ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

'300 ರನ್‌ಗಳ ವಿಶ್ವದಾಖಲೆ ಖಚಿತ': ವೈಭವ್ ಸೂರ್ಯವಂಶಿ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕ್ರಿಸ್ ಗೇಲ್!

ಕೇವಲ 53 ಎಸೆತಗಳಲ್ಲಿ 204 ರನ್ ಗಳಿಸಿದ ವೈಭವ್ ಸೂರ್ಯವಂಶಿ ಅವರ ಅಮೋಘ ಬ್ಯಾಟಿಂಗ್‌ ನೋಡಿ ವೆಸ್ಟ್ ಇಂಡೀಸ್‌ ಕ್ರಿಕೆಟ್ ದಿಗ್ಗಜ ಕ್ರಿಸ್ ಗೇಲ್ ಬೆರಗಾಗಿದ್ದಾರೆ.

ವೈಭವ್ ಸೂರ್ಯವಂಶಿ - ಕ್ರಿಸ್ ಗೇಲ್
Lingaraj Badiger
Updated On : 26 Nov 2026, 3:06 pm

ಭಾರತದ ಉದಯೋನ್ಮುಖ ಪ್ರತಿಭೆ, ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಯುಎಇ (UAE) ವಿರುದ್ಧ ಸಿಡಿಲಬ್ಬರದ ದ್ವಿಶತಕ ಸಿಡಿಸುವ ಮೂಲಕ ಹಲವು ವಿಶ್ವ ದಾಖಲೆಗಳನ್ನು ಬರೆದಿದ್ದು, ಜಗತ್ತಿನಾದ್ಯಂತ ಭಾರೀ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಕೇವಲ 53 ಎಸೆತಗಳಲ್ಲಿ 204 ರನ್ ಗಳಿಸಿದ ವೈಭವ್ ಸೂರ್ಯವಂಶಿ ಅವರ ಅಮೋಘ ಬ್ಯಾಟಿಂಗ್‌ ನೋಡಿ ವೆಸ್ಟ್ ಇಂಡೀಸ್‌ ಕ್ರಿಕೆಟ್ ದಿಗ್ಗಜ ಕ್ರಿಸ್ ಗೇಲ್ ಬೆರಗಾಗಿದ್ದಾರೆ.

ಕ್ರೆಕ್ಸ್ ಜೊತೆಗಿನ ಸಂಭಾಷಣೆಯಲ್ಲಿ, ಕೇವಲ 53 ಎಸೆತಗಳಲ್ಲಿ ದ್ವಿಶತಕ ಪೂರೈಸಿ, ಒಂದೇ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 28 ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿದ ವೈಭವ್ ಸಾಹಸ ನನ್ನನ್ನು ವಿಸ್ಮಯಕ್ಕೆ ದೂಡಿದೆ ಎಂದು ಗೇಲ್ ಬಣ್ಣಿಸಿದ್ದಾರೆ.

Advertisement

Advertisement

ಈ ಯುವ ಆಟಗಾರನಿಗೆ ಉಜ್ವಲ ಭವಿಷ್ಯ ಇದೆ ಎಂದ ಗೇಲ್, ಈ ಹುಡುಗನ ಆಟವನ್ನು ನೋಡುತ್ತಿದ್ದರೆ ಅಂತಾರಾಷ್ಟ್ರೀಯ ಏಕದಿನ (ODI) ಕ್ರಿಕೆಟ್‌ನಲ್ಲಿ ಶೀಘ್ರದಲ್ಲೇ ವೈಯಕ್ತಿಕ 300 ರನ್‌ಗಳ ವಿಶ್ವದಾಖಲೆ ದಾಖಲಾಗುವುದು ಖಚಿತ ಎಂದು ಭವಿಷ್ಯ ನುಡಿದಿದ್ದಾರೆ.

Also Read

ಅತಿ ವೇಗದ ದ್ವಿಶತಕ: ವೈಭವ್ ಸೂರ್ಯವಂಶಿಗೆ 'ಯಮರಾಜ'ನ ರೂಪ ಕೊಟ್ಟ ರವೀಂದ್ರ ಜಡೇಜಾ! ಫೋಟೋ ವೈರಲ್

"ಕೇವಲ 12 ಓವರ್‌ಗಳಲ್ಲಿ ದ್ವಿಶತಕ ಬಾರಿಸಿದ್ದು ಅದ್ಭುತ. 28 ಸಿಕ್ಸರ್‌ಗಳು. ವೈಭವ್ ಅವರ ಈ ಸ್ಫೋಟಕ ಬ್ಯಾಟಿಂಗ್ ಸುದ್ದಿ ಹೊರಬಿದ್ದ ತಕ್ಷಣ ನನ್ನ ಫೋನ್ ನಿರಂತರವಾಗಿ ರಿಂಗಣಿಸಲು ಆರಂಭಿಸಿತು. ಮೊದಲಿಗೆ ಅಲ್ಲಿ ಏನು ನಡೆಯುತ್ತಿದೆ ಎಂಬುದೇ ನನಗೆ ಅರ್ಥವಾಗಲಿಲ್ಲ ಎಂದು ಗೇಲ್ ಹೇಳಿದ್ದಾರೆ.

ಆರಂಭದಲ್ಲಿ ಅದು ಟಿ20 ಪಂದ್ಯವಾಗಿರಬಹುದು ಎಂದು ಭಾವಿಸಿದ್ದೆ, ಆದರೆ ಅದು 50 ಓವರ್‌ಗಳ ಪಂದ್ಯ ಎಂದು ಗೊತ್ತಾದಾಗ ಇನ್ನಷ್ಟು ಶಾಕ್ ಆಯಿತು ಎಂದು ಗೇಲ್ ತಿಳಿಸಿದ್ದಾರೆ.

ಇಂತಹ ಸ್ಫೋಟಕ ಬ್ಯಾಟಿಂಗ್ ನೋಡಿದ ಮೇಲೆ ಏಕದಿನ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸುವುದು ಅಸಾಧ್ಯವೇನಲ್ಲ ಎಂದು ಕ್ರಿಸ್​ ಗೇಲ್​ ಅಭಿಪ್ರಾಯಪಟ್ಟಿದ್ದಾರೆ.

ವೈಭವ್ ಅವರು ಕ್ರಿಕೆಟ್ ಆಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ ಎಂದು ಶ್ಲಾಘಿಸಿದ ಗೇಲ್, ಈ ಯುವ ಪ್ರತಿಭೆಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಅವಕಾಶಗಳು ಸಿಗಲಿ ಎಂದು ಶುಭ ಹಾರೈಸಿದ್ದಾರೆ. ದಿಗ್ಗಜ ಬೌಲರ್‌ಗಳನ್ನೇ ನಡುಗಿಸುತ್ತಿದ್ದ ಗೇಲ್ ಅವರಂತಹ ದೈತ್ಯ ಆಟಗಾರರೇ ಇಂದು 15 ವರ್ಷದ ವೈಭವ್ ಬ್ಯಾಟಿಂಗ್ ಪರಾಕ್ರಮಕ್ಕೆ ತಲೆಬಾಗಿರುವುದು ನಿಜಕ್ಕೂ ವಿಶೇಷವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement