ನಾಯಕ ಶುಭ್ ಮನ್ ಗಿಲ್ ಮತ್ತು ರಿಷಬ್ ಪಂತ್ 
ಕ್ರಿಕೆಟ್

ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್‌ಗೆ ಭಾರತ ತಂಡ ಆಯ್ಕೆ; ಪ್ಲೇಯಿಂಗ್ ಇಲೆವೆನ್ ಸುಳಿವು ಕೊಟ್ಟ ನಾಯಕ ಶುಭ್`ಮನ್ ಗಿಲ್; 7 ಬ್ಯಾಟರ್‌, 4 ವೇಗಿಗಳು!

ನವೆಂಬರ್ 19ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ತಂತ್ರವನ್ನು ನಾಯಕ ಶುಭಮನ್ ಗಿಲ್ ಬಹಿರಂಗಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಿಲ್, 7 ಬ್ಯಾಟರ್‌ಗಳು, 4 ವೇಗದ ಬೌಲರ್‌ಗಳೊಂದಿಗೆ..

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ತಂಡದ ಆಯ್ಕೆ ವಿಚಾರವಾಗಿ ಟೀಂ ಇಂಡಿಯಾದಿಂದ ಮಹತ್ವದ ಸುಳಿವು ಹೊರ ಬಿದ್ದಿದ್ದು, ನಾಯಕ ಶುಭ್ ಮನ್ ಗಿಲ್ ಪ್ಲೇಯಿಂಗ್ ಇಲೆವನ್ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ.

ಇದೇ ನವೆಂಬರ್ 19ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ತಂತ್ರವನ್ನು ನಾಯಕ ಶುಭಮನ್ ಗಿಲ್ ಬಹಿರಂಗಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಿಲ್, ಏಳು ಬ್ಯಾಟರ್‌ಗಳು ಹಾಗೂ ನಾಲ್ವರು ವೇಗದ ಬೌಲರ್‌ಗಳೊಂದಿಗೆ ಕಣಕ್ಕಿಳಿಯಲು ಭಾರತ ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ.

ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಮೈದಾನದಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ನ್ಯೂಜಿಲೆಂಡ್ ನೆಲದಲ್ಲಿ ಟಿ20 ಹಾಗೂ ಏಕದಿನ ಸರಣಿಗಳನ್ನು ಗೆದ್ದಿರುವ ಭಾರತ, ಇದೀಗ ಟೆಸ್ಟ್ ಸರಣಿಯನ್ನೂ ಗೆದ್ದು ಸರಣಿ ಗೆಲುವಿನ ಹ್ಯಾಟ್ರಿಕ್ ಸಾಧಿಸುವ ಗುರಿ ಹೊಂದಿದೆ.

ಪಂತ್ ಭವಿಷ್ಯ ನಿರ್ಧಾರ

ಇದೇ ವೇಳೆ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರ ಫಾರ್ಮ್ ಮತ್ತು ಫಿಟ್‌ನೆಸ್ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೂ ಗಿಲ್ ಸ್ಪಷ್ಟನೆ ನೀಡಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಿಲ್, ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಸಂಯೋಜನೆಯ ಬಗ್ಗೆ ಮಾಹಿತಿ ನೀಡಿದರು.

ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರ ಇತ್ತೀಚಿನ ಫಾರ್ಮ್ ಮತ್ತು ಫಿಟ್‌ನೆಸ್ ಕುರಿತು ಕೇಳಿಬಂದಿರುವ ಪ್ರಶ್ನೆಗಳಿಗೆ ಗಿಲ್ ಸ್ಪಷ್ಟ ಉತ್ತರ ನೀಡಿದ್ದಾರೆ. ಪಂತ್ ಅವರ ಆಯ್ಕೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಅವರು ಹೇಳಿದ್ದಾರೆ.

"ರಿಷಭ್ ಪಂತ್ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಅವರು ಈಗಾಗಲೇ 50 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ವಿಶ್ವದ ವಿವಿಧ ದೇಶಗಳಲ್ಲಿ ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಶತಕ ಬಾರಿಸಿರುವ ವಿಕೆಟ್ ಕೀಪರ್ ಅವರು. ಅವರ ಸಾಮರ್ಥ್ಯದ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿದೆ" ಎಂದು ಗಿಲ್ ಹೇಳಿದ್ದಾರೆ.

"ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಏಳು ಪ್ರಮುಖ ಬ್ಯಾಟರ್‌ಗಳೊಂದಿಗೆ ಆಡಲು ನಾವು ಯೋಜಿಸಿದ್ದೇವೆ. ನಾಲ್ವರು ವೇಗದ ಬೌಲರ್‌ಗಳು ಖಂಡಿತವಾಗಿಯೂ ತಂಡದಲ್ಲಿರುತ್ತಾರೆ" ಎಂದು ಗಿಲ್ ಹೇಳಿದ್ದಾರೆ.

ನಾಲ್ವರು ವೇಗಿಗಳಿಗೆ ಮಣೆ?

