ತಂದೆ ಸೆಹ್ವಾಗ್ ಜೊತೆಗೆ ಆರ್ಯವೀರ್ ವಿಡಿಯೋ ಕಾಲ್ 
ಕ್ರಿಕೆಟ್

'ಸೆಹ್ವಾಗ್' ಎಂದು ಕೂಗುತ್ತಿದ್ದ ಪಾಕ್ ಅಭಿಮಾನಿಗಳು; 'ಸೀತಾ ರಾಮ್' ಎಂದು ಜಪಿಸುತ್ತಿದ್ದ ಆರ್ಯವೀರ್: ತಂದೆ-ಮಗನ ಫೋನ್ ಸಂಭಾಷಣೆ ವೈರಲ್!

ಪಂದ್ಯದ ಅಂತಿಮ ಕ್ಷಣಗಳಲ್ಲಿ ತೀವ್ರ ಆತಂಕವಿದ್ದಾಗ ತಾನು 'ಸೀತಾ ರಾಮ್, ಸೀತಾ ರಾಮ್' ಎಂದು ಜಪಿಸುತ್ತಿದ್ದೆ ಎಂದು ಆರ್ಯವೀರ್ ತಿಳಿಸಿದರು.

ಅಂಡರ್-19 ಏಷ್ಯಾ ಕಪ್ 2026 ಪ್ರಶಸ್ತಿಯನ್ನು ಭಾರತ ತಂಡ ಗೆದ್ದುಕೊಂಡಿದ್ದು, ಈ ಟೂರ್ನಿಯಲ್ಲಿ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ 'ಪ್ಲೇಯರ್ ಆಫ್ ದಿ ಸೀರೀಸ್' ಪ್ರಶಸ್ತಿಗೆ ಭಾಜನರಾದರು. ಫೈನಲ್ ಪಂದ್ಯದಲ್ಲಿ ನಾಯಕ ಲಕ್ಷ್ಯ ರೈಚಂದಾನಿ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಆರ್ಯವೀರ್ ಅರ್ಧಶತಕ ಸಿಡಿಸಿದರು. 338 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟುವಲ್ಲಿ ಭಾರತಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಅಂತಿಮವಾಗಿ, ಪಂದ್ಯದ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಭಾರತ ಗೆಲುವನ್ನು ಖಚಿತಪಡಿಸಿಕೊಂಡಿತು. ಪಂದ್ಯದ ನಂತರ, ಆರ್ಯವೀರ್ ತಮ್ಮ ತಂದೆಯೊಂದಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದರು. ಈ ವೇಳೆ ಇಬ್ಬರೂ ಪಂದ್ಯದ ಅಂತಿಮ ಕ್ಷಣಗಳ ಬಗ್ಗೆ ಚರ್ಚಿಸಿದ್ದಲ್ಲದೆ, ತೆರೆಮರೆಯಲ್ಲಿ ನಡೆದ ಕೆಲವು ಕುತೂಹಲಕಾರಿ ಘಟನೆಗಳನ್ನು ಹಂಚಿಕೊಂಡರು.

ಪಂದ್ಯದ ಅಂತಿಮ ಕ್ಷಣಗಳಲ್ಲಿ ತೀವ್ರ ಆತಂಕವಿದ್ದಾಗ ತಾನು 'ಸೀತಾ ರಾಮ್, ಸೀತಾ ರಾಮ್' ಎಂದು ಜಪಿಸುತ್ತಿದ್ದೆ ಎಂದು ಆರ್ಯವೀರ್ ತಿಳಿಸಿದರು. ಅಂತಿಮವಾಗಿ, ಭಾರತದ ಕೊನೆಯ ಕ್ರಮಾಂಕದ ಆಟಗಾರರು ಪಾಕಿಸ್ತಾನದ ವಿರುದ್ಧ ನಿರ್ಣಾಯಕ ಬ್ಯಾಟಿಂಗ್ ಪ್ರದರ್ಶನ ನೀಡುವುದನ್ನು ಕಂಡು ಆಶ್ಚರ್ಯಚಕಿತರಾದ್ದಾಗಿ ತಿಳಿಸಿದರು.

