ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅನೇಕ ಅನುಭವಿ ಆಟಗಾರರನ್ನು ತನ್ನ ತಂಡದಲ್ಲಿ ಉಳಿಸಿಕೊಂಡಿದ್ದು, ಮಾಜಿ ನಾಯಕ ರಿಷಭ್ ಪಂತ್ ಅವರ ಮರಳುವಿಕೆಯನ್ನು ಸ್ವಾಗತಿಸಿದ ಮುಖ್ಯ ಕೋಚ್ ಸೌರವ್ ಗಂಗೂಲಿ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2027 ರಲ್ಲಿ ತಮ್ಮ ಅದೃಷ್ಟವನ್ನು ಬದಲಿಸಲು ಸಾಧ್ಯವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ಮಂಗಳವಾರ ಐಪಿಎಲ್ 2027ರ ಆವೃತ್ತಿಗೂ ಮುನ್ನ 16 ಆಟಗಾರರನ್ನು ಉಳಿಸಿಕೊಂಡಿದೆ. ತಂಡದ ನಾಯಕ ಅಕ್ಷರ್ ಪಟೇಲ್, ಕೆಎಲ್ ರಾಹುಲ್, ಈ ವರ್ಷದ ಜೂನ್‌ನಲ್ಲಿ ಫ್ರಾಂಚೈಸಿಗೆ ಮರಳಿದ ವಿಕೆಟ್ ಕೀಪರ್-ಬ್ಯಾಟರ್ ಮತ್ತು ತಂಡದ ಮಾಜಿ ನಾಯಕ ರಿಷಭ್ ಪಂತ್ ಮತ್ತು ಆರಂಭಿಕ ಆಟಗಾರ ಪೃಥ್ವಿ ಶಾ ಸೇರಿದಂತೆ ಹಲವಾರು ಆಟಗಾರರ ಮೇಲೆ ನಂಬಿಕೆಯನ್ನಿಟ್ಟಿದೆ. ಡೇವಿಡ್ ಮಿಲ್ಲರ್, ಕೈಲ್ ಜೇಮಿಸನ್, ಲುಂಗಿ ಎನ್‌ಗಿಡಿ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅವರಂತಹ ವಿದೇಶಿ ಆಟಗಾರರನ್ನು ಉಳಿಸಿಕೊಂಡಿದೆ. ಸಮೀರ್ ರಿಜ್ವಿ, ಅಶುತೋಷ್ ಶರ್ಮಾ, ಮಾಧವ್ ತಿವಾರಿ, ವಿಪ್ರಜ್ ನಿಗಮ್, ಔಕಿಬ್ ನಬಿ, ಮುಖೇಶ್ ಕುಮಾರ್, ತ್ರಿಪುರಾನ ವಿಜಯ್ ಮತ್ತು ಜೀಶನ್ ಅನ್ಸಾರಿ ಸೇರಿದಂತೆ ಯುವ ಪ್ರತಿಭೆಗಳನ್ನು ಒಳಗೊಂಡಿದೆ.
ಆಟಗಾರರ ರಿಲೀಸ್ ಮತ್ತು ರಿಟೆನ್ಶನ್ ಪ್ರಕ್ರಿಯೆಯ ಬಗ್ಗೆ ಮಾತನಾಡಿದ ಕೋಚ್ ಗಂಗೂಲಿ, 'ಇದು ಎಲ್ಲದರ ಮಿಶ್ರಣವಾಗಿದೆ - ಕಳೆದ ಕೆಲವು ವರ್ಷಗಳ ಪ್ರದರ್ಶನ, ಮುಂದಿನ ಎರಡು ವರ್ಷಗಳವರೆಗೆ ಫ್ರಾಂಚೈಸಿಗೆ ಏನು ಬೇಕೋ ಅದನ್ನು ಉಳಿಸಿಕೊಳ್ಳಲಾಗಿದೆ. ಐಪಿಎಲ್‌ನಲ್ಲಿ ಕ್ರಿಕೆಟ್ ಪಂದ್ಯಗಳನ್ನು ಗೆಲ್ಲಲು ಯಾರು ಸಾಕಷ್ಟು ಉತ್ತಮರು ಎಂಬುದನ್ನು ಅದು ನಂಬಿದೆಯೋ ಅದರ ಆಧಾರದ ಮೇಲೆ ಈ ಪ್ರಕ್ರಿಯೆ ನಡೆದಿದೆ' ಎಂದರು.
