ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್: ಸ್ಲಿಪ್ ನಲ್ಲಿ ಕ್ಯಾಚ್ ಕೈ ಚೆಲ್ಲಿದ ಕೆಎಲ್ ರಾಹುಲ್, ಸುನಿಲ್ ಗವಾಸ್ಕರ್ ಗರಂ! Video ವೈರಲ್

ಮೊದಲ ದಿನದಾಟದ ವಿಡಿಯೋವೊಂದರಲ್ಲಿ ಕಾಮೆಂಟರಿ ಮಾಡುತ್ತಿದ್ದ ಗವಾಸ್ಕರ್ ತೀವ್ರ ಅಸಮಾಧಾನದಿಂದ ಕೈಗಳನ್ನು ಮೇಲಕ್ಕೆತ್ತಿ, ಹತಾಶೆಯಿಂದ ಮೇಜಿನ ಮೇಲೆ ಗುದ್ದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೆಎಲ್ ರಾಹುಲ್, ಸುನಿಲ್ ಗವಾಸ್ಕರ್
Nagaraja AB
Updated On : 28 Nov 2026, 6:09 pm

ಕ್ರೈಸ್ಟ್‌ಚರ್ಚ್‌: ಇಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸ್ಲಿಪ್ ವಿಭಾಗದಲ್ಲಿ ಮತ್ತೊಂದು ಕ್ಯಾಚ್ ಕೈಚೆಲ್ಲಿದಾಗ ಭಾರತದ ಕಳಪೆ ಫೀಲ್ಡಿಂಗ್ ಬಗ್ಗೆ ಮಾಜಿ ನಾಯಕ ಸುನಿಲ್ ಗವಾಸ್ಕರ್ ತೀವ್ರ ಹತಾಶೆ ವ್ಯಕ್ತಪಡಿಸಿದ್ದಾರೆ.

ಮೊದಲ ದಿನದಾಟದ ವಿಡಿಯೋವೊಂದರಲ್ಲಿ ಕಾಮೆಂಟರಿ ಮಾಡುತ್ತಿದ್ದ ಗವಾಸ್ಕರ್ ತೀವ್ರ ಅಸಮಾಧಾನದಿಂದ ಕೈಗಳನ್ನು ಮೇಲಕ್ಕೆತ್ತಿ, ಹತಾಶೆಯಿಂದ ಮೇಜಿನ ಮೇಲೆ ಗುದ್ದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪಂದ್ಯದ 96ನೇ ಓವರ್‌ನಲ್ಲಿ ಭಾರತದ ವೇಗಿ ಆಕಾಶ್ ದೀಪ್ ಅವರ ಎಸೆತದಲ್ಲಿ ನ್ಯೂಜಿಲೆಂಡ್ ಬ್ಯಾಟರ್ ನಾಥನ್ ಸ್ಮಿತ್ (ಮತ್ತು ಟಾಮ್ ಬ್ಲಂಡೆಲ್) ಬ್ಯಾಟ್‌ನ ಅಂಚಿಗೆ ತಗುಲಿದ ಚೆಂಡು ಎರಡನೇ ಸ್ಲಿಪ್‌ನಲ್ಲಿ ನಿಂತಿದ್ದ ಕೆ.ಎಲ್. ರಾಹುಲ್ ಅವರಿಗಿಂತ ಸ್ವಲ್ಪ ಮುಂದೆ ನೆಲಕ್ಕೆ ಬಿತ್ತು.

Advertisement

Advertisement

ಆಗ ಸಹ ಕಾಮೆಂಟೇಟರ್ ಸೈಮನ್ ಡೌಲ್, ಚೆಂಡು ಮತ್ತೊಮ್ಮೆ ಫೀಲ್ಡರ್ ಕೈಗೆ ತಲುಪಲಿಲ್ಲ ಎಂದು ಹೇಳಿದ ತಕ್ಷಣ, ಗವಾಸ್ಕರ್ ತೀವ್ರ ಅಸಮಾಧಾನದಿಂದ ಕೈಗಳನ್ನು ಮೇಲಕ್ಕೆತ್ತಿ, ಹತಾಶೆಯಿಂದ ಮೇಜಿನ ಮೇಲೆ ಗುದ್ದಿದರು.

ಕೆ.ಎಲ್. ರಾಹುಲ್ ನಿಲುವಿನ ಬಗ್ಗೆ ಗವಾಸ್ಕರ್ ಅಸಮಾಧಾನ: ಭಾರತದ ಸ್ಲಿಪ್ ಫೀಲ್ಡರ್‌ಗಳು ಬ್ಯಾಟರ್‌ಗೆ ಇನ್ನಷ್ಟು ಹತ್ತಿರ ನಿಲ್ಲಬೇಕು ಎಂದು ಗವಾಸ್ಕರ್ ಪದೇ ಪದೇ ಹೇಳುತ್ತಿದ್ದರು. ಆದಾಗ್ಯೂ, ಆಟಗಾರರು ಅದನ್ನು ಪಾಲಿಸದಿರುವುದು ಅವರಿಗೆ ಬೇಸರ ತರಿಸಿದೆ. ನಾನು ಮೊದಲೇ ಹೇಳುತ್ತಿದ್ದೆ, ಫೀಲ್ಡರ್ ಗಳು ಬ್ಯಾಟರ್‌ಗೆ ಹತ್ತಿರ ನಿಲ್ಲಬೇಕು. ನಿನ್ನೆ ಸಂಜೆಯಿಂದಲೂ ನಾನು ಇದನ್ನೇ ಹೇಳುತ್ತಿದ್ದೇನೆ, ಆದಾಗ್ಯೂ, ಆಟಗಾರರು ಅದನ್ನು ಪಾಲಿಸುತ್ತಿಲ್ಲ ಎಂದು ಹೇಳಿದ್ದಾರೆ.

Also Read

₹25.20 ಕೋಟಿಗೆ ಖರೀದಿಸಿದ್ದ ಕ್ಯಾಮರೂನ್ ಗ್ರೀನ್‌ರನ್ನು ಕೈಬಿಡಬೇಕಿತ್ತು, KKR ನಾಯಕತ್ವಕ್ಕೆ ರಿಂಕು ಸಿಂಗ್ ಸೂಕ್ತ; ಆಕಾಶ್ ಚೋಪ್ರಾ

ಭಾರತೀಯ ಫೀಲ್ಡರ್‌ಗಳು ಹಲವು ಕ್ಯಾಚ್‌ಗಳನ್ನು ಕೈಚೆಲ್ಲಿದ ಪರಿಣಾಮ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 356 ರನ್‌ಗಳ ಸವಾಲಿನ ಮೊತ್ತ ಕಲೆಹಾಕಲು ಸಾಧ್ಯವಾಯಿತು. ಇದಕ್ಕೆ ಉತ್ತರವಾಗಿ ಭಾರತ 2ನೇ ದಿನದ ಅಂತ್ಯಕ್ಕೆ 116 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement