ಅಭಿಷೇಕ್ ಶರ್ಮಾ 
ಕ್ರಿಕೆಟ್

'ಯಾವ ರೀತಿಯ ಕ್ರಿಕೆಟ್‌ ಆಡುತ್ತಿದ್ದರೋ ಗೊತ್ತಿಲ್ಲ, 12 ಬಾಲ್ 50 ರನ್‌.. ಖಂಡಿತಾ ಸುಲಭವಲ್ಲ': ತನ್ನ ಗುರುವನ್ನು ಕೊಂಡಾಡಿದ ಅಭಿಷೇಕ್ ಶರ್ಮಾ!

ಮೊದಲ ವಿಕೆಟ್`ಗೆ ಈ ಜೋಡಿ 133 ರನ್ ಗಳ ಶತಕದ ಜೊತೆಯಾಟವಾಡಿತು. ವೈಭವ್ ಸೂರ್ಯವಂಶಿ ಕೇವಲ 19 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 45 ರನ್ ಗಳಿಸಿ ಔಟಾದರು.

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ತಮ್ಮ ಸ್ಫೋಟಕ ಬ್ಯಾಟಿಗ್ ಮೂಲಕ ಭಾರತ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟ ಅಭಿಷೇಕ್ ಶರ್ಮಾ ತಮ್ಮ ಗುರು ಹಾಗೂ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ವೇಗದ ಅರ್ಧಶತಕದ ದಾಖಲೆ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

ವೆಲ್ಟಿಂಗ್ಟನ್ನಲ್ಲಿ ಇಂದು ನಡೆದ ಮೂರನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಭಾರತಕ್ಕೆ ಗೆಲ್ಲಲು 199 ರನ್ ಗಳ ಬೃಹತ್ ಗುರಿ ನೀಡಿದರು. ಈ ಮೊತ್ತವನ್ನು ಬೆನ್ನು ಹತ್ತಿದ ಭಾರತಕ್ಕೆ ಆರಂಭಿಕರಾದ ಅಭಿಷೇಕ್ ಶರ್ಮಾ (118) ಮತ್ತು ವೈಭವ್ ಸೂರ್ಯವಂಶಿ (45) ಸ್ಫೋಟಕ ಆರಂಭ ನೀಡಿದರು.

ಮೊದಲ ವಿಕೆಟ್`ಗೆ ಈ ಜೋಡಿ 133 ರನ್ ಗಳ ಶತಕದ ಜೊತೆಯಾಟವಾಡಿತು. ವೈಭವ್ ಸೂರ್ಯವಂಶಿ ಕೇವಲ 19 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 45 ರನ್ ಗಳಿಸಿ ಔಟಾದರು. ಮತ್ತೊಂದು ಬದಿಯಲ್ಲಿ ತಮ್ಮ ಸ್ಫೋಟಕ ಇನ್ನಿಂಗ್ಸ್ ಮುಂದುವರೆಸಿದ ಅಭಿಷೇಕ್ ಶರ್ಮಾ 38 ಎಸೆತಗಳಲ್ಲಿ 11 ಸಿಕ್ಸರ್ ಮತ್ತು 9 ಬೌಂಡರಿಗಳ ಸಹಿತ 113 ರನ್ ಚಚ್ಚಿ ಭಾರತದ ಗೆಲುವು ಖಚಿತ ಪಡಿಸಿದರು.

ಬಳಿಕ ಭಾರತ ತಂಡ ಕೇವಲ 13.2 ಓವರ್ ನಲ್ಲೇ 4 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿ 6ವಿಕೆಟ್`ಗಳ ಭರ್ಜರಿ ಜಯ ಸಾಧಿಸಿತು.

ಗುರುವನ್ನು ಕೊಂಡಾಡಿದ ಅಭಿಷೇಕ್ ಶರ್ಮಾ

ಇನ್ನು ಪಂದ್ಯದ ಬಳಿಕ ನಡೆದ ಪ್ರಶಸ್ತಿ ಪ್ರದಾನ ವೇಳೆ ಮಾತನಾಡಿದ ಅಭಿಷೇಕ್ ಶರ್ಮಾ ತಮ್ಮ ಗುರು ಯುವರಾಜ್ ಸಿಂಗ್ ಅವರನ್ನು ಕೊಂಡಾಡಿದರು. ತಮ್ಮ ಗುರು ಹಾಗೂ ಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಅವರ ತಮಾಷೆಯ ಸವಾಲಿಗೆ ಅಷ್ಟೇ ನೇರವಾಗಿ ಉತ್ತರಿಸಿರುವ ಅಭಿಷೇಕ್ ಶರ್ಮಾ, ‘12 ಎಸೆತಗಳಲ್ಲಿ 50 ರನ್‌ ಗಳಿಸುವುದು ಅಷ್ಟು ಸುಲಭವಲ್ಲ’ ಎಂದು ಹೇಳಿದ್ದಾರೆ.

