ಶ್ರೇಯಸ್ ಅಯ್ಯರ್ ಮತ್ತು ವೈಭವ್ ಸೂರ್ಯವಂಶಿ 
ಕ್ರಿಕೆಟ್

ಕಾಯಲೇಬೇಕು, ಬೇರೆ ದಾರಿ ಇಲ್ಲ: ವೈಭವ್ ಸೂರ್ಯವಂಶಿಗೆ ಶ್ರೇಯಸ್ ಅಯ್ಯರ್ 'Sweet Headache' ಸಂದೇಶ!

ವೈಭವ್​ ಸೂರ್ಯವಂಶಿ ಇತ್ತೀಚೆಗಷ್ಟೇ ಮುಕ್ತಾಯಗೊಂಡ ವೆಸ್ಟ್ ಇಂಡೀಸ್​ ವಿರುದ್ಧದ ಟಿ20 ಸರಣಿಯ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ​ ವೈಭವ್ ಸೂರ್ಯವಂಶಿಗೆ ಸಿಗದಿರುವುದು ಹಲವರನ್ನು ಕೆರಳಿಸಿದೆ.

ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ನಿರಂತರವಾಗಿ ಅಗ್ರಸ್ಥಾನದಲ್ಲಿ ರನ್ ಗಳಿಸುತ್ತಿರುವುದರಿಂದ ಯುವ ಬ್ಯಾಟಿಂಗ್ ಸೆನ್ಸೇಶನ್ ವೈಭವ್ ಸೂರ್ಯವಂಶಿಗೆ ಇನ್ನೂ ಪ್ಲೇಯಿಂಗ್ ಹನ್ನೊಂದರಲ್ಲಿ ಸಾಧ್ಯವಾಗುತ್ತಿಲ್ಲ ಎಂದು ಭಾರತದ ಟಿ20 ನಾಯಕ ಶ್ರೇಯಸ್ ಅಯ್ಯರ್ ಬುಧವಾರ ಹೇಳಿದ್ದಾರೆ.

ವೈಭವ್​ ಸೂರ್ಯವಂಶಿ ಇತ್ತೀಚೆಗಷ್ಟೇ ಮುಕ್ತಾಯಗೊಂಡ ವೆಸ್ಟ್ ಇಂಡೀಸ್​ ವಿರುದ್ಧದ ಟಿ20 ಸರಣಿಯ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ​ ವೈಭವ್ ಸೂರ್ಯವಂಶಿಗೆ ಸಿಗದಿರುವುದು ಹಲವರನ್ನು ಕೆರಳಿಸಿದೆ.

ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಗೂ ಮುನ್ನ ಮಾತನಾಡಿದ ಅಯ್ಯರ್, 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರ ಸಾಮರ್ಥ್ಯದ ಬಗ್ಗೆ ಯಾವುದೇ ಅನುಮಾನವಿಲ್ಲ. ಆದರೆ ಪ್ರಸ್ತುತ ಇರುವ ಆರಂಭಿಕ ಆಟಗಾರರು ಸ್ಥಿರವಾಗಿ ರನ್ ಗಳಿಸುತ್ತಿರುವಾಗ, ಯುವ ಆಟಗಾರ ನೇರವಾಗಿ ಪ್ಲೇಯಿಂಗ್ ಇಲೆವೆನ್‌ಗೆ ಬರಲು ಸಾಧ್ಯವಿಲ್ಲ ಎಂದಿದ್ದಾರೆ.

"ಅವನು ಇನ್ನೂ ಬಹಳ ಚಿಕ್ಕವನು, ಅವಕಾಶಗಳನ್ನು ಪಡೆಯಲು ಅವನ ಮುಂದೆ ಸಾಕಷ್ಟು ಸಮಯವಿದೆ. ಹೀಗಾಗಿ ಅವಕಾಶಕ್ಕಾಗಿ ಕಾಯಲೇಬೇಕಾಗುತ್ತದೆ" ಎಂದು ಅಯ್ಯರ್ ಹೇಳಿದ್ದಾರೆ.

