ಐಪಿಎಲ್ ಆಟಗಾರರ ರಿಲೀಸ್ ಪಟ್ಟಿ ಬಿಡುಗಡೆ (ಸಾಂದರ್ಭಿಕ ಚಿತ್ರ) 
ಕ್ರಿಕೆಟ್

ಐಪಿಎಲ್ 2027: ಎಲ್ಲಾ 10 ತಂಡಗಳ ಆಟಗಾರರ ರಿಲೀಸ್ ಪಟ್ಟಿ ಪ್ರಕಟ; 18 ಕೋಟಿ ರೂಗೆ ಖರೀದಿಸಿದ್ದ ಆಟಗಾರನಿಗೇ ಗೇಟ್`ಪಾಸ್ ಕೊಟ್ಟ ಕೆಕೆಆರ್, RCB ಕಥೆ ಏನು?

ಆಟಗಾರರ ರಿಲೀಸ್ ಪಟ್ಟಿಯಲ್ಲಿ ಹಲವು ಅಚ್ಚರಿಯ ನಿರ್ಧಾರಗಳು ಹೊರಬಿದ್ದಿದ್ದು, ಅದರಲ್ಲೂ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಅವರನ್ನು ತಂಡದ ಮೆಂಟರ್ ಆಗಿ ನೇಮಿಸಿ..

ನವದೆಹಲಿ: ಐಪಿಎಲ್ 2027ರ ಮಿನಿ ಹರಾಜಿಗೂ ಮುನ್ನ ಆಟಗಾರರ ರಿಟೆನ್ಷನ್ ಪ್ರಕ್ರಿಯೆ ಸಾಕಷ್ಟು ಕುತೂಹಲ ಮೂಡಿಸಿದ್ದು, 10 ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಹಾಗೂ ಬಿಡುಗಡೆ ಮಾಡಿರುವ ಆಟಗಾರರ ಪಟ್ಟಿಯನ್ನು ಪ್ರಕಟಿಸಿವೆ.

ಈ ಆಟಗಾರರ ರಿಲೀಸ್ ಪಟ್ಟಿಯಲ್ಲಿ ಹಲವು ಅಚ್ಚರಿಯ ನಿರ್ಧಾರಗಳು ಹೊರಬಿದ್ದಿದ್ದು, ಅದರಲ್ಲೂ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಅವರನ್ನು ತಂಡದ ಮೆಂಟರ್ ಆಗಿ ನೇಮಿಸಿರುವುದು ದೊಡ್ಡ ಸುದ್ದಿಯಾಗಿದೆ.

ಇದರೊಂದಿಗೆ ಧೋನಿ ಅವರ ಆಟಗಾರನಾಗಿ ಐಪಿಎಲ್ ವೃತ್ತಿಜೀವನ ಅಂತ್ಯಗೊಂಡಿದೆ.

ಅಲ್ಲದೆ, 14.2 ಕೋಟಿ ರೂ. ಮೊತ್ತಕ್ಕೆ ತಂಡ ಸೇರಿದ್ದ ಪ್ರಶಾಂತ್ ವೀರ್ ಸೇರಿದಂತೆ ಮ್ಯಾಟ್ ಹೆನ್ರಿ ಮತ್ತು ಸ್ಪೆನ್ಸರ್ ಜಾನ್ಸನ್ ಅವರನ್ನು ಸಿಎಸ್‌ಕೆ ಬಿಡುಗಡೆ ಮಾಡಿದೆ.

ಪ್ರಮುಖ ಆಟಗಾರರ ಕೈಬಿಟ್ಟ ಮುಂಬೈ ಇಂಡಿಯನ್ಸ್

ಮತ್ತೊಂದೆಡೆ, ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕೂಡ ಪ್ರಮುಖ ಆಟಗಾರರಿಗೆ ಗೇಟ್‌ಪಾಸ್ ನೀಡಿದೆ. ದುಬಾರಿ ಆಟಗಾರರಾದ ಟ್ರೆಂಟ್ ಬೌಲ್ಟ್, ದೀಪಕ್ ಚಹರ್ ಮತ್ತು ಸ್ಪಿನ್ನರ್ ಅಲ್ಲಾ ಗಜನ್‌ಫರ್ ಅವರನ್ನು ತಂಡದಿಂದ ಕೈಬಿಡಲಾಗಿದೆ.

