ಟೀಂ ಇಂಡಿಯಾ ಆಟಗಾರರು Photo | BCCI
ಕ್ರಿಕೆಟ್

IND vs NZ: ಬೌಲಿಂಗ್‌ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್; ಭಾರತಕ್ಕೆ 22 ರನ್‌ಗಳ ಜಯ, 3-1 ಅಂತರದಿಂದ ಸರಣಿ ವಶಕ್ಕೆ!

ಈ ಸೋಲು, ತವರಿನಲ್ಲಿ ಸತತ 11 ಸರಣಿಗಳನ್ನು ಗೆದ್ದುಕೊಂಡಿದ್ದ ನ್ಯೂಜಿಲೆಂಡ್‌ನ ದಾಖಲೆಯ ಓಟಕ್ಕೆ ಅಂತ್ಯ ಹಾಡಿತು.

ಮೌಂಟ್ ಮೌಂಗನುಯಿ: ವೇಗಿಗಳಾದ ಮೊಹಮ್ಮದ್ ಸಿರಾಜ್ ಮತ್ತು ಅರ್ಶದೀಪ್ ಸಿಂಗ್ ಅವರ ಶಿಸ್ತುಬದ್ಧ ಬೌಲಿಂಗ್ ದಾಳಿಯಿಂದಾಗಿ ನ್ಯೂಜಿಲೆಂಡ್ ತಂಡದ ಅಗ್ರ ಕ್ರಮಾಂಕವನ್ನು ಕೆಡವುದರೊಂದಿಗೆ, ಭಾನುವಾರ ನಡೆದ ಐದನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡವು 22 ರನ್‌ಗಳ ಅಂತರದ ಗೆಲುವು ದಾಖಲಿಸುವ ಮೂಲಕ ಸರಣಿಯನ್ನು 3-1 ಅಂತರದಿಂದ ಗೆದ್ದುಕೊಂಡಿತು.

ಶ್ರೇಯಸ್ ಅಯ್ಯರ್ ನೇತೃತ್ವದ ತಂಡವು ಹಿಂದಿನ ಟಿ20ಐ ಸರಣಿಯನ್ನು 3-2 ಅಂತರದಿಂದ ಗೆದ್ದುಕೊಂಡ ನಂತರ ನ್ಯೂಜಿಲೆಂಡ್ ಪ್ರವಾಸದ ಏಕದಿನ ಸರಣಿಯನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಿತು.

ಈ ಸೋಲು, ತವರಿನಲ್ಲಿ ಸತತ 11 ಸರಣಿಗಳನ್ನು ಗೆದ್ದುಕೊಂಡಿದ್ದ ನ್ಯೂಜಿಲೆಂಡ್‌ನ ದಾಖಲೆಯ ಓಟಕ್ಕೆ ಅಂತ್ಯ ಹಾಡಿತು.

ಅಲ್ಲದೆ, 'ವೈಟ್ ಬಾಲ್' ಸರಣಿಗಳಲ್ಲಿ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದ ಶ್ರೇಯಸ್‌ಗೆ, ಈ ಗೆಲುವು ಸ್ವಲ್ಪ ನಿರಾಳತೆಯನ್ನು ನೀಡಲಿದೆ; ಏಕೆಂದರೆ ಅವರು ಇಲ್ಲಿ ಆಡಿದ ಒಂಬತ್ತು ಇನಿಂಗ್ಸ್‌ಗಳಲ್ಲಿ ಕೇವಲ ಒಂದು ಅರ್ಧಶತಕ ಮಾತ್ರ ಗಳಿಸಲು ಶಕ್ತರಾದರು.

210 ರನ್‌ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡವು ಸಾಕಷ್ಟು ಪರದಾಡಿತು. ಭಾರತೀಯ ವೇಗದ ಬೌಲರ್‌ಗಳ ಅತ್ಯುತ್ತಮ ಬೌಲಿಂಗ್ ದಾಳಿಯು ತಂಡದ ಬ್ಯಾಟರ್‌ಗಳನ್ನು ಸಂಕಷ್ಟಕ್ಕೆ ಸಿಲುಕಿಸಿತು. ಭಾರತವು 209 ರನ್‌ಗಳಿಗೆ ಆಲೌಟ್ ಆಗಿದ್ದಕ್ಕೆ ಪ್ರತಿಯಾಗಿ, ನ್ಯೂಜಿಲೆಂಡ್ ತಂಡವು 187 ರನ್‌ಗಳಿಗೆ ಆಲೌಟ್ ಆಯಿತು. ಈ ಪಂದ್ಯದಲ್ಲಿ ಅರ್ಶದೀಪ್ (3/30) ಮತ್ತು ಸಿರಾಜ್ (2/50) ಅತ್ಯುತ್ತಮ ಫಾರ್ಮ್‌ನಲ್ಲಿದ್ದರು.

ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 42.1 ಓವರ್‌ಗಳಲ್ಲಿಯೇ 209 ರನ್‌ಗಳಿಗೆ ಆಲೌಟ್ ಆಯಿತು.

ಭಾರತದ ಪರ ಅಕ್ಷರ್ ಪಟೇಲ್ ಮತ್ತು ಇಶಾನ್ ಕಿಶನ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರಾದರೂ ಬೇರೆ ಯಾವುದೇ ಬ್ಯಾಟರ್ ರನ್ ಕಲೆಹಾಕುವಲ್ಲಿ ವಿಫಲರಾದರು. ರೋಹಿತ್ ಶರ್ಮಾ 7, ರುತುರಾಜ್ ಗಾಯಕ್ವಾಡ್ 18, ವಿರಾಟ್ ಕೊಹ್ಲಿ 5, ನಾಯಕ ಶ್ರೇಯಸ್ ಅಯ್ಯರ್ 22 ಮತ್ತು ನಮನ್ ಧೀರ್ 22 ರನ್ ಗಳಿಸಲಷ್ಟೇ ಶಕ್ತರಾದರು.

ನ್ಯೂಜಿಲೆಂಡ್ ಪರ ಜೇಕಬ್ ಡಫಿ (3/60) ಮತ್ತು ನಾಯಕ ಮಿಚೆಲ್ ಸ್ಯಾಂಟ್ನರ್ (3/47) ಉತ್ತಮ ಬೌಲಿಂಗ್ ಮಾಡಿದರು. ಮ್ಯಾಥ್ಯೂ ಫಿಶರ್ 2 ವಿಕೆಟ್ ಕಬಳಿಸಿದರೆ, ಬ್ಲೇರ್ ಟಿಕ್ನರ್ ಮತ್ತು ಮೈಕೆಲ್ ಬ್ರೇಸ್‌ವೆಲ್ ತಲಾ ಒಂದು ವಿಕೆಟ್ ಪಡೆದು ಕಡಿಮೆ ಮೊತ್ತಕ್ಕೆ ಎದುರಾಳಿ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

210 ರನ್ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡವು 48.1 ಓವರ್‌ಗಳಲ್ಲಿ 187 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ ತಂಡವು 22 ರನ್‌ಗಳ ರೋಚಕ ಗೆಲುವು ಸಾಧಿಸಿತು ಮತ್ತು 3-1 ಅಂತರದಲ್ಲಿ ಸರಣಿಯನ್ನು ಗೆದ್ದುಕೊಂಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹವಾಮಾನ: ನವೆಂಬರ್ 17ರ ವೇಳೆಗೆ ಬಂಗಾಳ ಕೊಲ್ಲಿಯಲ್ಲಿ ತೀವ್ರ ಚಂಡಮಾರುತ ಸಾಧ್ಯತೆ; ಭಾರಿ ಮಳೆಯ ಎಚ್ಚರಿಕೆ

ಟಿಟಿಡಿಯ ಶ್ರೀ ವೆಂಕಟೇಶ್ವರ ಅನ್ನಪ್ರಸಾದ ಟ್ರಸ್ಟ್‌ಗೆ ₹10 ಕೋಟಿ ದೇಣಿಗೆ ನೀಡಿದ ಭಕ್ತ!

ಮಿಯಾಮಿ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರಿ ದುರಂತ; ಟ್ಯಾಕ್ಸಿವೇಯಲ್ಲಿ ಬೋಯಿಂಗ್ ವಿಮಾನಗಳ ಡಿಕ್ಕಿ, ಇಬ್ಬರಿಗೆ ಗಾಯ!

ಜೌಲ್ಜಿಬಿ ಮೇಳದಲ್ಲಿ ಹೈಡ್ರಾಮಾ: ವೇದಿಕೆಯಲ್ಲೇ ಮೈಕ್ ಎಸೆದ ಕಾಂಗ್ರೆಸ್ ಶಾಸಕ, ಉತ್ತರಾಖಂಡ ಸಿಎಂಗೆ ಬಹಿರಂಗ ಸವಾಲು!

ಗಾಜಾ: ಅಕ್ಟೋಬರ್ 7ರ ದಾಳಿಯ ರೂವಾರಿ, ಹಮಾಸ್ ಕಮಾಂಡರ್ ಸಮೀರ್ ಅಬು ಯೂನಿಸ್ ಇಸ್ರೇಲ್ ದಾಳಿಯಲ್ಲಿ ಫಿನಿಶ್!