ಸಚಿನ್ ತೆಂಡೂಲ್ಕರ್ 
ಕ್ರಿಕೆಟ್

'ಇಂಪ್ಯಾಕ್ಟ್ ಪ್ಲೇಯರ್' ನಿಯಮ ರದ್ದುಗೊಳಿಸಬೇಕು: ಸಚಿನ್ ತೆಂಡೂಲ್ಕರ್ ಹೀಗೆ ಹೇಳಿದ್ಯಾಕೆ?

2023ರಲ್ಲಿ ಪರಿಚಯಿಸಲಾದ ಇಂಪ್ಯಾಕ್ಟ್ ಪ್ಲೇಯರ್ ನಿಯಮವು, ತಂಡಗಳು ಪಂದ್ಯದ ಯಾವುದೇ ಹಂತದಲ್ಲಿ ತಮ್ಮ ಪ್ಲೇಯಿಂಗ್ ಇಲೆವೆನ್‌ನ ಒಬ್ಬ ಆಟಗಾರನ ಬದಲಿಗೆ ನಾಮನಿರ್ದೇಶಿತ ಐದು ಬದಲಿ ಆಟಗಾರರಲ್ಲಿ ಒಬ್ಬರನ್ನು ಕಣಕ್ಕಿಳಿಸಬಹುದಾಗಿದೆ.

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ವಿವಾದಾತ್ಮಕ 'ಇಂಪ್ಯಾಕ್ಟ್ ಪ್ಲೇಯರ್' ನಿಯಮವನ್ನು ರದ್ದುಗೊಳಿಸಬೇಕೆಂದು ಹೇಳಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬ್ಯಾಟ್ ಮತ್ತು ಬಾಲ್ ನಡುವಿನ ಸಮತೋಲನವನ್ನು ಪುನಃಸ್ಥಾಪಿಸಲು ಒಂದೆರಡು ಬದಲಾವಣೆಗಳನ್ನು ಸೂಚಿಸಿದ್ದಾರೆ.

2023ರಲ್ಲಿ ಪರಿಚಯಿಸಲಾದ ಇಂಪ್ಯಾಕ್ಟ್ ಪ್ಲೇಯರ್ ನಿಯಮವು, ತಂಡಗಳು ಪಂದ್ಯದ ಯಾವುದೇ ಹಂತದಲ್ಲಿ ತಮ್ಮ ಪ್ಲೇಯಿಂಗ್ ಇಲೆವೆನ್‌ನ ಒಬ್ಬ ಆಟಗಾರನ ಬದಲಿಗೆ ನಾಮನಿರ್ದೇಶಿತ ಐದು ಬದಲಿ ಆಟಗಾರರಲ್ಲಿ ಒಬ್ಬರನ್ನು ಕಣಕ್ಕಿಳಿಸಬಹುದಾಗಿದೆ.

ಈ ಹಿಂದೆ 'ಇಂಪ್ಯಾಕ್ಟ್ ಪ್ಲೇಯರ್' ನಿಯಮವನ್ನು ಮಾಜಿ ನಾಯಕರಾದ ಎಂಎಸ್ ಧೋನಿ, ರೋಹಿತ್ ಶರ್ಮಾ ಹಾಗೂ ಭಾರತ ತಂಡದ ನಾಯಕ ಶುಭಮನ್ ಗಿಲ್ ಸೇರಿದಂತೆ ಹಲವು ಪ್ರಮುಖ ಭಾರತೀಯ ಕ್ರಿಕೆಟಿಗರು ವ್ಯಾಪಕವಾಗಿ ವಿರೋಧಿಸಿದ್ದರು. ಇದೀಗ ಸಚಿನ್ ಸಹ ವಿರೋಧಿಸಿದ್ದಾರೆ.

"ಐಪಿಎಲ್ ಗೆ ಸಂಬಂಧಿಸಿದಂತೆ ವೈಯಕ್ತಿಕವಾಗಿ, ನಾನು ಹೇಳಬಹುದಾದ ಕೆಲವು ವಿಷಯಗಳಿವೆ. ಮೊದಲು ಇಂಪ್ಯಾಕ್ಟ್ ಪ್ಲೇಯರ್ ನಿಯಮ ರದ್ದುಗೊಳಿಸಬೇಕು" ಎಂದು ತೆಂಡೂಲ್ಕರ್ ಅವರು ESPNcricinfo ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೇಳಿದ್ದಾರೆ.

