ಭಾರತ ಮತ್ತು ವಿಂಡೀಸ್ ಸರಣಿ 
ಕ್ರಿಕೆಟ್

'ಭಾರತದ ವಿರುದ್ಧದ ಸರಣಿಯಿಂದ ನಯಾ ಪೈಸೆ ಪ್ರಯೋಜನವಿಲ್ಲ': ವಿಂಡೀಸ್ CEO ಹೇಳಿಕೆ, ಏನದು 1997ರ ನಿರ್ಧಾರ?

ಹಾಲಿ ಭಾರತ ವಿರುದ್ಧ ನಡೆಯುತ್ತಿರುವ ಕ್ರಿಕೆಟ್ ಸರಣಿಯಿಂದಾಗಿ ವಿಂಡೀಸ್ ಗೆ ದೊಡ್ಡ ಮಟ್ಟದ ಲಾಭವೇನೂ ಆಗುತ್ತಿಲ್ಲವಂತೆ. ಆದರೆ ಭಾರತಕ್ಕೆ ಮಾತ್ರ ಕೋಟ್ಯಂತರ ಡಾಲರ್‌ ಆದಾಯ ಸಿಗುತ್ತಿದೆ ಎನ್ನಲಾಗಿದೆ.

ನವದೆಹಲಿ: ಭಾರತದಲ್ಲಿ ಕ್ರಿಕೆಟ್ ಚಿನ್ನದ ಮೊಟ್ಟೆ ಇಡುವ ಕೋಳಿ.. ಇದೇ ಕಾರಣಕ್ಕೆ ವಿಶ್ವದ ಅಗ್ರಗಣ್ಯ ಕ್ರಿಕೆಟ್ ರಾಷ್ಟ್ರಗಳು ಭಾರತದೊಂದಿಗೆ ಸರಣಿ ಆಡಲು ನಾ ಮುಂದು ತಾ ಮುಂದು ಎಂದು ಸರದಿ ನಿಲ್ಲುತ್ತವೆ. ಆದರೆ ವಿಂಡೀಸ್ ಗೆ ಮಾತ್ರ ಭಾರತದ ವಿರುದ್ಧದ ಸರಣಿಯಿಂದ ನಯಾಪೈಸೆ ಲಾಭವಾಗಿಲ್ಲವಂತೆ.

ಅಚ್ಚರಿಯಾದರೂ ಇದು ಸತ್ಯ.. ಈ ಮಾತನ್ನು ಸ್ವತಃ ವಿಂಡೀಸ್ ಕ್ರಿಕೆಟ್ ತಂಡದ ಸಿಇಒ ಕ್ರಿಸ್‌ ಡೆಹ್ರಿಂಗ್‌ ಹೇಳಿದ್ದಾರೆ. ಹಾಲಿ ಭಾರತ ವಿರುದ್ಧ ನಡೆಯುತ್ತಿರುವ ಕ್ರಿಕೆಟ್ ಸರಣಿಯಿಂದಾಗಿ ವಿಂಡೀಸ್ ಗೆ ದೊಡ್ಡ ಮಟ್ಟದ ಲಾಭವೇನೂ ಆಗುತ್ತಿಲ್ಲವಂತೆ. ಆದರೆ ಭಾರತಕ್ಕೆ ಮಾತ್ರ ಕೋಟ್ಯಂತರ ಡಾಲರ್‌ ಆದಾಯ ಸಿಗುತ್ತಿದೆ ಎನ್ನಲಾಗಿದೆ.