'ರಿಷಭ್ ಪಂತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಿ ಸೇರಿಸಿಕೊಂಡಿರುವುದು ತುಂಬಾ ಸಂತೋಷ ತಂದಿದೆ. ಅವರು ಗುಣಮಟ್ಟದ ಆಟಗಾರ. ಫ್ರಾಂಚೈಸಿಯ ಅದೃಷ್ಟವನ್ನು ಬದಲಿಸುವ ವಿಶ್ವಾಸ ನನಗಿದೆ' ಎಂದು ಗಂಗೂಲಿ ಜಿಯೋಸ್ಟಾರ್‌ಗೆ ತಿಳಿಸಿದ್ದಾರೆ.
ತಂಡಕ್ಕೆ ನಾಯಕ ಅಕ್ಷರ್ ಪಟೇಲ್ ಅವರ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ ಗಂಗೂಲಿ, 'ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಅಕ್ಷರ್ ಅನಿವಾರ್ಯ. ಹೌದು, ಇತರ ಫ್ರಾಂಚೈಸಿಗಳು ಅವರನ್ನು ಕೇಳುತ್ತಿದ್ದರು. ಆದರೆ, ನಾವು ಅವರನ್ನು ಉಳಿಸಿಕೊಂಡಿದ್ದೇವೆ. ಐಪಿಎಲ್ ಟ್ರೇಡ್ ವಿಂಡೋದಲ್ಲಿ ವಿಷಯಗಳು ಹೀಗೆಯೇ ಕೆಲಸ ಮಾಡುತ್ತವೆ. ಆದಾಗ್ಯೂ, ಅಕ್ಷರ್ ಮತ್ತು ಅಶುತೋಷ್ ಇಬ್ಬರ ವಿಷಯಕ್ಕೂ ಬಂದಾಗ, ಉತ್ತರವು ಸಂಪೂರ್ಣ "ಇಲ್ಲ" ಎಂದೇ ಆಗಿರುತ್ತದೆ. ಅವರು ನಮ್ಮ ತಂಡಕ್ಕೆ ಅವಿಭಾಜ್ಯ ಅಂಗವಾಗಿದ್ದಾರೆ' ಎಂದು ಹೇಳಿದರು.
ತಂಡವು ಹೂಡಿಕೆ ಮಾಡಿರುವ ಯುವ ಆಟಗಾರರ ಬಗ್ಗೆ ಮಾತನಾಡಿದ ಗಂಗೂಲಿ, 'ಸಮೀರ್ ರಿಜ್ವಿ ಯೋಗ್ಯ ಯುವ ಆಟಗಾರ. ಅವರ ಆಟ ಸುಧಾರಿಸುತ್ತಿದೆ ಮತ್ತು ಅಶುತೋಷ್ ಶರ್ಮಾ ನಾವು ಹೆಚ್ಚು ಅವಲಂಬಿಸಿರುವ ಮತ್ತೊಬ್ಬ ಆಟಗಾರ. ಇವರು ಡಿಸಿ ಕಾಲಾನಂತರದಲ್ಲಿ ಹೂಡಿಕೆ ಮಾಡಿರುವ ಇಬ್ಬರು ಯುವ ಆಟಗಾರರು ಮತ್ತು ಅವರು ಯಶಸ್ವಿ ಆವೃತ್ತಿಯನ್ನು ಹೊಂದುತ್ತಾರೆ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡವು ತನ್ನ ಹಿಂದಿನ 25 ಸದಸ್ಯರ ತಂಡದಿಂದ ಒಂಬತ್ತು ಆಟಗಾರರನ್ನು ಬಿಡುಗಡೆ ಮಾಡಿದೆ: ನಿತೀಶ್ ರಾಣಾ, ಕರುಣ್ ನಾಯರ್, ಪಾತುಮ್ ನಿಸ್ಸಂಕಾ, ಸಾಹಿಲ್ ಪರಾಖ್, ಅಜಯ್ ಮಂಡಲ್, ಅಭಿಷೇಕ್ ಪೊರೆಲ್, ದುಷ್ಮಂತ ಚಮೀರ, ರೆಹಾನ್ ಅಹ್ಮದ್ ಮತ್ತು ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಸೇರಿದ್ದಾರೆ. ಸ್ಟಾರ್ಕ್ ಐಪಿಎಲ್ 2027ರ ಸೀಸನ್‌ಗೆ ತಮ್ಮ ಲಭ್ಯತೆಯಿಲ್ಲ ಎಂದು ಫ್ರಾಂಚೈಸಿ ಮತ್ತು ಬಿಸಿಸಿಐ ಎರಡಕ್ಕೂ ತಿಳಿಸಿದ್ದರು.
ಡಿಸೆಂಬರ್ 16 ರಂದು ಗೋವಾದಲ್ಲಿ ನಡೆಯಲಿರುವ ಐಪಿಎಲ್ 2027ರ ಮಿನಿ-ಹರಾಜಿನಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು ಫ್ರಾಂಚೈಸಿ ನೋಡುತ್ತದೆ.