ಟಿ20 ಪಂದ್ಯವೇ ಕೇವಲ 20 ಓವರ್‌ಗಳದ್ದು. ಅದರಲ್ಲೂ ಹೆಚ್ಚುವರಿಯಾಗಿ ಒಬ್ಬ ಬ್ಯಾಟರ್‌ರನ್ನು ಆಡಿಸುವುದರಿಂದ ಬೌಲರ್‌ಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ. ಇದರಿಂದ ಬ್ಯಾಟ್ ಮತ್ತು ಬಾಲ್ ನಡುವಿನ ಸಮತೋಲನ ಕಳೆದುಹೋಗಿದೆ ಎಂದು ಸಚಿನ್ ಹೇಳಿದ್ದಾರೆ.

ಇನ್ನು ಪ್ರಸ್ತುತ ಇರುವ 6 ಓವರ್‌ಗಳ ಪವರ್‌ಪ್ಲೇ ನಿಯಮವನ್ನು ಬದಲಾಯಿಸಬೇಕು ಎಂದು ಸಚಿನ್ ಸಲಹೆ ನೀಡಿದ್ದಾರೆ. ಅವರ ಪ್ರಕಾರ ಮೊದಲ 4 ಓವರ್‌ಗಳು ಈಗಿರುವಂತೆ ಬ್ಯಾಟರ್‌ಗಳಿಗೆ ಅನುಕೂಲಕರವಾಗಿರಲಿ. ಉಳಿದ 2 ಓವರ್‌ಗಳ ಪವರ್‌ಪ್ಲೇಯನ್ನು ಫೀಲ್ಡಿಂಗ್ ತಂಡದ ನಾಯಕ ತನ್ನ ಇಚ್ಛೆಯ ಸಮಯದಲ್ಲಿ ಬಳಸುವ ಅವಕಾಶ ನೀಡಬೇಕು. ಈಗ ಟಿ20 ಕ್ರಿಕೆಟ್‌ನಲ್ಲಿ ಒಬ್ಬ ಬೌಲರ್ ಗರಿಷ್ಠ 4 ಓವರ್ ಮಾತ್ರ ಬೌಲಿಂಗ್ ಮಾಡಬಹುದು. ಆದರೆ ತಂಡದ ಪ್ರಮುಖ ಬೌಲರ್‌ಗೆ 5ನೇ ಓವರ್ ಬೌಲಿಂಗ್ ಮಾಡಲು ಅವಕಾಶ ನೀಡಬೇಕು ಎಂದು ಸಚಿನ್ ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಲಾಲ್‌ಬಾಗ್ ಉಳಿಸಿ'.. ಕೊನೆಗೂ ಹೋರಾಟಕ್ಕೆ ಮಣಿದ ಸರ್ಕಾರ: ವಿವಾದಿತ ಪಾರ್ಕ್ ತಿದ್ದುಪಡಿ ಮಸೂದೆ ವಾಪಸ್, BJP ಸ್ವಾಗತ

ಪಾರ್ಕ್ ಬಿಲ್‌ಗೆ ಸದ್ಯಕ್ಕೆ ಬ್ರೇಕ್; ಚಳಿಗಾಲದ ಅಧಿವೇಶನದಲ್ಲಿ ಮತ್ತೆ ಮಂಡನೆ: ಡಿಸಿಎಂ ಜಿ. ಪರಮೇಶ್ವರ

ಭಾರತದ ಆರ್ಥಿಕ ಬೆಳವಣಿಗೆ ಜಗತ್ತಿಗೆ ವಿಶ್ವಾಸದ ಮೂಲ: ಪ್ರಧಾನಿ

7.8% ಜಿಡಿಪಿ ಹೇಳಿಕೆ ಬಗ್ಗೆ ಮೋದಿ ಸರ್ಕಾರಕ್ಕೆ ಕಾಂಗ್ರೆಸ್ ನಿಂದ 4 ಪ್ರಶ್ನೆ

ಮಹಿಳಾ ಕ್ರಿಕೆಟ್‌ಗೆ ಹೊಸ ಅಧ್ಯಾಯ: ಭಾರತದಲ್ಲಿ ಮೊಟ್ಟಮೊದಲ ಚಾಂಪಿಯನ್ಸ್ ಟ್ರೋಫಿ ಆಯೋಜನೆ, ICC ಚೇರ್ಮನ್ Jay Shah ಹೇಳಿದ್ದೇನು?