ಏಷ್ಯನ್ ಗೇಮ್ಸ್‌ನಲ್ಲಿ, ಸೂರ್ಯವರ್ಶಿಗೆ ಅವಕಾಶ ಕಲ್ಪಿಸಲು ಸ್ಯಾಮ್ಸನ್ ಮೂರನೇ ಕ್ರಮಾಂಕಕ್ಕೆ ಇಳಿದಿದ್ದರು, ಇದರಿಂದಾಗಿ ಈ ಯುವ ಆಟಗಾರನಿಗೆ ಇನ್ನಿಂಗ್ಸ್ ಆರಂಭಿಸುವ(ಓಪನಿಂಗ್ ಮಾಡುವ) ಅವಕಾಶ ಸಿಕ್ಕಿತು. ಅಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ವೈಭವ್ 176.66 ಸ್ಟ್ರೈಕ್ ರೇಟ್‌ನಲ್ಲಿ 53 ರನ್ ಸಿಡಿಸಿ ತಮ್ಮ ಸ್ಫೋಟಕ ಆಟದ ಝಲಕ್ ತೋರಿಸಿದ್ದರು. ಆದರೆ, ಇತ್ತೀಚೆಗೆ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ವಿರುದ್ಧದ ಸಂಪೂರ್ಣ ಟಿ20 ಸರಣಿಯಲ್ಲಿ ಅವರಿಗೆ ಬೆಂಚ್ ಕಾಯಬೇಕಾಯಿತು.

ಈ ಬಗ್ಗೆ ಮಾತನಾಡಿದ ಅಯ್ಯರ್, ನಮ್ಮ ಪ್ರಕ್ರಿಯೆಯಲ್ಲಿ ಸ್ಥಿರತೆ ಕಾಯ್ದುಕೊಂಡರೆ ಖಂಡಿತ ಅವಕಾಶ ಸಿಗುತ್ತದೆ, ಕೆಲವೊಮ್ಮೆ ಕಾಯುವುದು ಅನಿವಾರ್ಯ ಎಂಬುದನ್ನು ನಾನು ಸದಾ ವೈಭವ್‌ಗೆ ಹೇಳುತ್ತಿರುತ್ತೇನೆ. ನಮ್ಮಲ್ಲಿ ಇಬ್ಬರು ಉತ್ತಮ ಆರಂಭಿಕರಿದ್ದಾರೆ ಎಂಬುದೇ ಆತನೊಂದಿಗೆ ನಾವು ನಡೆಸುತ್ತಿರುವ ಮಾತುಕತೆ ಎಂದು ಶ್ರೇಯಸ್ ಅಯ್ಯರ್, ವೈಭವ್ ಗೆ 'ಸ್ವೀಟ್ ಹೆಡೆಕ್' ಸಂದೇಶ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೈಸೂರು ದಸರಾ: ವೈಭವದ ಜಂಬೂ ಸವಾರಿ ಮೆರವಣಿಗೆ; ಮೊದಲ ಬಾರಿಗೆ ಅಂಬಾರಿ ಹೊತ್ತು ಸಾಗಿದ ಪ್ರಶಾಂತ ಆನೆ, ಲಕ್ಷಾಂತರ ಜನರಿಂದ ವೀಕ್ಷಣೆ! Video

ಐತಿಹಾಸಿಕ ಸೆಂಗೋಲ್‌ನ ವಾಸ್ತುಶಿಲ್ಪಿ 99 ವರ್ಷದ ವುಮ್ಮಿಡಿ ಎಥಿರಾಜುಲು ನಿಧನ

ದರ್ಶನ್ ಬಗ್ಗೆ ವಿಜಯಲಕ್ಷ್ಮೀ ಪೋಸ್ಟ್‌ ಬೆನ್ನಲ್ಲೇ 'ಶಕುನಿ' ಅಂತ ಪೋಸ್ಟ್ ಹಾಕಿದ ನಟ ಧನ್ವೀರ್ ಗೌಡ; ಯಾರಿಗೆ ಟಾಂಗ್?

ಬೆಳಗಾವಿ: ದೇವಸ್ಥಾನದ ಪ್ರಸಾದ ಸೇವಿಸಿ 100ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ; ಆಸ್ಪತ್ರೆಗೆ ದಾಖಲು!

CJPಗೆ ಬಿಗ್ ರಿಲೀಫ್: ಅಶುತೋಷ್ ರಾಂಕಾ, ಸೌರವ್ ದಾಸ್ ಬಿಡುಗಡೆ ಮಾಡುವಂತೆ SEM ಆದೇಶ