18 ಕೋಟಿ ರೂಗೆ ಖರೀದಿಸಿದ್ದ ಆಟಗಾರನಿಗೇ ಗೇಟ್`ಪಾಸ್ ಕೊಟ್ಟ KKR

ಇನ್ನು ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡ 18 ಕೋಟಿ ರೂ. ಮೊತ್ತದ ಸ್ಟಾರ್ ವೇಗಿ ಮಥೀಶ ಪತಿರಣ ಅವರನ್ನು ಬಿಡುಗಡೆ ಮಾಡಿರುವುದು ಅಚ್ಚರಿ ಮೂಡಿಸಿದೆ. ಅವರೊಂದಿಗೆ ಮುಸ್ತಫಿಜುರ್ ರೆಹಮಾನ್, ರಚಿನ್ ರವೀಂದ್ರ ಮತ್ತು ಅಜಿಂಕ್ಯ ರಹಾನೆ ಅವರನ್ನೂ ತಂಡದಿಂದ ಕೈಬಿಡಲಾಗಿದೆ.

ಉಳಿದಂತೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಿಚೆಲ್ ಸ್ಟಾರ್ಕ್, ನಿತೀಶ್ ರಾಣಾ, ಪಥುಮ್ ನಿಸ್ಸಾಂಕ ಸೇರಿದಂತೆ ಪ್ರಮುಖ ಆಟಗಾರರನ್ನು ಬಿಡುಗಡೆ ಮಾಡಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜೇಕಬ್ ಬೆಥೆಲ್, ಮಂಗೇಶ್ ಯಾದವ್ ಮತ್ತು ರಿಚರ್ಡ್ ಗ್ಲೀಸನ್ ಸೇರಿದಂತೆ ಐವರು ಆಟಗಾರರನ್ನು ಕೈಬಿಟ್ಟಿದೆ.

ರಾಜಸ್ಥಾನ್ ರಾಯಲ್ಸ್, ಗುಜರಾತ್ ಟೈಟಾನ್ಸ್, ಸನ್‌ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡಗಳೂ ಹಲವು ಆಟಗಾರರನ್ನು ಬಿಡುಗಡೆ ಮಾಡಿವೆ.

ಐಪಿಎಲ್ 2027: 10 ತಂಡಗಳಿಂದ ಬಿಡುಗಡೆಯಾದ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ

1. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)

ಜೇಕಬ್ ಬೆಥೆಲ್, ರಿಚರ್ಡ್ ಗ್ಲೀಸನ್, ಮಂಗೇಶ್ ಯಾದವ್, ವಿಹಾನ್ ಮಲ್ಹೋತ್ರಾ, ಸಾತ್ವಿಕ್ ದೇಸ್ವಾಲ್.

2. ಗುಜರಾತ್ ಟೈಟಾನ್ಸ್ (GT)

ಇಶಾಂತ್ ಶರ್ಮಾ, ಲ್ಯೂಕ್ ವುಡ್, ಕುಲ್ವಂತ್ ಖೆಜ್ರೋಲಿಯಾ, ಶಾರುಖ್ ಖಾನ್, ಕಾನರ್ ಎಸ್ಟರ್‌ಹುಯಿಜೆನ್.

3. ಸನ್‌ರೈಸರ್ಸ್ ಹೈದರಾಬಾದ್ (SRH)

ಟ್ರಾವಿಸ್ ಹೆಡ್, ಕಮಿಂದು ಮೆಂಡಿಸ್, ಜಯದೇವ್ ಉನಾದ್ಕಟ್, ದಿಲ್ಶಾನ್ ಮಧುಶಂಕ, ಓಂಕಾರ್ ತರ್ಮಾಳೆ, ಅಮಿತ್ ಕುಮಾರ್, ಶಿವಂ ಮಾವಿ, ಜೆರಾಲ್ಡ್ ಕೊಯೆಟ್ಜಿ, ಡೇವಿಡ್ ಪೇನ್.

4. ರಾಜಸ್ಥಾನ್ ರಾಯಲ್ಸ್ (RR)

ಶಿಮ್ರಾನ್ ಹೆಟ್ಮೆಯರ್, ತುಷಾರ್ ದೇಶಪಾಂಡೆ, ಆಡಮ್ ಮಿಲ್ನೆ, ಕ್ವೆನಾ ಮಫಾಕಾ, ಕುಲದೀಪ್ ಸೇನ್, ಯುಧ್ವೀರ್ ಸಿಂಗ್, ವಿಘ್ನೇಶ್ ಪುತೂರ್, ರವಿ ಸಿಂಗ್.

5. ಪಂಜಾಬ್ ಕಿಂಗ್ಸ್ (PBKS)

ಲಾಕಿ ಫರ್ಗ್ಯುಸನ್, ಮಿಚೆಲ್ ಓವನ್, ನೆಹಾಲ್ ವಧೇರಾ, ಪೈಲಾ ಅವಿನಾಶ್, ಪ್ರವೀಣ್ ದುಬೆ, ವಿಶಾಲ್ ನಿಶಾದ್.

6. ಡೆಲ್ಲಿ ಕ್ಯಾಪಿಟಲ್ಸ್ (DC)

ಮಿಚೆಲ್ ಸ್ಟಾರ್ಕ್, ನಿತೀಶ್ ರಾಣಾ, ಅಭಿಷೇಕ್ ಪೊರೆಲ್, ಪಥುಮ್ ನಿಸ್ಸಾಂಕ, ಬೆನ್ ಡಕೆಟ್, ಕರುಣ್ ನಾಯರ್, ಸಾಹಿಲ್ ಪರಾಖ್, ದುಷ್ಮಂತ ಚಮೀರ, ರೆಹಾನ್ ಅಹ್ಮದ್, ಅಜಯ್ ಮಂಡಲ್.

7. ಕೋಲ್ಕತ್ತಾ ನೈಟ್ ರೈಡರ್ಸ್ (KKR)

ಮಥೀಶ ಪತಿರಣ, ಮುಸ್ತಫಿಜುರ್ ರೆಹಮಾನ್, ಅಜಿಂಕ್ಯ ರಹಾನೆ, ರಚಿನ್ ರವೀಂದ್ರ, ರಾಹುಲ್ ತ್ರಿಪಾಠಿ, ಆಕಾಶ್ ದೀಪ್, ಉಮ್ರಾನ್ ಮಲಿಕ್, ನವದೀಪ್ ಸೈನಿ, ತೇಜಸ್ವಿ ದಹಿಯಾ, ಬ್ಲೆಸಿಂಗ್ ಮುಜರಬಾನಿ, ದಕ್ಷ್ ಕಾಮ್ರಾ, ಲುವ್ನಿತ್ ಸಿಸೋಡಿಯಾ.

8. ಮುಂಬೈ ಇಂಡಿಯನ್ಸ್ (MI)

ಟ್ರೆಂಟ್ ಬೌಲ್ಟ್, ದೀಪಕ್ ಚಹರ್, ಅಲ್ಲಾ ಗಜನ್‌ಫರ್, ಅಥರ್ವ ಅಂಕೋಲೆಕರ್, ಕೇಶವ್ ಮಹಾರಾಜ್, ಮೊಹಮ್ಮದ್ ಇಜಾರ್, ದಾನಿಶ್ ಮಾಲೇವಾರ್, ಮಯಾಂಕ್ ಮಾರ್ಕಂಡೆ, ಮಯಾಂಕ್ ರಾವತ್.

