ಅರ್ಶದೀಪ್ ಸಿಂಗ್ 
ಕ್ರಿಕೆಟ್

2026ರಲ್ಲಿ 38 ಟಿ20ಐ ವಿಕೆಟ್: ಭುವನೇಶ್ವರ್ ಕುಮಾರ್ ದಾಖಲೆ ಮುರಿದು ಇತಿಹಾಸ ಸೃಷ್ಟಿಸಿದ ಅರ್ಶದೀಪ್ ಸಿಂಗ್!

2026ರಲ್ಲಿ ಆಡಿದ 29 ಪಂದ್ಯಗಳಿಂದ 38 ವಿಕೆಟ್ ಗಳನ್ನು ಅವರು ಪಡೆದಿದ್ದಾರೆ. ಇದು ಕ್ಯಾಲೆಂಡರ್ ವರ್ಷವೊಂದರಲ್ಲಿ ಯಾವುದೇ ಭಾರತೀಯ ಬೌಲರ್ ಮಾಡದ ಅತ್ಯುತ್ತಮ ಸಾಧನೆಯಾಗಿದೆ.

ಕ್ರೈಸ್ಟ್ ಚರ್ಚ್: ಭಾರತದ ಎಡಗೈ ಮಧ್ಯಮ ವೇಗಿ ಅರ್ಶದೀಪ್ ಸಿಂಗ್ ಅವರು ಇದೀಗ ಮತ್ತೊಂದು ಹೊಸ ದಾಖಲೆ ನಿರ್ಮಿಸಿದ್ದಾರೆ. ಭುವನೇಶ್ವರ್ ಕುಮಾರ್ ಅವರ ನಾಲ್ಕು ವರ್ಷಗಳ ದಾಖಲೆಯನ್ನು ಮುರಿದಿದ್ದು, ಕ್ಯಾಲೆಂಡರ್ ವರ್ಷವೊಂದರಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ನ್ಯೂಜಿಲೆಂಡ್‌ನ ದಕ್ಷಿಣ ದ್ವೀಪದಲ್ಲಿರುವ ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ಶನಿವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಟಿಂ ಸೀಫರ್ಟ್ ಮತ್ತು ಗ್ಲೆನ್ ಫಿಲಿಪ್ಸ್ ಅವರ ವಿಕೆಟ್ ಕಬಳಿಸಿದ ಅರ್ಶದೀಪ್ ಸಿಂಗ್ ಈ ಹೊಸ ಇತಿಹಾಸ ಸೃಷ್ಟಿಸಿದರು.

2026ರಲ್ಲಿ ಆಡಿದ 29 ಪಂದ್ಯಗಳಿಂದ 38 ವಿಕೆಟ್ ಗಳನ್ನು ಅವರು ಪಡೆದಿದ್ದಾರೆ. ಇದು ಕ್ಯಾಲೆಂಡರ್ ವರ್ಷವೊಂದರಲ್ಲಿ ಯಾವುದೇ ಭಾರತೀಯ ಬೌಲರ್ ಮಾಡದ ಅತ್ಯುತ್ತಮ ಸಾಧನೆಯಾಗಿದೆ. 2022ರಲ್ಲಿ ಭುವನೇಶ್ವರ್ ಕುಮಾರ್ ಅವರು 32 ಪಂದ್ಯಗಳಿಂದ 37 ವಿಕೆಟ್ ಗಳಿಸಿದ್ದು ಈವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು.

ಕ್ರೈಸ್ಟ್ ಚರ್ಚಿನಲ್ಲಿ ನಡೆದ ಪಂದ್ಯವನ್ನು ಭಾರತ ತಂಡ 4 ವಿಕೆಟ್ ಗಳಿಂದ ಗೆದ್ದುಕೊಂಡಿತು. ಅಂತಿಮ ಹಂತದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಅರ್ಧಶತಕ ಬಾರಿಸಿದ ತಿಲಕ್ ವರ್ಮಾ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಪ್ರಸ್ತುತ 5 ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 2-0 ಮುನ್ನಡೆ ಕಾಯ್ದುಕೊಂಡಿದೆ.

ಈ ಪಂದ್ಯ ಭಾರತದ 300ನೇ ಟಿ20 ಪಂದ್ಯವಾಗಿತ್ತು. ಅತಿ ಹೆಚ್ಚು ಟಿ20 ಪಂದ್ಯಗಳನ್ನಾಡಿದ ದೇಶಗಳ ಪಟ್ಟಿಯಲ್ಲಿ ಭಾರತ 2ನೇ ಸ್ಥಾನದಲ್ಲಿದೆ 304 ಪಂದ್ಯಗಳನ್ನು ಆಡಿರುವ ಪಾಕಿಸ್ತಾನ ತಂಡ ಮೊದಲ ಸ್ಥಾನದಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಏಷ್ಯನ್ ಪ್ಯಾರಾ ಗೇಮ್ಸ್ ಅಖಾಡದಲ್ಲಿ ಭಾರತದ ವಿಶ್ವದಾಖಲೆಯ ಬೇಟೆ: 114 ಪದಕಗಳೊಂದಿಗೆ 4ನೇ ಸ್ಥಾನ ಪಡೆದ ಭಾರತ

ಭಾರತ ವಿರೋಧಿ ಭಾವನೆಯ ಯುಗ ಮುಗಿದಿದೆ: ನೇಪಾಳದ ಹಣಕಾಸು ಸಚಿವ

ಶಾಲಿನಿ ರಜನೀಶ್ ಸೇರಿದಂತೆ ಆರು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಕೆ.ಸಿ. ವೇಣುಗೋಪಾಲ್ ಮುಂದು!

ಸೌದಿ ಅರೇಬಿಯಾದ ಮೆಕ್ಕಾದಲ್ಲಿ ವೈಮಾನಿಕ ದಾಳಿಯ ಬೆದರಿಕೆ! ಎಮರ್ಜೆನ್ಸಿ ಅಲರ್ಟ್, ಮುಂದೇನಾಯ್ತು?

ಯಾರ ಶಾಂತಿ ಕಾಪಾಡಬೇಕು..? ಸರ್ಕಾರದ ವಿರುದ್ಧ ಧ್ವನಿ ಎತ್ತಿದರೆ ಶಾಂತಿ ಭಂಗವೇ?: ಪೀಸ್ ಬಾಂಡ್ ತಿರಸ್ಕರಿಸಿದ ನೇಹಾ ಬೋರಾ!