ರಿಯಾನ್ ಪರಾಗ್ ವೈಭವ್ ಸೂರ್ಯವಂಶಿ  
ಕ್ರಿಕೆಟ್

IPL 2026 Qualifier 2: ಶತಕ ಕೈತಪ್ಪಿಸಿಕೊಂಡಿದ್ದಕ್ಕೆ ವೈಭವ್ ಸೂರ್ಯವಂಶಿಗೆ ರಿಯಾನ್ ಪರಾಗ್ ಕ್ಲಾಸ್? Video ಭಾರೀ ವೈರಲ್!

ಸತತ ಎರಡನೇ ಪಂದ್ಯದಲ್ಲೂ 90ರ ಗಡಿಯನ್ನು ದಾಟಿದರೂ ಶತಕದಿಂದ ವಂಚಿತರಾದ ವೈಭವ್, ಮತ್ತೊಮ್ಮೆ ಅಭಿಮಾನಿಗಳ ಮನಸ್ಸಿನಲ್ಲಿ ನೋವು ಮೂಡಿಸಿದರು.

15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರ ಮುಖದಲ್ಲಿ ನಿರಾಸೆ ಸ್ಪಷ್ಟವಾಗಿ ಕಾಣುತ್ತಿತ್ತು. ರಾಜಸ್ಥಾನ್ ರಾಯಲ್ಸ್ ತಂಡದಲ್ಲಿಯೂ ಅದೇ ಭಾವನೆ ಆವರಿಸಿತ್ತು. ಸತತ ಎರಡನೇ ಪಂದ್ಯದಲ್ಲೂ 90ರ ಗಡಿಯನ್ನು ದಾಟಿದರೂ ಶತಕದಿಂದ ವಂಚಿತರಾದ ವೈಭವ್, ಮತ್ತೊಮ್ಮೆ ಅಭಿಮಾನಿಗಳ ಮನಸ್ಸಿನಲ್ಲಿ ನೋವು ಮೂಡಿಸಿದರು.

ಮೊನ್ನೆ ಬುಧವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 97 ರನ್ ಗಳಿಸಿ ಶತಕ ತಪ್ಪಿಸಿಕೊಂಡಿದ್ದ ವೈಭವ್, ನಿನ್ನೆ ಶುಕ್ರವಾರ ಕ್ವಾಲಿಫೈಯರ್-2ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 47 ಎಸೆತಗಳಲ್ಲಿ ಅದ್ಭುತ 96 ರನ್ ಗಳಿಸಿ ಮತ್ತೆ ನಾಲ್ಕು ರನ್‌ಗಳಿಂದ ಶತಕ ಕಳೆದುಕೊಂಡರು.

ಅವರ ಇನ್ನಿಂಗ್ಸ್‌ನಲ್ಲಿ ಮನಮೋಹಕ ಹೊಡೆತಗಳ ಮಳೆ ಸುರಿಯಿತು. ವಿಶೇಷವಾಗಿ ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ ಎಸೆದ 153 ಕಿ.ಮೀ. ವೇಗದ ಚೆಂಡನ್ನು ನೇರವಾಗಿ ಸಿಕ್ಸರ್‌ಗೆ ಅಟ್ಟಿದ ಹೊಡೆತ ಪಂದ್ಯದಲ್ಲೇ ಅತ್ಯುತ್ತಮ ಕ್ಷಣಗಳಲ್ಲಿ ಒಂದಾಯಿತು.