ದ್ವಿಪಕ್ಷೀಯ ಕ್ರಿಕೆಟ್‌ ಸರಣಿಗಳಿಂದ ಆತಿಥೇಯ ರಾಷ್ಟ್ರಕ್ಕೆ ಸಿಗುವ ಆದಾಯದ ಹಂಚಿಕೆ ಕುರಿತು ಕ್ರಿಕೆಟ್‌ ವೆಸ್ಟ್‌ ಇಂಡೀಸ್‌ (CWI) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ರಿಸ್‌ ಡೆಹ್ರಿಂಗ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ನಡೆಯುತ್ತಿರುವ ಸರಣಿಯಿಂದ ಸುಮಾರು 2ರಿಂದ 3 ಕೋಟಿ ಅಮೆರಿಕನ್‌ ಡಾಲರ್‌ ಆದಾಯ ಬರುವ ನಿರೀಕ್ಷೆಯಿದ್ದರೂ, ಪ್ರವಾಸಿ ತಂಡದ ಕ್ರಿಕೆಟ್‌ ಮಂಡಳಿಗೆ ಅದರಲ್ಲಿ ನೇರ ಆದಾಯ ಸಿಗುವುದಿಲ್ಲ ಎಂದು ಅವರು ಹೇಳಿದ್ದಾರೆ.

30 ಮಿಲಿಯನ್ ಡಾಲರ್ ಮೌಲ್ಯದ ಸರಣಿ

ಅಂದಹಾಗೆ ಭಾರತದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಮತ್ತು ಟಿ20 ಸರಣಿಯ ಮೌಲ್ಯ ಸುಮಾರು 20ರಿಂದ 30 ಮಿಲಿಯನ್ ಅಮೆರಿಕನ್ ಡಾಲರ್ ಎಂದು ಅಂದಾಜಿಸಲಾಗಿದೆ. ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಸುಮಾರು 193ರಿಂದ 285 ಕೋಟಿ ರೂಗಳಾಗುತ್ತವೆ.

ನಿಯಮಗಳ ಪ್ರಕಾರ ದ್ವಿಪಕ್ಷೀಯ ಕ್ರಿಕೆಟ್‌ ಸರಣಿಯಿಂದ ಬರುವ ಸಂಪೂರ್ಣ ಆದಾಯವನ್ನು (ಶೇ. 100ರಷ್ಟು) ಆತಿಥೇಯ ದೇಶವೇ ಉಳಿಸಿಕೊಳ್ಳಲು ಅವಕಾಶ ನೀಡುವ ವ್ಯವಸ್ಥೆ ಇದೆ ಎನ್ನಲಾಗಿದೆ. ಹೀಗಾಗಿ ಹಾಲಿ ಟೂರ್ನಿಯಿಂದ ವಿಂಡೀಸ್ ಗೆ ನಯಾ ಪೈಸೆ ಲಾಭವಿಲ್ಲ ಎನ್ನಲಾಗಿದೆ.

1997ರ ನಿರ್ಧಾರವೇ ಸಂಕಷ್ಟಕ್ಕೆ ಕಾರಣ?

ವಿಸ್ಡನ್‌ ಕ್ರಿಕೆಟ್‌ನ ‘ದಿ ಸ್ಕೂಪ್‌’ ಕಾರ್ಯಕ್ರಮದಲ್ಲಿ ಮಾತನಾಡಿದ ಡೆಹ್ರಿಂಗ್‌, 'ದ್ವಿಪಕ್ಷೀಯ ಸರಣಿಗಳ ಆದಾಯ ಹಂಚಿಕೆ ವ್ಯವಸ್ಥೆಯ ಬದಲಾವಣೆಯು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ನ ಆರ್ಥಿಕ ಸಂಕಷ್ಟಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

“ಈ ಸರಣಿ ಭಾರತದಲ್ಲಿ ನಡೆಯುತ್ತಿರುವುದರಿಂದ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ಗೆ ಯಾವುದೇ ಆದಾಯ ಸಿಗುವುದಿಲ್ಲ. ಭಾರತದಲ್ಲಿ ನಡೆಯುವ ಈ ಸರಣಿಯಿಂದ 2ರಿಂದ 3 ಕೋಟಿ ಡಾಲರ್‌ ಆದಾಯ ಗಳಿಸುವ ಸಾಧ್ಯತೆಯಿದೆ. ಆದರೆ ವೆಸ್ಟ್‌ ಇಂಡೀಸ್‌ಗೆ ಅದರಲ್ಲಿ ಯಾವುದೇ ಆದಾಯವಿಲ್ಲ” ಎಂದು ಅವರು ಹೇಳಿದ್ದಾರೆ.

