ವೈಭವ್ ಸೂರ್ಯವಂಶಿ 
ಕ್ರಿಕೆಟ್

ಬರೀ ವೈಭವ್​, ವೈಭವ್​ ಅಂದ್ರೆ ಹೇಗೆ? ನಿಮ್ಮಿಷ್ಟದಂತೆ ತಂಡ ಆಯ್ಕೆ ಮಾಡಲು ಸಾಧ್ಯವಿಲ್ಲ: ಟೀಂ​ ಇಂಡಿಯಾ ಬ್ಯಾಟಿಂಗ್​ ಕೋಚ್ ಶಾಕಿಂಗ್ ಹೇಳಿಕೆ!

ವೈಭವ್​ ಸೂರ್ಯವಂಶಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರೂ ಪ್ಲೇಯಿಂಗ್ ಇಲೆವೆನ್‌ಗೆ ಬರಲು ಸಾಧ್ಯವಾಗುತ್ತಿಲ್ಲ. ಒಂದು ಪಂದ್ಯವನ್ನು ಆಡುವ ಅವಕಾಶ​ ವೈಭವ್ ಸೂರ್ಯವಂಶಿಗೆ ಸಿಗದಿರುವುದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ಸೀತಾಂಶು ಕೋಟಕ್ ಅವರು, 'ಅದ್ಭುತ ಪ್ರತಿಭೆ' ಎನಿಸಿಕೊಂಡಿರುವ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಸುತ್ತ ಸೃಷ್ಟಿಯಾಗಿರುವ ಅತಿಯಾದ ಪ್ರಚಾರದ(hype) ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ವೈಭವ್​ ಸೂರ್ಯವಂಶಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರೂ ಪ್ಲೇಯಿಂಗ್ ಇಲೆವೆನ್‌ಗೆ ಬರಲು ಸಾಧ್ಯವಾಗುತ್ತಿಲ್ಲ. ಒಂದು ಪಂದ್ಯವನ್ನು ಆಡುವ ಅವಕಾಶ​ ವೈಭವ್ ಸೂರ್ಯವಂಶಿಗೆ ಸಿಗದಿರುವುದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಇಶಾನ್ ಕಿಶನ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ, 15 ವರ್ಷದ ವೈಭವ್ ಶನಿವಾರದ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ.

ಈ ಮಧ್ಯೆ ಶುಕ್ರವಾರ ವೈಭವ್​ ಸೂರ್ಯವಂಶಿ ಬಗ್ಗೆ ಮೊದಲ ಬಾರಿ ಮೌನ ಮುರಿದ ಬ್ಯಾಟಿಂಗ್ ಕೋಚ್ ಸೀತಾಂಶು ಕೋಟಕ್ ಅವರು, "ಅವನು ಇನ್ನೂ ಬಹಳ ಚಿಕ್ಕವನು. ತಂಡದ ಆಡಳಿತ ಮಂಡಳಿಯವರೆಲ್ಲರೂ ಅವನನ್ನು ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ. ನಾನಿದನ್ನು ತಟಸ್ಥವಾಗಿ ಗಮನಿಸುತ್ತಿದ್ದೇನೆ. ಎಲ್ಲರಿಗೂ ಅವನು ಇಷ್ಟ, ಸಾಮಾಜಿಕ ಜಾಲತಾಣಗಳಲ್ಲೂ ಅವನಿಗೆ ಮೆಚ್ಚುಗೆಯಿದೆ. ತಂಡದವರಿಗೂ ಅವನು ಇಷ್ಟ. ಜನರು ಅವನನ್ನು ಇಷ್ಟಪಡುತ್ತಾರೆ. ಆದರೆ ಕೇವಲ ಅಭಿಮಾನಿಗಳ ಒತ್ತಡಕ್ಕೆ ಮಣಿದು ಅಂತಿಮ ಹನ್ನೊಂದರ ಬಳಗದ ಆಯ್ಕೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ" ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.

ಜನರಿಗೆ ತಾವೇ ಇಷ್ಟಪಟ್ಟ ಆಟಗಾರರನ್ನು ಆಡುವ ಹನ್ನೊಂದರ ಬಳಗದಲ್ಲಿ ನೋಡುವ ಆಸೆಯಿರುತ್ತದೆ. ಆದರೆ ತಂಡದ ಮ್ಯಾನೇಜ್‌ಮೆಂಟ್ ಅಥವಾ ಆಯ್ಕೆ ಸಮಿತಿಯ ನಿರ್ಣಯಗಳು ಹಾಗೆ ಕೆಲಸ ಮಾಡಲು ಸಾಧ್ಯವಿಲ್ಲ. ಮ್ಯಾನೇಜ್‌ಮೆಂಟ್ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರಗಳು ಸಂಪೂರ್ಣವಾಗಿ ಒಟ್ಟಾರೆ ತಂಡದ ಹಿತದೃಷ್ಟಿಯಿಂದ ಕೂಡಿರುತ್ತವೆ ಎಂಬುದನ್ನು ಅಭಿಮಾನಿಗಳು ಅರ್ಥಮಾಡಿಕೊಳ್ಳಬೇಕು. ಬರೀ ವೈಭವ್ ವೈಭವ್ ಅಂದರೆ ಹೇಗೆ ಎಂದು ಕೋಟಕ್ ಪ್ರಶ್ನಿಸಿದ್ದಾರೆ.

ವೈಭವ್ ಸೂರ್ಯವಂಶಿ ಅಪಾರ ಪ್ರತಿಭೆಯುಳ್ಳ ಆಟಗಾರ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅವರಿಗೆ ಮುಂದಿನ ದಿನಗಳಲ್ಲಿ ಉಜ್ವಲ ಭವಿಷ್ಯವಿದೆ, ಆದರೆ, ಕೇವಲ ಜನರ ಮೆಚ್ಚುಗೆಗಾಗಿ ಅಥವಾ ಅಭಿಮಾನಿಗಳ ನಿರಂತರ ಒತ್ತಡಕ್ಕಾಗಿ ತಂಡದ ಸಂಯೋಜನೆಯನ್ನು ಪದೇ ಪದೇ ಬದಲಾಯಿಸಲು ಸಾಧ್ಯವಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಗಡಿಯಲ್ಲಿ ಚೀನಾ ಕ್ಯಾತೆ: ITBP ಮಹಾನಿರ್ದೇಶಕರ ಹೇಳಿಕೆ ತೀವ್ರ ಆತಂಕಕಾರಿ: ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಮತ್ತೆ ಚೀನಾ ಕ್ಯಾತೆ, ಗಲ್ವಾನ್ ರೀತಿಯ ಸಂಘರ್ಷ; ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯೊಂದಿಗೆ ಮತ್ತೆ ಮುಖಾಮುಖಿ?

'ಪರ್ಫೆಕ್ಟ್ ಪರ್ಯಾಯ': ನಮನ್‌ ಧೀರ್‌ ಆಲ್ರೌಂಡ್ ಆಟಕ್ಕೆ ಅಶ್ವಿನ್‌ ಫಿದಾ, ಪ್ರತಿಭೆ ಗುರುತಿಸಿದ ಆಯ್ಕೆ ಸಮಿತಿಗೆ ಮೆಚ್ಚುಗೆ!

ಅಂತ್ಯಕ್ರಿಯೆ ವೇಳೆ ಚರ್ಚ್‌ಗೆ ನುಗ್ಗಿ ಮನಬಂದಂತೆ ಗುಂಡಿನ ದಾಳಿ: 7 ಮಂದಿ ಸಾವು, 34 ಜನರಿಗೆ ಗಾಯ; Video

ಮೈಸೂರಿನಲ್ಲಿ ದುರಂತ: ನೀರಿನ ಪಂಪ್‌ ಸ್ವಚ್ಛಗೊಳಿಸುವಾಗ ವಿದ್ಯುತ್‌ ಶಾಕ್‌, ರಾಜಸ್ಥಾನ ಮೂಲದ ಯುವಕ ಸಾವು,Video