ಲಿಯಾಮ್ ಲಿವಿಂಗ್‌ಸ್ಟೋನ್ 
ಕ್ರಿಕೆಟ್

IPL 2027: 4 ಆಟಗಾರರ ವಿನಿಮಯ; CSK ಸೇರಿ ಬರೋಬ್ಬರಿ ₹7 ಕೋಟಿ ಕಳೆದುಕೊಂಡ SRH ಸ್ಟಾರ್ ಆಟಗಾರ!

ಇಂಗ್ಲೆಂಡ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಆಸ್ಟ್ರೇಲಿಯಾದ ಜ್ಯಾಕ್ ಎಡ್ವರ್ಡ್ಸ್ ಅವರು ಸನ್‌ರೈಸರ್ಸ್ ಹೈದರಾಬಾದ್ ಅನ್ನು ತೊರೆದು ಚೆನ್ನೈ ಸೂಪರ್ ಕಿಂಗ್ಸ್‌ ಸೇರಲಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ಸನ್‌ರೈಸರ್ಸ್ ಹೈದರಾಬಾದ್(ಎಸ್‌ಆರ್‌ಹೆಚ್) ತಂಡಗಳು, ನಾಲ್ಕು ಆಟಗಾರರನ್ನು ಒಳಗೊಂಡ ಹೈ ಪ್ರೊಫೈಲ್ ಟ್ರೇಡ್ ನಡೆಸುತ್ತಿದ್ದು, ಆಟಗಾರರನ್ನು ಉಳಿಸಿಕೊಳ್ಳುವ ಘೋಷಣೆಯ ಗಡುವು ಮುಗಿದಿದೆ.

ಇಂಗ್ಲೆಂಡ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಆಸ್ಟ್ರೇಲಿಯಾದ ಜ್ಯಾಕ್ ಎಡ್ವರ್ಡ್ಸ್ ಅವರು ಸನ್‌ರೈಸರ್ಸ್ ಹೈದರಾಬಾದ್ ಅನ್ನು ತೊರೆದು ಚೆನ್ನೈ ಸೂಪರ್ ಕಿಂಗ್ಸ್‌ ಸೇರಲಿದ್ದಾರೆ. ಇದಕ್ಕೆ ಪ್ರತಿಯಾಗಿ, ಸಿಎಸ್‌ಕೆ, ಎಸ್‌ಆರ್‌ಹೆಚ್ ವೇಗಿ ಖಲೀಲ್ ಅಹ್ಮದ್ ಮತ್ತು ಆಸ್ಟ್ರೇಲಿಯಾದ ವೇಗಿ ನಾಥನ್ ಎಲಿಸ್ ಅವರನ್ನು ನೀಡಲಿವೆ.

ಐಪಿಎಲ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಅನುಭವಿ ಆಲ್‌ರೌಂಡರ್ ಲಿವಿಂಗ್‌ಸ್ಟೋನ್ ಸಿಎಸ್‌ಕೆಗೆ 6 ಕೋಟಿ ರೂಪಾಯಿಗೆ, ಅತ್ಯಂತ ಕಡಿಮೆ ಶುಲ್ಕಕ್ಕೆ CSK ಸೇರಿದ್ದಾರೆ ಎಂದು ದೃಢಪಡಿಸಲಾಗಿದೆ.

ಲಿವಿಂಗ್‌ಸ್ಟೋನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಬಿಡುಗಡೆಗೊಳಿಸಿದ ನಂತರ, ಹಿಂದಿನ ಐಪಿಎಲ್ ಹರಾಜಿನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಸೇರಿದ್ದರು. SRH ತಂಡವು ಅವರನ್ನು 13 ಕೋಟಿ ರೂ. ಗೆ ಖರೀದಿಸಿತ್ತು. ಇದೀಗ ಅವರು 7 ಕೋಟಿ ರೂಪಾಯಿ ನಷ್ಟದೊಂದಿಗೆ ಸಿಎಸ್ ಕೆ ಸೇರಿದ್ದಾರೆ.

ಆಸ್ಟ್ರೇಲಿಯಾದ ಸೀಮ್-ಬೌಲಿಂಗ್ ಆಲ್-ರೌಂಡರ್ ಎಡ್ವರ್ಡ್ಸ್, ತಮ್ಮ ಹಿಂದಿನ 3 ಕೋಟಿ ರೂಪಾಯಿಗಳ ಸಂಭಾವನೆಯೊಂದಿಗೆ ಚೆನ್ನೈ ತಂಡವನ್ನು ಸೇರಿಕೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆಸ್ಟ್ರೇಲಿಯಾ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಮೊದಲೇ ಎಡ್ವರ್ಡ್ಸ್ ಅವರನ್ನು ಎಸ್‌ಆರ್‌ಹೆಚ್ (SRH) ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ, ಗಾಯದ ಕಾರಣದಿಂದಾಗಿ ಅವರು ಐಪಿಎಲ್ 2026ರಲ್ಲಿ ಆಡಲು ಸಾಧ್ಯವಾಗಲಿಲ್ಲ.

ಬದಲಾಗಿ, ಎಸ್‌ಆರ್‌ಹೆಚ್ ತಂಡವು ಎಡಗೈ ವೇಗದ ಬೌಲರ್ ಖಲೀಲ್ ಅವರನ್ನು ಅವರ ಹಿಂದಿನ 4.8 ಕೋಟಿ ರೂಪಾಯಿಗಳ ಸಂಭಾವನೆಯೊಂದಿಗೆ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. 2018 ರಿಂದ 2021ರವರೆಗೆ ಎಸ್‌ಆರ್‌ಹೆಚ್ ತಂಡದಲ್ಲಿದ್ದ ಖಲೀಲ್, ಇದೀಗ ಮತ್ತೆ ಆ ತಂಡಕ್ಕೆ ಮರಳಿದ್ದಾರೆ.

ಇನ್ನು ಆಸ್ಟ್ರೇಲಿಯಾದ ವೇಗದ ಬೌಲರ್ ಎಲ್ಲಿಸ್ ಕೂಡ 2 ಕೋಟಿ ರೂಪಾಯಿಗಳ ತಮ್ಮ ಹಿಂದಿನ ಸಂಭಾವನೆಯೊಂದಿಗೆ ಎಸ್‌ಆರ್‌ಹೆಚ್ ತಂಡವನ್ನು ಸೇರಿಕೊಂಡಿದ್ದಾರೆ. ತಮ್ಮ ಬೌಲಿಂಗ್‌ನಲ್ಲಿನ ವೈವಿಧ್ಯತೆ ಮತ್ತು 'ಡೆತ್ ಓವರ್‌'ಗಳಲ್ಲಿನ ಪರಿಣಾಮಕಾರಿ ಪ್ರದರ್ಶನಕ್ಕೆ ಹೆಸರುವಾಸಿಯಾಗಿರುವ ಎಲ್ಲಿಸ್, ಎಸ್‌ಆರ್‌ಹೆಚ್‌ನ ವೇಗದ ಬೌಲಿಂಗ್ ವಿಭಾಗವನ್ನು ಇನ್ನಷ್ಟು ಬಲಪಡಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಮೆರಿಕ ಮಧ್ಯಂತರ ಚುನಾವಣೆ ಎಫೆಕ್ಟ್: ಷೇರುಪೇಟೆ ಭಾರಿ ಏರಿಕೆ, ಒಂದೇ ದಿನದಲ್ಲಿ 8 ಲಕ್ಷ ಕೋಟಿ ರೂ. ಲಾಭ!

ದೀಪಾವಳಿಗೂ ಮುನ್ನ ರೈತರಿಗೆ ಸಿಹಿಸುದ್ದಿ ನೀಡಿದ ರಾಜ್ಯ ಸರ್ಕಾರ: ಬರ ಪರಿಹಾರ ಮೊತ್ತ 5 ಸಾವಿರಕ್ಕೆ ಏರಿಕೆ ಮಾಡಿದ ಡಿಕೆಶಿ

IND vs NZ: ಬ್ಯಾಟಿಂಗ್ ಮಾಡದೇ ಪಂದ್ಯಶ್ರೇಷ್ಠ ಪ್ರಶಸ್ತಿ! Anshul Kamboj ಹೆಸರಿಗೆ ಅಪರೂಪದ ದಾಖಲೆ

'ಸಾರಾ ಅಲಿ ಖಾನ್ ಫೇಕ್; ಅವರ ತಾಯಿ ನನ್ನನ್ನು ನಿಂದಿಸಿದರು': ಬೆಸ್ಟಿ ಜೊತೆಗಿನ ಮನಸ್ತಾಪ ಬಿಚ್ಚಿಟ್ಟ ಓರಿ!

ಕೆಎಂಎಫ್‌ನಿಂದ ಮತ್ತೊಂದು ಬೆಲೆ ಏರಿಕೆ ಬಿಸಿ: ಹಾಲು, ಮೊಸರಿನ ನಂತರ ನಂದಿನಿ ತುಪ್ಪ, ಬೆಣ್ಣೆ ಹಾಗೂ ಪನೀರ್ ಬೆಲೆಯಲ್ಲಿ ಭಾರಿ ಏರಿಕೆ!