1997ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಸದಸ್ಯ ರಾಷ್ಟ್ರಗಳು ಹಣಕಾಸು ಮಾದರಿಯಲ್ಲಿ ಬದಲಾವಣೆ ತರಲು ಮತ ಚಲಾಯಿಸಿದಾಗ, ವೆಸ್ಟ್‌ ಇಂಡೀಸ್‌ ಈ ನಿರ್ಧಾರವನ್ನು ವಿರೋಧಿಸಿತ್ತು ಎಂದು ಡೆಹ್ರಿಂಗ್‌ ನೆನಪಿಸಿಕೊಂಡಿದ್ದಾರೆ. ಆಗಿನ ವ್ಯವಸ್ಥೆಯಲ್ಲಿ ಪ್ರವಾಸಿ ತಂಡಗಳಿಗೆ ಆತಿಥೇಯ ರಾಷ್ಟ್ರದಿಂದ ನಿಗದಿತ ಪ್ರವಾಸ ಶುಲ್ಕ ದೊರೆಯುತ್ತಿತ್ತು. ಈ ಮೊತ್ತವು ಕೆಲವೊಮ್ಮೆ ವೆಸ್ಟ್‌ ಇಂಡೀಸ್‌ ತನ್ನ ನೆಲದಲ್ಲಿ ಸರಣಿ ಆಯೋಜಿಸಿ ಗಳಿಸುತ್ತಿದ್ದ ಆದಾಯಕ್ಕಿಂತಲೂ ಹೆಚ್ಚಾಗಿರುತ್ತಿತ್ತು ಎಂದು ಅವರು ವಿವರಿಸಿದ್ದಾರೆ.

ಆದರೆ, ಹೊಸ ವ್ಯವಸ್ಥೆಯಲ್ಲಿ ಆತಿಥೇಯ ರಾಷ್ಟ್ರವು ತನ್ನ ನೆಲದಲ್ಲಿ ನಡೆಯುವ ದ್ವಿಪಕ್ಷೀಯ ಸರಣಿಯ ಪ್ರಸಾರ ಹಕ್ಕುಗಳಿಂದ ಬರುವ ಆದಾಯವನ್ನು ತನ್ನಲ್ಲೇ ಉಳಿಸಿಕೊಳ್ಳುವ ಅವಕಾಶ ಪಡೆಯಿತು. ಇದರಿಂದ ದೊಡ್ಡ ಪ್ರೇಕ್ಷಕ ವರ್ಗ ಮತ್ತು ಬೃಹತ್‌ ಮಾರುಕಟ್ಟೆ ಹೊಂದಿರುವ ಭಾರತಕ್ಕೆ ಹೆಚ್ಚಿನ ಲಾಭವಾಗುತ್ತದೆ; ಸಣ್ಣ ಮಾರುಕಟ್ಟೆ ಹೊಂದಿರುವ ವೆಸ್ಟ್‌ ಇಂಡೀಸ್‌ನಂತಹ ತಂಡಗಳಿಗೆ ಆದಾಯ ಗಳಿಸುವ ಅವಕಾಶ ಸೀಮಿತವಾಗುತ್ತದೆ ಎಂಬುದು ಡೆಹ್ರಿಂಗ್‌ ವಾದಿಸಿದ್ದಾರೆ.

ಆರ್ಥಿಕ ಸಂಕಷ್ಟದಲ್ಲಿ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌

ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿಯ ಆರ್ಥಿಕ ಪರಿಸ್ಥಿತಿ ಹಲವು ವರ್ಷಗಳಿಂದ ಸವಾಲುಗಳನ್ನು ಎದುರಿಸುತ್ತಿದೆ. ಹಣಕಾಸಿನ ಸಮಸ್ಯೆಗಳ ಹಿನ್ನೆಲೆಯಲ್ಲಿ ಆಟಗಾರರ ವೇತನ ಕಡಿತ ಮತ್ತು ಕಡಿಮೆ ಅವಧಿಯ ಒಪ್ಪಂದಗಳನ್ನು ಜಾರಿಗೆ ತರುವ ಪರಿಸ್ಥಿತಿ ಎದುರಾಗಿದೆ. ಇದರಿಂದ ಆಟಗಾರರ ಅಸಮಾಧಾನವೂ ಹೆಚ್ಚಾಗಿದೆ ಎಂದು ವರದಿಗಳು ತಿಳಿಸಿವೆ.