9. ಚೆನ್ನೈ ಸೂಪರ್ ಕಿಂಗ್ಸ್ (CSK)

ಎಂ.ಎಸ್. ಧೋನಿ, ಪ್ರಶಾಂತ್ ವೀರ್, ಮ್ಯಾಥ್ಯೂ ಶಾರ್ಟ್, ಮ್ಯಾಟ್ ಹೆನ್ರಿ, ಝಾಕ್ ಫೌಲ್ಕ್ಸ್, ಅಮನ್ ಖಾನ್, ಕುಲದೀಪ್ ಯಾದವ್, ಆಕಾಶ್ ಮಧ್ವಾಲ್, ಡಿಯಾನ್ ಫಾರೆಸ್ಟರ್, ಮ್ಯಾಕ್‌ನೀಲ್ ನೊರೊನ್ಹಾ.

10. ಲಖನೌ ಸೂಪರ್ ಜೈಂಟ್ಸ್ (LSG)

ಆವೇಶ್ ಖಾನ್, ಅನ್ರಿಚ್ ನಾರ್ಟ್ಜೆ, ವನಿಂದು ಹಸರಂಗ, ಮ್ಯಾಥ್ಯೂ ಬ್ರೀಟ್ಜ್ಕೆ, ಜಾರ್ಜ್ ಲಿಂಡೆ, ನಮನ್ ತಿವಾರಿ, ಅರ್ಷಿನ್ ಕುಲಕರ್ಣಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜಮ್ಮು-ಕಾಶ್ಮೀರದ ಕುಲ್ಗಾಮ್‌ನಲ್ಲಿ ಮತ್ತೆ ಗುಂಡಿನ ಚಕಮಕಿ; ಉಗ್ರ ಲತೀಫ್ ಸುತ್ತುವರೆದಿರುವ ಭದ್ರತಾ ಪಡೆಗಳು, ಶರಣಾಗುವಂತೆ ಮನವಿ, Video ವೈರಲ್..!

ಆದಾಯ ಮೀರಿ ಆಸ್ತಿ ಗಳಿಕೆ ಆರೋಪ: ಬ್ರಿಮ್ಸ್ ನರ್ಸಿಂಗ್ ಕಾಲೇಜು ಪ್ರಾಂಶುಪಾಲ ರಾಜ್‌ಕುಮಾರ್ ಮಳಗೆ ನಿವಾಸ ಮೇಲೆ ಲೋಕಾಯುಕ್ತ ದಾಳಿ; Video

Kulgam ದಾಳಿ ಎಫೆಕ್ಟ್: CRPF ಯೋಧರಿಗೆ Bulletproof jackets ಕಡ್ಡಾಯ; ಭದ್ರತಾ ಕ್ರಮ ಮತ್ತಷ್ಟು ಬಿಗಿ..!

ಹದಗೆಟ್ಟ ಗ್ರಾಮೀಣ ರಸ್ತೆಗಳಿಗೆ ಮುಕ್ತಿ; 10 ಸಾವಿರ ಕೋಟಿ ರೂ. ವೆಚ್ಚದ ಯೋಜನೆಗೆ ಸರ್ಕಾರ ಚಾಲನೆ, 15 ಸಾವಿರ ಕಿ.ಮೀ. ರಸ್ತೆಗಳಿಗೆ ಹೊಸ ರೂಪ..!

ಪತ್ನಿ ತವರು ಮನೆಗೆ ಹೋದ ಮಾತ್ರಕ್ಕೆ ಕ್ರೌರ್ಯವೆಂದು ಹೇಳಲಾಗದು, ವಿಚ್ಛೇದನಕ್ಕೆ ಆಧಾರವಾಗದು; ಜಾರ್ಖಂಡ್ ಹೈಕೋರ್ಟ್ ಮಹತ್ವದ ತೀರ್ಪು