‘12 ಎಸೆತಗಳಲ್ಲಿ 50 ರನ್‌ ಗಳಿಸುವುದು ಸುಲಭವಲ್ಲ’

ಪಂದ್ಯದ ಬಳಿಕದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಯುವರಾಜ್‌ ಅವರ ತಮಾಷೆಯ ಕುರಿತು ಪ್ರತಿಕ್ರಿಯಿಸಿದ ಅಭಿಷೇಕ್‌, “ಆ ಸಮಯದಲ್ಲಿ ಅವರು ಯಾವ ರೀತಿಯ ಕ್ರಿಕೆಟ್‌ ಆಡುತ್ತಿದ್ದರೋ ನನಗೆ ಗೊತ್ತಿಲ್ಲ. ಆದರೆ, 12 ಎಸೆತಗಳಲ್ಲಿ 50 ರನ್‌ ಗಳಿಸುವುದು ಖಂಡಿತವಾಗಿಯೂ ಸುಲಭವಲ್ಲ. ಆ ರೀತಿ ಬ್ಯಾಟ್‌ ಮಾಡಲು ಬಯಸುವ ಯಾವುದೇ ಆಟಗಾರನಿಗೂ ಅದು ಸುಲಭದ ಕೆಲಸವಲ್ಲ. 12 ಎಸೆತಗಳಲ್ಲಿ 50 ರನ್‌ ಗಳಿಸುವುದು ಅಪರೂಪಕ್ಕೆ ನಡೆಯುವ ಸಂಗತಿಯಷ್ಟೇ” ಎಂದು ಹೇಳಿದರು.

‘ವೈಯಕ್ತಿಕ ದಾಖಲೆಗಿಂತ ತಂಡದ ಗೆಲುವೇ ಮುಖ್ಯ’

12 ಎಸೆತಗಳಲ್ಲಿ ಅರ್ಧಶತಕ ಗಳಿಸುವುದನ್ನು ಗುರಿಯಾಗಿಸಿಕೊಳ್ಳುವುದಿಲ್ಲ ಎಂದು ಅಭಿಷೇಕ್‌ ಸ್ಪಷ್ಟಪಡಿಸಿದರು. ಗುರು ಯುವರಾಜ್‌ ಸಿಂಗ್‌ ಅವರ ತಮಾಷೆಯ ಸವಾಲಿಗೆ ನಗುತ್ತಲೇ ಉತ್ತರಿಸಿದ ಅಭಿಷೇಕ್‌, ವೈಯಕ್ತಿಕ ದಾಖಲೆಗಳಿಗಿಂತ ತಂಡದ ಗೆಲುವೇ ತಮ್ಮ ಮೊದಲ ಆದ್ಯತೆ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

“ಬ್ಯಾಟರ್‌ಗಳಾಗಿ ನಾವು ಇಂತಹ ದಾಖಲೆಗಳ ಹಿಂದೆ ಹೋಗುವುದಿಲ್ಲ. ತಂಡವನ್ನು ಗೆಲ್ಲಿಸುವುದೇ ನಮ್ಮ ಗುರಿ. ನನ್ನ ಮತ್ತು ವೈಭವ್‌ ಸೂರ್ಯವಂಶಿ ಅವರ ಉದ್ದೇಶ ತಂಡಕ್ಕೆ ಸ್ಫೋಟಕ ಆರಂಭ ಒದಗಿಸುವುದು. ಈ ಸರಣಿಯಲ್ಲೂ ಇದೇ ಯೋಜನೆಯನ್ನು ಮುಂದುವರಿಸಲು ಬಯಸುತ್ತೇವೆ. ಅದು ಉತ್ತಮವಾಗಿ ಕಾರ್ಯರೂಪಕ್ಕೆ ಬಂದಿದೆ” ಎಂದು ಹೇಳಿದರು.

ಕೋಚಿಂಗ್ ಸಿಬ್ಬಂದಿಗೂ ಅಭಿಷೇಕ್ ಧನ್ಯವಾದ

ತಮ್ಮ ಸ್ಫೋಟಕ ಬ್ಯಾಟಿಂಗ್‌ ಹಿಂದೆ ಕೋಚಿಂಗ್‌ ಸಿಬ್ಬಂದಿಯ ಮಾರ್ಗದರ್ಶನ ಮತ್ತು ನಿರಂತರ ಅಭ್ಯಾಸದ ಪಾತ್ರ ಮಹತ್ವದ್ದಾಗಿದೆ ಎಂದು ಅಭಿಷೇಕ್‌ ತಿಳಿಸಿದರು.

“ಇದರ ಹಿಂದೆ ಸಾಕಷ್ಟು ತಯಾರಿ ಇದೆ. ನಮ್ಮ ಕೋಚ್‌ಗಳಿಗೆ ವಿಶೇಷ ಧನ್ಯವಾದ ಹೇಳಬೇಕು. ಸೈಡ್‌ಆರ್ಮ್‌ ಮೂಲಕ ಬೌಲಿಂಗ್‌ ಮಾಡುವ ಅಭ್ಯಾಸವನ್ನು ನಾವು ಸಾಕಷ್ಟು ಮಾಡಿದ್ದೇವೆ. ಇದರಿಂದ ಪಂದ್ಯದಲ್ಲಿ ಸಹಜ ಆಟ ಪ್ರದರ್ಶಿಸಲು ನೆರವಾಗಿದೆ” ಎಂದರು.

ಪಿಚ್‌ನ ಪರಿಸ್ಥಿತಿ, ಮೈದಾನದ ಆಯಾಮಗಳು ಹಾಗೂ ಎದುರಾಳಿ ಬೌಲರ್‌ಗಳ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಹೊಡೆತಗಳನ್ನು ಆಯ್ಕೆ ಮಾಡುವುದು ತಮ್ಮ ಬ್ಯಾಟಿಂಗ್‌ ತಂತ್ರದ ಭಾಗವಾಗಿದೆ ಎಂದೂ ಅಭಿಷೇಕ್‌ ವಿವರಿಸಿದರು.

ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ಯುವಿ

2007ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಯುವರಾಜ್‌ ಸಿಂಗ್‌ ಸ್ಟುವರ್ಟ್‌ ಬ್ರಾಡ್‌ ಅವರ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ ಸಿಡಿಸಿ ಇತಿಹಾಸ ನಿರ್ಮಿಸಿದ್ದರು. ಕೇವಲ 12 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದ ಅವರು, ಭಾರತದ ಪರ ಅತಿ ವೇಗದ ಟಿ20 ಅಂತಾರಾಷ್ಟ್ರೀಯ ಅರ್ಧಶತಕದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದರು.

ಯುವರಾಜ್‌ ಅವರ ಶಿಷ್ಯನಾಗಿರುವ ಅಭಿಷೇಕ್‌, ಆ ದಾಖಲೆಯ ಸಮೀಪಕ್ಕೆ ಬಂದರೂ 15 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಆದರೆ, ನಂತರದ ಸ್ಫೋಟಕ ಬ್ಯಾಟಿಂಗ್‌ನಿಂದ ಕೇವಲ 35 ಎಸೆತಗಳಲ್ಲಿ ಶತಕ ಪೂರೈಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್ ಗೆ ಮುಖಭಂಗ: ಬ್ಯಾಲೆಟ್ ಪೇಪರ್ ಮೂಲಕ ನಡೆದ MLC ಚುನಾವಣೆಯಲ್ಲಿ 4 ಸ್ಥಾನ NDA ತೆಕ್ಕೆಗೆ!

MLC Election: ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ BJPಯ ಶಶೀಲ್‌ ನಮೋಶಿ ಜಯಭೇರಿ; ಕಾಂಗ್ರೆಸ್‌ನ ಮಟ್ಟೂರುಗೆ ಮುಖಭಂಗ!

ನಡು ರಸ್ತೆಯಲ್ಲೇ ಯುವತಿಯ ಎದೆ ಮುಟ್ಟಿ, ಬಟ್ಟೆ ಎಳೆದ ದುಷ್ಕರ್ಮಿ; ಅಪಹರಣಕ್ಕೆ ಯತ್ನಿಸಿದವನಿಗೆ 'ಧರ್ಮದೇಟು'! Video

ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಮುಹೂರ್ತ ಫಿಕ್ಸ್: ಡಿಸೆಂಬರ್ 7 ರಿಂದ ಕಲಾಪ ಆರಂಭ

MLC election: BJP-JDS ಮೈತ್ರಿ ಅಭ್ಯರ್ಥಿ ರಂಗನಾಥ್ ಭರ್ಜರಿ ಗೆಲುವು; ಪುಟ್ಟಣ್ಣಗೆ ಹೀನಾಯ ಸೋಲು, ಕಾಂಗ್ರೆಸ್​ಗೆ ಮುಖಭಂಗ!