ಕರ್ನಾಟಕದಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ: ವ್ಯಕ್ತಿ ಜೊತೆ ಕುಳಿತಿದ್ದ ಮುಸ್ಲಿಂ ಯುವತಿಗೆ ಬುರ್ಖಾ ತೆಗೆಯುವಂತೆ ಒತ್ತಾಯ!

ಉರ್ದು ಮಾತನಾಡುತ್ತಿದ್ದ ವ್ಯಕ್ತಿಯೊಬ್ಬ ಮಹಿಳೆಯ ವಿಡಿಯೊ ಚಿತ್ರೀಕರಿಸಿ, ಸಾರ್ವಜನಿಕ ಸ್ಥಳದಲ್ಲೇ ಬುರ್ಖಾ ತೆಗೆಯುವಂತೆ ಒತ್ತಾಯಿಸಿದ್ದಾರೆ.
Urdu speaking man films a woman and demands remove her burqa
ನೈತಿಕ ಪೊಲೀಸ್ ಗಿರಿ
Updated on

ಬೆಂಗಳೂರು: ರಾಜ್ಯದಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ಸದ್ದು ಮಾಡುತ್ತಿದ್ದು, ಪಾರ್ಕ್ ನಲ್ಲಿ ಕುಳಿತಿದ್ದ ಜೋಡಿಗೆ ವ್ಯಕ್ತಿಯೋರ್ವ ಪ್ರಶ್ನಿಸಿರುವ ಘಟನೆ ನಡೆದಿದೆ.

ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಕಿರಣ್ ಆರಾದ್ಯ (@KiranAradhyaadv) ಎಂಬ ಎಕ್ಸ್ ಖಾತೆದಾರ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಉರ್ದು ಮಾತನಾಡುತ್ತಿದ್ದ ವ್ಯಕ್ತಿಯೊಬ್ಬ ಮಹಿಳೆಯ ವಿಡಿಯೊ ಚಿತ್ರೀಕರಿಸಿ, ಸಾರ್ವಜನಿಕ ಸ್ಥಳದಲ್ಲೇ ಬುರ್ಖಾ ತೆಗೆಯುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ, ಬುರ್ಖಾ ಧರಿಸಿದ್ದ ಮಹಿಳೆಯೊಬ್ಬರು ವ್ಯಕ್ತಿಯೊಂದಿಗೆ ಪಾರ್ಕಿನ ಬೆಂಚ್ ಮೇಲೆ ಕುಳಿತು ಮಾತನಾಡುತ್ತಿದ್ದಾಗ ಅಲ್ಲಿಗೆ ಬಂದ ಉರ್ದು ಮಾತನಾಡುವ ವ್ಯಕ್ತಿ ಇವರನ್ನು ಪ್ರಶ್ನೆ ಮಾಡಿದ್ದಾನೆ.

Urdu speaking man films a woman and demands remove her burqa
Namma Metro: ಮೆಟ್ರೋ ಪ್ರಯಾಣಿಕರೇ ಹುಷಾರ್; ಹುಚ್ಚಾಟ ಆಡಿದ್ರೆ ಬೀಳುತ್ತೆ 5 ರಿಂದ 25 ಸಾವಿರ ರೂ.ವರೆಗೆ ದಂಡ!

ಈ ವೇಳೆ ಆತ ಯಾರು ಎಂದು ಕೇಳಿದಾಗ ಮಹಿಳೆ ಅವರು ನನ್ನ ಸ್ನೇಹಿತರು ಎಂದು ಹೇಳಿದ್ದಾರೆ. ಇದಕ್ಕೆ ಆಕ್ರೋಶಗೊಂಡ ವ್ಯಕ್ತಿ ಹಿಂದೂ ವ್ಯಕ್ತಿಯೊಂದಿಗೆ ಇರಲು ನಾಚಿಕೆಯಾಗಲ್ವ.. ನಿಮ್ಮಂತವರಿಂದಲೇ ನಮಗೆ ಕೆಟ್ಟ ಹೆಸರು. ನಿಮ್ಮ ಮನೆಯವರ ನಂಬರ್ ಕೊಡು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ

ಮಹಿಳೆ ವಿರೋಧದ ನಡುವೆಯೂ ತನ್ನ ಮೊಬೈಲ್ ನಲ್ಲಿ ಆಕೆಯ ವಿಡಿಯೋ ಚಿತ್ರೀಕರಿಸಿದ್ದಾನೆ.

ಅಲ್ಲದೆ ಬುರ್ಖಾ ತೆಗೆಯುವಂತೆ ಒತ್ತಾಯಿಸಿದ್ದು, ನಿಮ್ಮಿಂದಲೇ ಮುಸ್ಲಿಮರಿಗೆ ಕೆಟ್ಟ ಹೆಸರು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಹೇಳಲಾಗಿದೆ. ಈ ಘಟನೆಯ ವಿಡಿಯೊ ವ್ಯಾಪಕವಾಗಿ ಹಂಚಿಕೆಯಾಗುತ್ತಿದ್ದು, ನೆಟ್ಟಿಗರ ನಡುವೆ ತೀವ್ರ ಚರ್ಚೆಗೆ ಕಾರಣವಾಗಿದೆ.

ವ್ಯಾಪಕ ವಿರೋಧ

ಇನ್ನು ಉರ್ದು ಮಾತನಾಡುವ ವ್ಯಕ್ತಿಯ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಪೋಸ್ಟ್‌ನಲ್ಲಿ, "ಸಾರ್ವಜನಿಕವಾಗಿ ಮಹಿಳೆಯನ್ನು ಚಿತ್ರೀಕರಿಸಿ ಬಟ್ಟೆ ತೆಗೆಯುವಂತೆ ಒತ್ತಾಯಿಸುವುದನ್ನು ಯಾವ ಧರ್ಮ ಬೋಧಿಸುತ್ತದೆ? ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ರಾಜ್ಯ ಸರ್ಕಾರದ ಕೈಯಲ್ಲಿದೆಯೇ ಅಥವಾ ಹೊರಗುತ್ತಿಗೆ ನೀಡಲಾಗಿದೆಯೇ?" ಎಂಬ ಪ್ರಶ್ನೆಗಳನ್ನೂ ಎತ್ತಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com