ಡಬ್ಲ್ಯುಪಿಎಲ್ 
ಕ್ರಿಕೆಟ್

WPLನಲ್ಲಿನ ತಂಡಗಳ ಸಂಖ್ಯೆ ಹೆಚ್ಚಿಸುವ ಮಾರ್ಗಗಳನ್ನು BCCI ಪರಿಶೀಲಿಸಲಿದೆ: ದೇವಜಿತ್ ಸೈಕಿಯಾ

ಟೂರ್ನಿ ಆರಂಭವಾದ ನಾಲ್ಕು ವರ್ಷಗಳಲ್ಲಿ ಡಬ್ಲ್ಯುಪಿಎಲ್ ಬಹಳ ದೂರ ಸಾಗಿದೆ ಮತ್ತು ಈಗ ಈ ಲೀಗ್ ಮಹಿಳಾ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಮೆರೆಯುತ್ತಿದೆ ಎಂದು ಸೈಕಿಯಾ ಹೇಳಿದರು.

ಕೊಚ್ಚಿ: ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (WPL) ತಂಡಗಳ ಸಂಖ್ಯೆಯನ್ನು ಹೆಚ್ಚಿಸುವ ಕುರಿತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು 'ಕೆಲವು ಸಮಾಲೋಚನಾ ಸಭೆಗಳನ್ನು' (brainstorming sessions) ನಡೆಸಬೇಕಾಗುತ್ತದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದಾರೆ.

2023ರಲ್ಲಿ ಪಂದ್ಯಾವಳಿ ಆರಂಭವಾದಾಗಿನಿಂದಲೂ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಐದು ತಂಡಗಳಿವೆ. ಡಬ್ಲ್ಯುಪಿಎಲ್‌ನಲ್ಲಿ ಇದೀಗ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಯುಪಿ ವಾರಿಯರ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳಿವೆ.

'ಮುಂದಿನ ವರ್ಷದಿಂದ, ತಂಡಗಳ ಸಂಖ್ಯೆಯನ್ನು ಹೆಚ್ಚಿಸಲು ಹಾಗೂ ನಾವು ಸುಧಾರಣೆಗಳನ್ನು ಕಾಣಬಹುದಾದ ಇತರ ಕ್ಷೇತ್ರಗಳ ಬಗ್ಗೆಯೂ ಗಂಭೀರವಾಗಿ ಚರ್ಚಿಸಿ, ಯೋಜನೆಗಳನ್ನು ರೂಪಿಸಬೇಕಾಗುತ್ತದೆ' ಎಂದರು.

'ಇಲ್ಲಿ ಕೇವಲ ಆಟಗಾರರು ಮಾತ್ರವಲ್ಲದೆ, ತರಬೇತುದಾರರು (ಕೋಚ್‌ಗಳು), ಆಯ್ಕೆದಾರರು ಮತ್ತು ಇತರ ಸಂಬಂಧಿತ ಪಾಲುದಾರರು ಸೇರಿದಂತೆ ಹಲವು ವಿಭಾಗಗಳಲ್ಲಿ ನಾವು ತೊಡಗಿಸಿಕೊಂಡಿದ್ದೇವೆ' ಎಂದು ಬುಧವಾರ ಇಲ್ಲಿ ನಡೆದ ಹರಾಜು ಪ್ರಕ್ರಿಯೆಯ ಸಂದರ್ಭದಲ್ಲಿ ಸೈಕಿಯಾ ಅವರು ಡಬ್ಲ್ಯುಪಿಎಲ್ ವೆಬ್‌ಸೈಟ್‌ಗೆ ತಿಳಿಸಿದರು.

ನಾಲ್ಕು ವರ್ಷಗಳಲ್ಲಿ ಡಬ್ಲ್ಯುಪಿಎಲ್ ಬಹಳ ದೂರ ಸಾಗಿದೆ ಮತ್ತು ಈಗ ಈ ಲೀಗ್ ಮಹಿಳಾ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಮೆರೆಯುತ್ತಿದೆ ಎಂದು ಸೈಕಿಯಾ ಹೇಳಿದರು.

'ಐಪಿಎಲ್ ನಂತರ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಡಬ್ಲ್ಯುಪಿಎಲ್ ಒಂದು ಪ್ರಮುಖ ಲೀಗ್ ಆಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ನಾವು ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ ಮತ್ತು ಈಗ ಮಹಿಳಾ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಹೊಂದಿದ್ದೇವೆ. ಭಾರತದಲ್ಲಿ ಮಹಿಳಾ ಕ್ರಿಕೆಟ್‌ನ ಯಶಸ್ಸಿಗೆ ಡಬ್ಲ್ಯುಪಿಎಲ್ ಕೊಡುಗೆ ನೀಡಿದೆ' ಎಂದು ಅವರು ತಿಳಿಸಿದರು.

ಹರಾಜಿನಲ್ಲಿ ಸೋಫಿ ಮೊಲಿನ್ಯೂ ಅತ್ಯಂತ ದುಬಾರಿ ಆಟಗಾರ್ತಿಯಾಗಿ ಹೊರಹೊಮ್ಮಿದರು; ಆಸ್ಟ್ರೇಲಿಯಾದ ಹಾಲಿ ನಾಯಕಿಯಾಗಿರುವ ಇವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಯುಪಿ ವಾರಿಯರ್ಸ್ ₹1.10 ಕೋಟಿ ರೂಪಾಯಿಗಳನ್ನು ವ್ಯಯಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯದ ಜನತೆಗೆ ಬಿಗ್ ಶಾಕ್: ನಂದಿನ ಹಾಲಿನ ದರ ಲೀಟರ್‌ಗೆ ಬರೋಬ್ಬರಿ 8 ರೂ. ಹೆಚ್ಚಳ; ನವೆಂಬರ್‌ 1 ರಿಂದಲೇ ಜಾರಿ!

ಸ್ಟಿಂಗ್ ಆಪರೇಷನ್ ಕೇವಲ ಕಟ್ಟು ಕಥೆ: ಮಾಜಿ ಸಿಎಂ ಸಿದ್ದರಾಮಯ್ಯಗೆ ಸಿಸಿಬಿ ಕ್ಲೀನ್ ಚಿಟ್!

ನವ ಬೆಂಗಳೂರು ನಿರ್ಮಾಣದತ್ತ ಡಿಕೆಶಿ ದೃಢ ಹೆಜ್ಜೆ: ₹1 ಲಕ್ಷ ಕೋಟಿ ಯೋಜನೆ; ಟನಲ್ ರೋಡ್ ಸೇರಿ 500 ಕಿ.ಮೀ ಹೊಸ ರಸ್ತೆ ನಿರ್ಮಾಣ!

'ನಿಮ್ಮನ್ನೆಲ್ಲ ತುಂಡು ತುಂಡಾಗಿ ಕತ್ತರಿಸಿ ಹಾಕ್ತೇನೆ'; ಬೆಟ್ಟಿಂಗ್ ಆಪರೇಟರ್‌`ಗಳಿಗೆ ಗ್ಯಾಂಗ್‌ಸ್ಟರ್ Lawrence Bishnoi ಬೆದರಿಕೆ, ಆಡಿಯೋ ವೈರಲ್!

ಬಿಜೆಪಿಗೆ ಅಷ್ಟು ವಿಶ್ವಾಸವಿದ್ದರೆ, ಸಂಸತ್ತನ್ನು ವಿಸರ್ಜಿಸಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ಎದುರಿಸಲಿ: ಖರ್ಗೆ