ಇತ್ತೀಚೆಗೆ ನಡೆದ ಏಕದಿನ ಸರಣಿಯಲ್ಲಿ ಭಾರತದ ಯುವ ವೇಗಿಗಳು ಉತ್ತಮ ಪ್ರದರ್ಶನ ನೀಡಿದ್ದರು. ನಾಲ್ಕು ಪಂದ್ಯಗಳ ಸರಣಿಯನ್ನು ಭಾರತ 3-1 ಅಂತರದಲ್ಲಿ ಗೆದ್ದಿತ್ತು. ಇದೀಗ ಟೆಸ್ಟ್ ಸರಣಿಗೂ ವೇಗದ ಬೌಲರ್‌ಗಳ ಮೇಲೆ ಹೆಚ್ಚಿನ ವಿಶ್ವಾಸ ವ್ಯಕ್ತಪಡಿಸಿರುವ ಗಿಲ್, ತಂಡದಲ್ಲಿ ಉತ್ತಮ ಬೌಲರ್‌ಗಳ ಆಯ್ಕೆ ಮಾಡುವುದು ಸವಾಲಾಗಿದೆ ಎಂದಿದ್ದಾರೆ.

"ನಮ್ಮ ಎಲ್ಲಾ ವೇಗದ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ತಂಡದಲ್ಲಿ ಇಂತಹ ಆಯ್ಕೆಗಳಿರುವುದು ಒಳ್ಳೆಯ ಸಮಸ್ಯೆ" ಎಂದು ಅವರು ಹೇಳಿದ್ದಾರೆ.

ಬುಮ್ರಾ ವಾಪಸ್

ಹಿರಿಯ ವೇಗಿ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಿರುವುದು ಭಾರತದ ಬೌಲಿಂಗ್ ವಿಭಾಗಕ್ಕೆ ಮತ್ತಷ್ಟು ಬಲ ನೀಡಿದೆ. ಏಕದಿನ ತಂಡದಲ್ಲಿದ್ದ ಯುವ ವೇಗಿ ಗುರ್ನೂರ್ ಬ್ರಾರ್ ಅವರನ್ನು ಟೆಸ್ಟ್ ತಂಡದಲ್ಲೂ ಉಳಿಸಿಕೊಳ್ಳಲಾಗಿದೆ. ಆದರೆ, ಸ್ಪಿನ್ನರ್ ಕುಲದೀಪ್ ಯಾದವ್ ಅವರಿಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ.

ಪಿಚ್‌ನ ಸ್ವರೂಪದ ಬಗ್ಗೆಯೂ ಗಿಲ್ ಮಾತನಾಡಿದ್ದಾರೆ. "ನಮಗೆ ನಾಲ್ವರು ವೇಗದ ಬೌಲರ್‌ಗಳು ಬೇಕು. ಆದರೆ, ಅಂತಿಮವಾಗಿ ಯಾರಿಗೆ ಅವಕಾಶ ಸಿಗಲಿದೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಮೂರನೇ ದಿನದಿಂದ ಪಿಚ್ ಬ್ಯಾಟಿಂಗ್‌ಗೆ ಹೆಚ್ಚು ಅನುಕೂಲಕರವಾಗುತ್ತದೆ. ಹೀಗಾಗಿ ಪಿಚ್ ಮೇಲೆ ಚೆಂಡನ್ನು ಬೌನ್ಸ್ ಮಾಡಬಲ್ಲ ಬೌಲರ್‌ಗಳ ಅಗತ್ಯವಿದೆ" ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

IPL ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ MS ಧೋನಿ: ಅವರ ಮುಂದಿನ ನಡೆ ಏನು?

ವಿಶ್ವಕ್ಕೆ ಶಾಂತಿ-ಸ್ಥಿರತೆ ಅಗತ್ಯ, ಪೈಪೋಟಿ ಬದಿಗಿಟ್ಟು ಸಹಕಾರದ ಹಾದಿಯಲ್ಲಿ ಸಾಗೋಣ: India-ASEAN ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ

ಕಾಂಗ್ರೆಸ್`ಗೆ ಹೊನ್ನಾಳಿ ಶಾಸಕ ಶಾಕ್; ಶಾಂತನಗೌಡ ರಾಜೀನಾಮೆಗೆ ಮುಂದು!

ಅತಿರೇಕದ ಆಚರಣೆ ಮಧ್ಯೆಯೂ ಭಾರತ ಯುವ ಪಡೆಯನ್ನು ಶ್ಲಾಘಿಸಿದ್ದೇಕೆ ಶೋಯೆಬ್ ಅಖ್ತರ್, Pak ವಿರುದ್ಧ ಆಕ್ರೋಶ!

ಬಾಲಿವುಡ್ ನಟನ ಸಂಕಷ್ಟಕ್ಕೆ ಮಿಡಿದ ಸೋಶಿಯಲ್ ವರ್ಕರ್, ಶರದ್ ಕಪೂರ್‌ಗೆ ಆರ್ಥಿಕ ನೆರವು ನೀಡಿದ ರಾಹುಲ್ ಗುಪ್ತಾ! VIDEO