ವಿರಾಟ್ ಕೊಹ್ಲಿ, ಹ್ಯಾರಿ ಕೇನ್‌ 
ಕ್ರಿಕೆಟ್

ಈ ಪ್ರಶಸ್ತಿಗೆ ನೀವು ಸಂಪೂರ್ಣ ಅರ್ಹರು: ಹ್ಯಾರಿ ಕೇನ್‌ಗೆ ವಿರಾಟ್ ಕೊಹ್ಲಿ ಅಭಿನಂದನೆ!

2001ರಲ್ಲಿ ಮೈಕೆಲ್ ಓವನ್ ಈ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ಈ ಸಾಧನೆ ಮಾಡಿದ ಮೊದಲ ಇಂಗ್ಲಿಷ್ ಆಟಗಾರ ಹ್ಯಾರಿ ಕೇನ್ ಆಗಿದ್ದಾರೆ.

'ಬ್ಯಾಲನ್ ಡಿ'ಓರ್' (Ballon d'Or) ಪ್ರಶಸ್ತಿ ವಿಜೇತ ಹ್ಯಾರಿ ಕೇನ್ ಅವರಿಗೆ ವಿರಾಟ್ ಕೊಹ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

ಫುಟ್‌ಬಾಲ್ ಕ್ರೀಡೆಯ ಅತ್ಯಂತ ಪ್ರತಿಷ್ಠಿತ ವೈಯಕ್ತಿಕ ಗೌರವವನ್ನು ಪಡೆದ ಐದನೇ ಇಂಗ್ಲೀಷ್ ಆಟಗಾರ ಇವರಾಗಿದ್ದಾರೆ. 2001ರಲ್ಲಿ ಮೈಕೆಲ್ ಓವನ್ ಈ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ಈ ಸಾಧನೆ ಮಾಡಿದ ಮೊದಲ ಇಂಗ್ಲಿಷ್ ಆಟಗಾರ ಹ್ಯಾರಿ ಕೇನ್ ಆಗಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿರುವ ವಿರಾಟ್ ಕೊಹ್ಲಿ, ನನ್ನ ಸ್ನೇಹಿತ ಹ್ಯಾರಿ, ಫುಟ್‌ಬಾಲ್‌ನಲ್ಲಿ ಇಷ್ಟು ವರ್ಷಗಳ ಕಾಲ ನೀವು ತೋರಿದ ದೃಢತೆ, ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಗೆ ಈ ಪ್ರಶಸ್ತಿ ನಿಮಗೆ ಸಂಪೂರ್ಣವಾಗಿ ಸಲ್ಲುತ್ತದೆ ಎಂದಿದ್ದಾರೆ.

ನಿಮ್ಮ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ. ದೇವರು ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಆಶೀರ್ವದಿಸಲಿ. ನಿಮ್ಮ ಪ್ರಯಾಣದ ಬಗ್ಗೆ ನಿಮಗೆ ಹೆಮ್ಮೆ ಇರುವಂತೆಯೇ, ನಿಮ್ಮ ಕುಟುಂಬದವರಿಗೂ ನಿಮ್ಮ ಬಗ್ಗೆ ಖಂಡಿತವಾಗಿಯೂ ಹೆಮ್ಮೆ ಇರುತ್ತದೆ. ನನ್ನ ಶುಭಾಶಯಗಳು ಯಾವಾಗಲೂ ನಿಮ್ಮೊಂದಿಗೆ ಇರುತ್ತವೆ. ಅಭಿನಂದನೆಗಳು ಎಂದು ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ಅವರ ತಂಡವಾದ 'ರಾಯಲ್ ಚಾಲೆಂಜರ್ಸ್ ಬೆಂಗಳೂರು' (RCB) ಮೊದಲ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯನ್ನು ಗೆದ್ದಾಗ, ಮೈಕೆಲ್ ಓವನ್ ಕೂಡ ಅವರನ್ನು ಅಭಿನಂದಿಸಿದ್ದರು.

ಡಿಸಿಎಂ ಪರಮೇಶ್ವರ್ ಆರೋಗ್ಯದಲ್ಲಿ ಏರುಪೇರು: ಸಿಎಂ ಸೇರಿದಂತೆ ಹಲವು ಸಚಿವರು ಆಸ್ಪತ್ರೆಗೆ ದೌಡು!

ಮೋದಿ ಭೇಟಿಗೂ ಮುನ್ನ ಜಲವಿದ್ಯುತ್ ಯೋಜನೆಗಾಗಿ 32,000 ಮರಗಳಿಗೆ ಕೊಡಲಿ! ಸಂಜಯ್ ರಾವತ್ ಕಿಡಿ

SIR ವಿವಾದ: ECI ಸಮರ್ಥನೆಗೆ ಆಕ್ಷೇಪಣೆ ಸಲ್ಲಿಸಲು ಅರ್ಜಿದಾರರಿಗೆ 10 ದಿನಗಳ ಕಾಲಾವಕಾಶ ನೀಡಿದ ಸುಪ್ರೀಂ ಕೋರ್ಟ್..!

Veto ಇಲ್ಲದ ಖಾಯಂ ಸದಸ್ಯತ್ವ '2ನೇ ದರ್ಜೆ'ಗೆ ಸಮಾನ, ಅರೆಬರೆ ಸದಸ್ಯತ್ವ ನಮಗೆ ಬೇಡ: ವಿಶ್ವಸಂಸ್ಥೆಗೆ ಭಾರತ ಖಡಕ್ ಸಂದೇಶ; Video

ಗರ್ಭಿಣಿ ಪತ್ರಕರ್ತೆಯನ್ನು'ತಳ್ಳಿದ' ಆರೋಪ: ರಾಹುಲ್ ಗಾಂಧಿಯಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್!