇರಲಿದ್ದು, ಮಳೆಯ ಸಾಧ್ಯತೆ 80 ಶೇಕಡಾ ಇದೆ.

ರಿಸರ್ವ್ ಡೇ ಕೂಡ ಇಲ್ಲ.. ಪಂದ್ಯ ರದ್ದಾದರೆ ಯಾರು ಫೈನಲ್ ಗೆ?

ಇನ್ನು ಈ ಮಹತ್ವದ ಪಂದ್ಯ ಮಳೆ ಅಥವಾ ಇನ್ನಾವುದೇ ಕಾರಣದಿಂದ ರದ್ದಾದರೆ ಮೀಸಲು ದಿನ ಇಲ್ಲ. ಹೀಗಾಗಿ ಇಂದೇ ಫಲಿತಾಂಶ ಪ್ರಕಟವಾಗಲಿದೆ. ಆದಾಗ್ಯೂ ಪಂದ್ಯ ಮಳೆಯಿಂದ ಸಂಪೂರ್ಣ ರದ್ದಾದರೆ ಆಗ ಆರ್ ಸಿಬಿ ನೇರವಾಗಿ ಫೈನಲ್ ಗೆ ಪ್ರವೇಶ ಪಡೆಯಲಿದೆ.

ಆರ್ ಸಿಬಿ ಮತ್ತು ಗುಜರಾತ್ ಟೈಟನ್ಸ್ ಎರಡೂ ತಂಡಗಳು 14 ಪಂದ್ಯಗಳಿಂದ 18 ಅಂಕಗಳನ್ನು ಗಳಿಸಿ ಪ್ಲೇಆಫ್‌ಗೆ ಪ್ರವೇಶಿಸಿವೆ. ಆದರೆ ಉತ್ತಮ ನೆಟ್ ರನ್‌ರೇಟ್‌ನ ಆಧಾರದ ಮೇಲೆ RCB ಅಂಕಪಟ್ಟಿಯಲ್ಲಿ GTಗಿಂತ ಮೇಲ್ಭಾಗದಲ್ಲಿದೆ.

ಇಂದಿನ ಪಂದ್ಯ ಮಳೆಯಿಂದ ರದ್ದಾದರೆ ಉತ್ತಮ ನೆಟ್ ರನ್‌ರೇಟ್‌ನ ಆಧಾರದ ಮೇಲೆ ಅಂಕಪಟ್ಟಿಯಲ್ಲಿ ಮೇಲಿದ್ದ ಕಾರಣ RCB ನೇರವಾಗಿ ಫೈನಲ್‌ಗೆ ಪ್ರವೇಶಿಸುತ್ತದೆ. ಕ್ವಾಲಿಫೈಯರ್ 1, ಎಲಿಮಿನೇಟರ್ ಅಥವಾ ಕ್ವಾಲಿಫೈಯರ್ 2ಕ್ಕೆ ಯಾವುದೇ ರಿಸರ್ವ್ ಡೇ ಇಲ್ಲದ ಕಾರಣ, ಲೀಗ್ ಹಂತದಲ್ಲಿ ಮೇಲಿನ ಸ್ಥಾನ ಪಡೆದ ತಂಡಕ್ಕೆ ಲಾಭ ದೊರೆಯುತ್ತದೆ.

IPL ನಿಯಮಾವಳಿಯ ಪ್ರಕಾರ ಅಂಕಪಟ್ಟಿಯ ಮೊದಲ ಎರಡು ಸ್ಥಾನಗಳ ತಂಡಗಳು ಕ್ವಾಲಿಫೈಯರ್ 1ಕ್ಕೆ ಅರ್ಹತೆ ಪಡೆಯುತ್ತವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್‌ಗೆ ಪ್ರವೇಶಿಸಲಿದ್ದು, ಸೋಲುವ ತಂಡಕ್ಕೆ ಕ್ವಾಲಿಫೈಯರ್ 2 ಮೂಲಕ ಮತ್ತೊಂದು ಅವಕಾಶ ಸಿಗಲಿದೆ.

ಸೂಪರ್ ಓವರ್ ಗೂ ಅವಕಾಶ

ಮಳೆಯ ಕಾರಣದಿಂದ ಸಾಮಾನ್ಯ ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ, ಫಲಿತಾಂಶ ನಿರ್ಧರಿಸಲು ಕೇವಲ ಒಂದು ಸೂಪರ್ ಓವರ್ ಪಂದ್ಯವನ್ನು ನಡೆಸುವ ಅವಕಾಶವೂ IPL ನಿಯಮಗಳಲ್ಲಿ ಇದೆ.

RCB ಮತ್ತು GT ಎರಡೂ ತಂಡಗಳು ತಲಾ 18 ಅಂಕಗಳೊಂದಿಗೆ ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನಗಳಲ್ಲಿ ಮುಕ್ತಾಯಗೊಂಡಿವೆ. ಈ ಸೀಸನ್‌ನಲ್ಲಿ ಎರಡೂ ತಂಡಗಳು ಪರಸ್ಪರ ಎದುರಿಸಿದ ಎರಡು ಪಂದ್ಯಗಳಲ್ಲಿ ತಲಾ ಒಂದೊಂದು ಗೆಲುವು ದಾಖಲಿಸಿವೆ.

ಒಟ್ಟಾರೆ ಮುಖಾಮುಖಿ ದಾಖಲೆ 4-4 ಸಮಬಲದಲ್ಲಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ RCBಗೆ ಬಂದ ಐದು ಸೋಲಗಳಲ್ಲಿ GT ವಿರುದ್ಧದ ಒಂದು ಸೋಲು ಕೂಡ ಸೇರಿದೆ. GTಯ ಬಲಿಷ್ಠ ಬೌಲಿಂಗ್ ದಾಳಿ RCBಗೆ ಕಠಿಣ ಸವಾಲಾಗಿತ್ತು. ಆದರೆ ಹಾಲಿ ಚಾಂಪಿಯನ್ RCB ನಂತರದ ಪಂದ್ಯದಲ್ಲಿ ಪ್ರತೀಕಾರ ತೀರಿಸಿಕೊಂಡಿತ್ತು.

ಯಾರೇ ಗೆದ್ದರೂ 2ನೇ ಟ್ರೋಫಿ ಖಚಿತ

ಎರಡೂ ಫ್ರಾಂಚೈಸಿಗಳು ತಮ್ಮ ಎರಡನೇ IPL ಟ್ರೋಫಿಗಾಗಿ ಹೋರಾಟ ನಡೆಸುತ್ತಿವೆ. ಹಾಲಿ ಚಾಂಪಿಯನ್ RCB ಸತತ ಎರಡನೇ ಬಾರಿ ಕಿರೀಟ ಗೆಲ್ಲುವ ಗುರಿಯಲ್ಲಿದ್ದರೆ, GT ತನ್ನ 2022ರ ಪ್ರಥಮ ಸೀಸನ್‌ನಲ್ಲಿ ಗೆದ್ದ ಚಾಂಪಿಯನ್ ಪಟ್ಟವನ್ನು ಮರಳಿ ಪಡೆಯಲು ಉತ್ಸುಕವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