ಪಂದ್ಯವನ್ನು ವೀಕ್ಷಿಸಲು ನಿನ್ನೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿದ್ದು, ಅವರಲ್ಲಿ ಬಹುತೇಕರು ವೈಭವ್ ಸೂರ್ಯವಂಶಿಯ ಬ್ಯಾಟಿಂಗ್ ಕಣ್ತುಂಬಿಕೊಳ್ಳಲು ಬಂದಿದ್ದರು. ಎಲ್ಲರೂ ನಿರೀಕ್ಷಿಸಿದ್ದ ಶತಕ ಮತ್ತೊಮ್ಮೆ ಕೈತಪ್ಪಿತು. ರಬಾಡ ಎಸೆದ ಚೆಂಡು ಕ್ಯಾಚ್ ನೀಡಿ ಔಟಾದ ವೈಭವ್, ಸತತ ಎರಡನೇ ಪಂದ್ಯದಲ್ಲೂ ಅದೇ ರೀತಿಯಲ್ಲಿ ವಿಕೆಟ್ ಒಪ್ಪಿಸಿದರು.

ಔಟಾದ ನಂತರ ರಿಯಾನ್ ಪರಾಗ್ ವೈಭವ್ ಜೊತೆ ಭಾವನಾತ್ಮಕವಾಗಿ ಮಾತುಕತೆ ನಡೆಸುತ್ತಿರುವುದು ಕಂಡುಬಂತು. ವೈಭವ್ ತುಂಬಾ ನಿರಾಶಗೊಂಡಂತೆ ಕಾಣುತ್ತಿದ್ದರು.

ಆರಂಭದಲ್ಲೇ ಯಶಸ್ವಿ ಜೈಸ್ವಾಲ್ ಮತ್ತು ಧ್ರುವ್ ಜುರೇಲ್ ವಿಕೆಟ್ ಕಳೆದುಕೊಂಡ ಬಳಿಕ ವೈಭವ್ ಪರಿಸ್ಥಿತಿಗೆ ತಕ್ಕಂತೆ ತಮ್ಮ ಆಟವನ್ನು ಹೊಂದಿಸಿಕೊಳ್ಳಬೇಕಾಯಿತು. ಬಳಸಿದ ಪಿಚ್‌ನಲ್ಲಿ ಮೊಹಮ್ಮಜ್ ಸಿರಾಜ್, ರಬಾಡ ಮತ್ತು ಪ್ರಸಿದ್ಧ್ ಕೃಷ್ಣ ಅವರ ಸ್ಪಷ್ಟ ತಂತ್ರದ ಎದುರು ಅವರು ಆರಂಭದಲ್ಲಿ ಕಷ್ಟಪಟ್ಟರು.

ಆದರೂ ಅವರು ಹೋರಾಟ ಬಿಟ್ಟಿರಲಿಲ್ಲ. ಟೂರ್ನಿಯ ಆರನೇ ಅರ್ಧಶತಕ ಪೂರೈಸಿದ ಅವರು ಮಧ್ಯದ ಓವರ್‌ಗಳಲ್ಲಿ ಗುಜರಾತ್ ಬೌಲರ್‌ಗಳ ಮೇಲೆ ಆಕ್ರಮಣ ಮುಂದುವರಿಸಿದರು.

ರಾಜಸ್ಥಾನ್ ತಂಡದ ಪರ ನಾಲ್ಕನೇ ಕ್ರಮಾಂಕದಲ್ಲಿ ಬಂದ ರವೇಂದ್ರ ಜಡೇಜ 35 ಎಸೆತಗಳಲ್ಲಿ ಅಜೇಯ 45 ರನ್ ಗಳಿಸಿ ಉತ್ತಮ ಬೆಂಬಲ ನೀಡಿದರು. ಟೆನಿಸ್ ಎಲ್ಬೋ ಸಮಸ್ಯೆಯಿಂದ ಬಳಲುತ್ತಿದ್ದ ಜಡೇಜಾ, ಎಂಟನೇ ಓವರ್ ಬಳಿಕ ಹೊರನಡೆದರೂ ಕೊನೆಯ ಓವರ್‌ಗಳಲ್ಲಿ ಮರಳಿ ಬ್ಯಾಟಿಂಗ್‌ಗೆ ಬಂದು ತಂಡಕ್ಕೆ ನೆರವಾದರು.

