India vs New Zealand, 2nd Test: ಪ್ರಸಿದ್ಧ್ ಕೃಷ್ಣ ಆಯ್ಕೆಮಾಡಿ ಭಾರತ ತಪ್ಪು ಮಾಡಿತು; ಆರ್ ಅಶ್ವಿನ್ ಅಭಿಪ್ರಾಯ ಒಪ್ಪದ ಸುನೀಲ್ ಗವಾಸ್ಕರ್
ಪ್ರಸಿದ್ಧ್ ಅವರನ್ನು ತಂಡಕ್ಕೆ ಸೇರಿಸಬೇಕೆಂಬ ಕರೆಯನ್ನು ಸಮರ್ಥಿಸಿಕೊಂಡಿದ್ದ ಭಾರತದ ಮಾಜಿ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್‌ಗೆ ಪ್ರತಿಕ್ರಿಯೆಯಾಗಿ ಗವಾಸ್ಕರ್ ಈ ಹೇಳಿಕೆ ನೀಡಿದ್ದಾರೆ.
ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅನುಭವಿ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಕಂಕಶನ್ ಸಬ್‌ಸ್ಟಿಟ್ಯೂಟ್ ಆಗಿ ಕರೆತರದಿರುವ ಮೂಲಕ ಗೌತಮ್ ಗಂಭೀರ್ ನೇತೃತ್ವದ ತಂಡದ ಆಡಳಿತ ಮಂಡಳಿಯು ತಪ್ಪನ್ನು ಮಾಡಿದೆ ಎಂದು ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಹೇಳಿದ್ದಾರೆ. ಭಾರತದ ಕಂಕಶನ್ ಬದಲಿ ಆಟಗಾರನಾಗಿ ಉಳಿದ ಪಂದ್ಯಕ್ಕೆ ಆಕಾಶ್ ದೀಪ್ ಬದಲಿಗೆ ಪ್ರಸಿದ್ಧ್ ಕೃಷ್ಣ ಆಡಲಿದ್ದಾರೆ ಎಂದು ಬಿಸಿಸಿಐ ಭಾನುವಾರ ದೃಢಪಡಿಸಿದೆ. ಈ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಗವಾಸ್ಕರ್, ಸಿರಾಜ್ ಎರಡನೇ ಇನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ಹೊಸ ತಲೆನೋವನ್ನು ನೀಡುತ್ತಿದ್ದರು ಎಂದು ಸಲಹೆ ನೀಡಿದ್ದಾರೆ.
'ಸಿರಾಜ್ ಅವರನ್ನು ಕನ್ಕಶನ್ ಬದಲಿ ಆಟಗಾರನಾಗಿ ತರಬೇಕಿತ್ತು. ಚೆನ್ನಾಗಿ ವಿಶ್ರಾಂತಿ ಪಡೆದಿರುವ ಮತ್ತು ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಲು ಸಾಕಷ್ಟು ಶಕ್ತಿಯನ್ನು ಹೊಂದಿರುವ ಬೌಲರ್ ಆಗಿದ್ದಾರೆ. ಸಿರಾಜ್ ಹಿಂದಿನ ಟೆಸ್ಟ್ ಪಂದ್ಯವನ್ನು ಆಡಿರಲಿಲ್ಲ, ಆದ್ದರಿಂದ ಅವರು ಇನ್ನೂ ಫ್ರೆಶ್ ಆಗಿರುತ್ತಾರೆ ಮತ್ತು ಕಡಿಮೆ ದಣಿದಿರುತ್ತಾರೆ' ಎಂದು ಗವಾಸ್ಕರ್ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಚಹಾ ವಿರಾಮದ ಸಮಯದಲ್ಲಿ ಹೇಳಿದರು.
ಮೊದಲ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ಪ್ರಸಿದ್ ಸಾಕಷ್ಟು ತೊಂದರೆ ನೀಡಲಿಲ್ಲ ಮತ್ತು ಸಿರಾಜ್ ಅವರನ್ನು ತಂಡಕ್ಕೆ ಸೇರಿಸಿಕೊಂಡರೆ ಅವರಿಗೆ ಯೋಚಿಸಲು ಏನಾದರೂ ಸಿಗುತ್ತಿತ್ತು. ಏಕೆಂದರೆ, ಸಿರಾಜ್ ಈ ಪಿಚ್‌ನಲ್ಲಿ ಅಚ್ಚರಿಯ ಅಂಶವನ್ನು ತರಬಹುದಿತ್ತು ಎಂದು ಗವಾಸ್ಕರ್ ಸಲಹೆ ನೀಡಿದರು.
ಪ್ರಸಿದ್ಧ್ ಅವರನ್ನು ತಂಡಕ್ಕೆ ಸೇರಿಸಬೇಕೆಂಬ ಕರೆಯನ್ನು ಸಮರ್ಥಿಸಿಕೊಂಡಿದ್ದ ಭಾರತದ ಮಾಜಿ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್‌ಗೆ ಪ್ರತಿಕ್ರಿಯೆಯಾಗಿ ಗವಾಸ್ಕರ್ ಈ ಹೇಳಿಕೆ ನೀಡಿದ್ದಾರೆ.
'ಕನ್ಕಶನ್ ಸಬ್ ಬಳಸುವ ಅವಕಾಶವಿದ್ದಾಗ, ಸರಣಿಯಲ್ಲಿ ಈಗಾಗಲೇ ಆಡಿರುವ ಆಟಗಾರನನ್ನು ಕರೆತರುವುದು ಯಾವಾಗಲೂ ಒಳ್ಳೆಯದು. ಸಿರಾಜ್ ತುಂಬಾ ಫ್ರೆಶ್ ಆಗಿದ್ದರೂ ತಕ್ಷಣ ಬಂದು ಪರಿಣಾಮ ಬೀರಲು ಸಾಧ್ಯವಿಲ್ಲ' ಎಂದು ಅಶ್ವಿನ್ ಬರೆದಿದ್ದಾರೆ.
ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಕಬಳಿಸುವುದರ ಜೊತೆಗೆ 29 ರನ್‌ಗಳನ್ನು ಗಳಿಸಿದ್ದ ಆಕಾಶ್ ದೀಪ್, ಬ್ಯಾಟಿಂಗ್ ಮಾಡುವಾಗ ಅವರ ಹೆಲ್ಮೆಟ್‌ಗೆ ಎರಡು ಬಾರಿ ಹೊಡೆತ ಬಿತ್ತು. 29 ವರ್ಷದ ಆಟಗಾರನಿಗೆ ಮೊದಲು ಜೇಕಬ್ ಡಫಿ ಅವರ ಎಸೆತ ಬಡಿದು, ನಂತರ ಕೈಲ್ ಜೇಮಿಸನ್ ಅವರ ಮತ್ತೊಂದು ಹೊಡೆತ ತಗುಲಿತು. ಬಳಿಕ ಅವರನ್ನು ಸ್ಪರ್ಧೆಯಿಂದ ಹೊರಗಿಡಬೇಕಾಯಿತು, ಇದರಿಂದಾಗಿ ಭಾರತಕ್ಕೆ ಪದೇ ಪದೆ ಹೊಡೆತಗಳು ದುಬಾರಿಯಾಗಿ ಪರಿಣಮಿಸಿದವು.