ಐಸಿಸಿಯ ಒಟ್ಟು ಆದಾಯ ಹಂಚಿಕೆಯಲ್ಲಿ ಭಾರತಕ್ಕೆ ಶೇ. 38ಕ್ಕಿಂತ ಹೆಚ್ಚಿನ ಪಾಲು ದೊರೆಯುತ್ತಿದ್ದರೆ, ವೆಸ್ಟ್‌ ಇಂಡೀಸ್‌ಗೆ ಸುಮಾರು ಶೇ. 5ರಷ್ಟು ಪಾಲು ಸಿಗುತ್ತದೆ ಎಂದು ವರದಿಗಳು ಉಲ್ಲೇಖಿಸಿವೆ. ಇದು ದೊಡ್ಡ ಮಾರುಕಟ್ಟೆ ಹೊಂದಿರುವ ರಾಷ್ಟ್ರಗಳು ಮತ್ತು ಸಣ್ಣ ಕ್ರಿಕೆಟ್‌ ಮಂಡಳಿಗಳ ನಡುವಿನ ಆರ್ಥಿಕ ಅಂತರದ ಬಗ್ಗೆ ಈ ಚರ್ಚೆ ಮತ್ತೊಮ್ಮೆ ಗಮನ ಸೆಳೆದಿದೆ.

ದ್ವಿಪಕ್ಷೀಯ ಸರಣಿಗಳಿಂದ ಬರುವ ಆದಾಯದಲ್ಲಿ ಪ್ರವಾಸಿ ತಂಡಗಳಿಗೂ ಪಾಲು ದೊರೆಯಬೇಕೇ ಎಂಬ ಪ್ರಶ್ನೆಯನ್ನು ಡೆಹ್ರಿಂಗ್‌ ನೇರವಾಗಿ ಮಂಡಿಸಿದ್ದು, ಸದ್ಯದ ವ್ಯವಸ್ಥೆಯಲ್ಲಿ ಆತಿಥೇಯ ರಾಷ್ಟ್ರಕ್ಕೆ ಸಿಗುವ ವಾಣಿಜ್ಯ ಲಾಭ ಮತ್ತು ಸಣ್ಣ ಕ್ರಿಕೆಟ್‌ ಮಂಡಳಿಗಳ ಆರ್ಥಿಕ ಸ್ಥಿರತೆಯ ನಡುವೆ ಸಮತೋಲನ ಸಾಧಿಸುವ ಅಗತ್ಯವಿದೆಯೇ ಎಂಬ ಚರ್ಚೆ ಕ್ರಿಕೆಟ್‌ ವಲಯದಲ್ಲಿ ನಡೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಭಿಜೀತ್ ದೀಪ್ಕೆ ದೆಹಲಿ ನಿವಾಸಕ್ಕೆ ಪೊಲೀಸರ ಭೇಟಿ: CJP ತಿರಂಗಾ ಮೆರವಣಿಗೆಯಲ್ಲಿ ಪಾಲ್ಗೊಳ್ಳದಂತೆ ನೋಟಿಸ್ ಜಾರಿ!

ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ಪ್ರಮಾಣವಚನ ಸ್ವೀಕಾರ

ಸರ್ಕಾರದಿಂದ ಉತ್ತರ ಕೇಳುವುದು ಅರಾಜಕತೆಯಲ್ಲ: ಜೈಲಿಗೂ ಹೋಗಲು ಸಿದ್ಧ; CJP ತಿರಂಗಾ ಮೆರವಣಿಗೆಗೂ ಮುನ್ನ ಅಭಿಜೀತ್ ದೀಪ್ಕೆ!

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!