'ಏನಾದರೂ ಆಗಲಿ, ಹೇಗಾದರೂ ಒಂದು ಘಟನೆ ನಡೆಯಲಿ ಎಂದು ನಾನು 'ಸೀತಾ ರಾಮ್, ಸೀತಾ ರಾಮ್, ಸೀತಾ ರಾಮ್' ಎಂದು ಜಪಿಸುತ್ತಿದ್ದೆ. ಆಗ ಅವರು ಚೆಂಡನ್ನು ಬಾರಿಸಿದರು... ಆ ಹಂತದಲ್ಲಿ, ಕೊನೆಯ ಓವರ್‌ನಲ್ಲಿ ನಮಗೆ ಎಂಟು ರನ್‌ಗಳ ಅಗತ್ಯವಿತ್ತು... ಅವರು ಬ್ಯಾಟಿಂಗ್ ಮಾಡುತ್ತಿದ್ದರು... 'ದಯವಿಟ್ಟು ಒಂದು ಬೌಂಡರಿ ಸಿಗಲಿ, ಏನಾದರೂ ಆಗಲಿ, ಹೇಗಾದರೂ ಮಾಡಿ ಏನಾದರೂ ಒಂದು ಒಳ್ಳೆಯದು ನಡೆಯಲಿ' ಎಂದು ನಾನು ಪ್ರಾರ್ಥಿಸುತ್ತಿದ್ದೆ... ಅಷ್ಟರಲ್ಲಿ ಅದು ಸಂಭವಿಸಿಯೇ ಬಿಟ್ಟಿತು! ಎಲ್ಲರೂ ಹುಚ್ಚೆದ್ದು ಸಂಭ್ರಮಿಸಿದರು' ಎಂದು ಆರ್ಯವೀರ್ ಅವರು ಸೆಹ್ವಾಗ್ ಜೊತೆ ನಡೆಸಿದ ಸಂಭಾಷಣೆಯಲ್ಲಿ ಹೇಳಿದರು.

ಈ ಸಂಭಾಷಣೆಯ ವಿಡಿಯೋವನ್ನು ಭಾರತದ ಮಾಜಿ ಆರಂಭಿಕ ಆಟಗಾರ ಸೆಹ್ವಾಗ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಫಿಸಿಯೋಗಳು ತನಗೆ ಚಿಕಿತ್ಸೆ ನೀಡುತ್ತಿದ್ದಾಗ, ಸುಮಾರು 2,000 ಪಾಕಿಸ್ತಾನಿ ಬೆಂಬಲಿಗರು ಕೂಗಾಡುತ್ತಿದ್ದರು ಎಂದು ಆರ್ಯವೀರ್ ಬಹಿರಂಗಪಡಿಸಿದರು.

'ಅಲ್ಲಿ ಟಿವಿ ಸಿಬ್ಬಂದಿಗಳ ದಂಡೇ ಇತ್ತು, ಕೇವಲ ಪಾಕಿಸ್ತಾನದಿಂದಲೇ ಅಲ್ಲ... ಅಷ್ಟೇ ಅಲ್ಲ, ನಾನು ಬ್ಯಾಟಿಂಗ್ ಮಾಡುತ್ತಿದ್ದಾಗ ನನಗೆ ಪೆಟ್ಟು ಬಿತ್ತು, ಆಗ ಫಿಸಿಯೋ ಎರಡು-ಮೂರು ಬಾರಿ ಮೈದಾನಕ್ಕೆ ಬರಬೇಕಾಯಿತು. ಆ ಸ್ಟ್ಯಾಂಡ್‌ನಲ್ಲಿ ಸುಮಾರು 2,000 ಪಾಕಿಸ್ತಾನೀಯರಿದ್ದರು; ಅವರೆಲ್ಲರೂ ಜೋರಾಗಿ ಕೂಗುತ್ತಾ ಗದ್ದಲ ಮಾಡುತ್ತಿದ್ದರು. ನಾನು ಬ್ಯಾಟಿಂಗ್ ಮಾಡುತ್ತಿದ್ದಾಗ ಪಾಕಿಸ್ತಾನೀಯರು ನನಗೆ ಬೆಂಬಲ ನೀಡುತ್ತಿದ್ದರು. ನಿಜಕ್ಕೂ, ಎಂತಹ ಮಜಾ... ಅದ್ಭುತವಾಗಿತ್ತು!' ಎಂದು ಆರ್ಯವೀರ್ ಹೇಳಿದರು.

'ಅಪ್ಪಾ, ನಾನು ತುಂಬಾ ನರ್ವಸ್ ಆಗಿದ್ದೆ... ಸೀತಾ ರಾಮ್, ಸೀತಾ ರಾಮ್ ಅಂತ ಜಪಿಸುತ್ತಿದ್ದೆ!' ಪ್ಲೇಯರ್ ಆಫ್ ದ ಟೂರ್ನಮೆಂಟ್ ಗೆಲ್ಲುವುದರಿಂದ ಹಿಡಿದು ಆ ರೋಮಾಂಚಕಾರಿ ಅಂತಿಮ ಕ್ಷಣಗಳನ್ನು ನೆನಪಿಸಿಕೊಳ್ಳುವವರೆಗೆ, ಮಗ ಆರ್ಯವೀರ್ ಜೊತೆಗಿನ ವಿಶೇಷ ಸಂಭಾಷಣೆ. ಕೆಲವು ಕ್ಷಣಗಳು ಪ್ರಶಸ್ತಿಗಳು, ರನ್ ಗಳು ಮತ್ತು ಟ್ರೋಫಿಗಳಿಗಿಂತ ದೊಡ್ಡದಾಗಿರುತ್ತವೆ. ಒಬ್ಬ ತಂದೆ ಪಾಲಿಗೆ ಶಾಶ್ವತವಾಗಿರುವ ನೆನಪುಗಳು ಇವು. ನೀವು ಯಾವಾಗಲೂ ವಿನಮ್ರವಾಗಿರಿ ಮತ್ತು ನಿಮ್ಮ ಕಠಿಣ ಪರಿಶ್ರಮ ಮತ್ತು ಪ್ರತಿಭೆಯಿಂದ ಆಕಾಶವನ್ನು ಸ್ಪರ್ಶಿಸಲಿ. ಶ್ರೀ ಸೀತಾರಾಮ್' ವಿರೇಂದ್ರ ಸೆಹ್ವಾಗ್ ಪೋಸ್ಟ್ ಗೆ ಶೀರ್ಷಿಕೆ ನೀಡಿದ್ದಾರೆ.

'ಸುಲ್ತಾನ್ ಆಫ್ ಮುಲ್ತಾನ್' ಎಂದೇ ಅಡ್ಡಹೆಸರು ಪಡೆದಿರುವ ವೀರೇಂದ್ರ ಸೆಹ್ವಾಗ್ ಅವರಿಗೆ ಪಾಕಿಸ್ತಾನದಲ್ಲಿ ಅಪಾರ ಅಭಿಮಾನಿಗಳಿದ್ದಾರೆ; ಇದಕ್ಕೆ ಕಾರಣ, 2004ರಲ್ಲಿ ಆ ನಗರದಲ್ಲಿ ನಡೆದ ಟೆಸ್ಟ್ ಪಂದ್ಯವೊಂದರಲ್ಲಿ ಅವರು ಗಳಿಸಿದ ತ್ರಿಶತಕ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹವಾಮಾನ: ನವೆಂಬರ್ 17ರ ವೇಳೆಗೆ ಬಂಗಾಳ ಕೊಲ್ಲಿಯಲ್ಲಿ ತೀವ್ರ ಚಂಡಮಾರುತ ಸಾಧ್ಯತೆ; ಭಾರಿ ಮಳೆಯ ಎಚ್ಚರಿಕೆ

ಟಿಟಿಡಿಯ ಶ್ರೀ ವೆಂಕಟೇಶ್ವರ ಅನ್ನಪ್ರಸಾದ ಟ್ರಸ್ಟ್‌ಗೆ ₹10 ಕೋಟಿ ದೇಣಿಗೆ ನೀಡಿದ ಭಕ್ತ!

ಮಿಯಾಮಿ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರಿ ದುರಂತ; ಟ್ಯಾಕ್ಸಿವೇಯಲ್ಲಿ ಬೋಯಿಂಗ್ ವಿಮಾನಗಳ ಡಿಕ್ಕಿ, ಇಬ್ಬರಿಗೆ ಗಾಯ!

ಜೌಲ್ಜಿಬಿ ಮೇಳದಲ್ಲಿ ಹೈಡ್ರಾಮಾ: ವೇದಿಕೆಯಲ್ಲೇ ಮೈಕ್ ಎಸೆದ ಕಾಂಗ್ರೆಸ್ ಶಾಸಕ, ಉತ್ತರಾಖಂಡ ಸಿಎಂಗೆ ಬಹಿರಂಗ ಸವಾಲು!

ಗಾಜಾ: ಅಕ್ಟೋಬರ್ 7ರ ದಾಳಿಯ ರೂವಾರಿ, ಹಮಾಸ್ ಕಮಾಂಡರ್ ಸಮೀರ್ ಅಬು ಯೂನಿಸ್ ಇಸ್ರೇಲ್ ದಾಳಿಯಲ್ಲಿ ಫಿನಿಶ್!