ಧರ್ಮಶಾಲಾ: ಐಪಿಎಲ್ ಟೂರ್ನಿಯ ಇಂದಿನ ಮಹತ್ವದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ವಿರುದ್ಧ 254 ರನ್ ಗಳ ಬೃಹತ್ ಮೊತ್ತ ಪೇರಿಸಿ ಇತಿಹಾಸ ನಿರ್ಮಿಸಿದೆ.
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಿಗಧಿತ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿದ್ದು, ಗುಜರಾತ್ ಗೆ ಗೆಲ್ಲಲು 255 ರನ್ ಗಳ ಬೃಹತ್ ಗುರಿ ನೀಡಿದೆ.
ಆರ್ ಸಿಬಿ ವಿರಾಟ್ ಕೊಹ್ಲಿ (43), ರಜತ್ ಪಟಿದಾರ್ (93), ಕೃನಾಲ್ ಪಾಂಡ್ಯಾ (43) ಮತ್ತು ದೇವದತ್ ಪಡಿಕ್ಕಲ್ (30) ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಉಳಿದಂತೆ ವೆಂಕಟೇಶ್ ಅಯ್ಯರ್ 19, ಟಿಮ್ ಡೇವಿಡ್ 4 ಮತ್ತು ಜಿತೇಶ್ ಶರ್ಮಾ 15 ರನ್ ಕಲೆಹಾಕಿದರು.
ಇತಿಹಾಸ ಬರೆದ RCB
ಈ ಪಂದ್ಯದಲ್ಲಿ ಆರ್ ಸಿಬಿಗೆ ಮೇಲುಗೈ ತಂದುಕೊಟಿದ್ದು ನಾಯಕ ರಜತ್ ಪಾಟಿದಾರ್. ಕೇವಲ 33 ಚೆಂಡುಗಳಲ್ಲಿ ಬರೊಬ್ಬರಿ 9 ಸಿಕ್ಸರ್ ಮತ್ತು 5 ಬೌಂಡರಿ ಸಹಿತಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ರಜತ್ ಪಾಟಿದಾರ್ ಅಜೇಯ 93 ರನ್ ಕಲೆಹಾಕಿದರು. ಪರಿಣಾಮ ಕ್ವಾಲಿಫೈಯರ್ 1 ಪಂದ್ಯದಲ್ಲಿ Gujarat Titans ವಿರುದ್ಧ ಆರ್‌ಸಿಬಿ 20 ಓವರ್‌ಗಳಲ್ಲಿ 254/5 ಎಂಬ ಭಾರೀ ಮೊತ್ತ ಕಲೆಹಾಕಿತು.
ಇದರೊಂದಿಗೆ ಆರ್‌ಸಿಬಿ ಐಪಿಎಲ್ ಪ್ಲೇಆಫ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ಕಲೆಹಾಕಿದ ತಂಡ ಎಂಬ ಐತಿಹಾಸಿಕ ದಾಖಲೆ ಬರೆಯಿತು. ಇದು ಐಪಿಎಲ್ ಪ್ಲೇಆಫ್ ಪಂದ್ಯದಲ್ಲಿ ಯಾವುದೇ ತಂಡ ದಾಖಲಿಸಿದ ಅತ್ಯಧಿಕ ಮೊತ್ತವಾಗಿದೆ. ಆರ್‌ಸಿಬಿ, 2023ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ Gujarat Titans ದಾಖಲಿಸಿದ್ದ 233/3 ಮೊತ್ತದ ದಾಖಲೆಯನ್ನು ಮುರಿದಿದೆ.
Highest total in an IPL knockouts/Playoffs
254/5 RCB vs GT Dharamsala 2026 *
233/3 GT vs MI Ahmedabad 2023
228/5 MI vs GT New Chandigarh 2025
226/6 PBKS vs CSK Wankhede 2014
222/5 CSK vs DC Chennai 2012
ಕೊಹ್ಲಿ ಇದೇ ವೇಳೆ ಐಪಿಎಲ್ ಇತಿಹಾಸದಲ್ಲಿ ಸತತ ನಾಲ್ಕು ಸೀಸನ್‌ಗಳಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಎಂಬ ಐತಿಹಾಸಿಕ ಸಾಧನೆಗೂ ಪಾತ್ರರಾದರು.
ಟಾಸ್ ಗೆದ್ದ Shubman Gill ನೇತೃತ್ವದ ಜಿಟಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರೂ, ಆರ್‌ಸಿಬಿಯ ರನ್ ಮಳೆ ತಡೆಯಲು ವಿಫಲವಾಯಿತು. ಈಗ Gujarat Titans ಐಪಿಎಲ್ ಪ್ಲೇಆಫ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ರನ್ ಚೇಸ್ ಸಾಧಿಸಬೇಕಾದ ಸವಾಲಿನ ಎದುರಿನಲ್ಲಿ ನಿಂತಿದೆ. ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಐಪಿಎಲ್ 2026ರ ಫೈನಲ್‌ಗೆ ಪ್ರವೇಶಿಸಲಿದೆ.