ಕೊನೆಯ ಹಂತದಲ್ಲಿ ಡೊನೋವನ್ ಫೆರೇರಾ ಕೇವಲ 11 ಎಸೆತಗಳಲ್ಲಿ ಅಜೇಯ 38 ರನ್ ಗಳಿಸಿ ಪಂದ್ಯಕ್ಕೆ ಹೊಸ ತಿರುವು ನೀಡಿದರು. ಅಂತಿಮ ಓವರ್‌ನಲ್ಲಿ ರಶೀದ್ ಖಾನ್ ಅವರಿಗೆ ಬೌಲಿಂಗ್ ನೀಡಿದ ಗುಜರಾತ್‌ನ ನಿರ್ಧಾರ ಫಲ ನೀಡಲಿಲ್ಲ. ಫೆರೇರಾ ಸತತ ಸಿಕ್ಸರ್‌ಗಳ ಮಳೆಗರೆದು 27 ರನ್ ಕಲೆಹಾಕಿ ರಾಜಸ್ಥಾನ್ ಮೊತ್ತವನ್ನು 214/6ಕ್ಕೆ ಕೊಂಡೊಯ್ದರು.

ಆದರೆ ಅಂತಿಮವಾಗಿ ರಾಜಸ್ಥಾನ್‌ಗೆ ಆ ಮೊತ್ತವೂ ಸಾಕಾಗಲಿಲ್ಲ. ಆದರೂ ವೈಭವ್ ಸೂರ್ಯವಂಶಿಯ ಮತ್ತೊಂದು ಅದ್ಭುತ ಇನ್ನಿಂಗ್ಸ್ ಈ ಐಪಿಎಲ್ ಋತುವಿನ ಅತ್ಯುತ್ತಮ ವೈಯಕ್ತಿಕ ಪ್ರದರ್ಶನಗಳಲ್ಲಿ ಒಂದಾಗಿ ಉಳಿಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತಮಿಳುನಾಡಿನಲ್ಲಿ ಸಿಎಂ ವಿಜಯ್ ಬಂಪರ್ ಘೋಷಣೆ: ವರ್ಷಕ್ಕೆ 3 ಉಚಿತ LPG ಸಿಲಿಂಡರ್; ಮಹಿಳೆಯರ ಉಚಿತ ಬಸ್ ಪ್ರಯಾಣ ವಿಸ್ತರಣೆ, ಪರಂದೂರು ವಿಮಾನ ನಿಲ್ದಾಣಕ್ಕೆ ಬ್ರೇಕ್..!

ಕಾವೇರಿ ನೀರಿಗಾಗಿ ತಮಿಳುನಾಡು ಕ್ಯಾತೆ: ಆಗಸ್ಟ್.31ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್

ವಾಲ್ಮೀಕಿ ನಿಗಮ ಹಗರಣ: ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ BJP ಬೃಹತ್ ಪ್ರತಿಭಟನೆ, ಅಶೋಕ್-ವಿಜಯೇಂದ್ರ ಸೇರಿ ಹಲವರು ಪೊಲೀಸರ ವಶಕ್ಕೆ..!

ದೆಹಲಿಯಲ್ಲಿ ಭೀಕರ ಅಪಘಾತ: ನಿಯಂತ್ರಣ ತಪ್ಪಿ ಡಿವೈಡರ್‌ ದಾಟಿ SUVಗೆ ಕಾರು ಡಿಕ್ಕಿ, ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸೇರಿ 6 ಮಂದಿಗೆ ಗಾಯ..!

ಇರಾನ್ ಉಸಿರುಗಟ್ಟಿಸಲು ಟ್ರಂಪ್ ಮಾಸ್ಟರ್ ಪ್ಲ್ಯಾನ್: ಆರ್ಥಿಕ 'ಡಿ-ಡೇ’ ಘೋಷಣೆ, ಅಮೆರಿಕ ಹೊಸ ನಿರ್ಬಂಧದಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಹೆಚ್ಚಿದ ಆತಂಕ..!