ಪಾಕ್ ನಾಯಕಿ ಫಾತಿಮಾ ಸನಾ 
ಕ್ರಿಕೆಟ್

ವಿಶ್ವಕಪ್ 2026: ಶಫಾಲಿ ವರ್ಮಾ ಗೆ ಫೆವಿಲಿಯನ್ ಗೆ ಹೋಗು ಎನ್ನುವಂತೆ ಕೈ ಸನ್ನೆ, ಪಾಕ್ ನಾಯಕಿ ವಿರುದ್ಧ ಭಾರತೀಯರ ಆಕ್ರೋಶ, ಟ್ರೋಲ್! Video

ಫಾತಿಮಾ ಸನಾ 6 ಎಸೆತಗಳಲ್ಲಿ 12 ರನ್ ಗಳಿಸಿದ್ದ ಭಾರತದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಅವರನ್ನು ಔಟ್ ಮಾಡಿ, ನಂತರ ಪೆವಿಲಿಯನ್‌ಗೆ ಹೋಗು ಎನ್ನುವಂತೆ ಕೈ ಸನ್ನೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ದುಬೈ: ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮಹಿಳೆಯರ ಏಷ್ಯಾ ಕಪ್ ಟೂರ್ನಿಯ ಭಾರತ ಹಾಗೂ ಪಾಕಿಸ್ತಾನ ಪಂದ್ಯದ ವೇಳೆ ಆರಂಭಿಕರಾಗಿ ಕಣಕ್ಕಿಳಿದ ಶೆಫಾಲಿ ವರ್ಮಾ ಅವರಿಗೆ ಪಾಕ್‌ ನಾಯಕಿ ಫಾತಿಮಾ ಸನಾ ಮಾಡಿದ ಕೈಸನ್ನೆ ಇದೀಗ ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಶಫಾಲಿ ವರ್ಮಾ ಅವರನ್ನು ಔಟ್ ಮಾಡಿದ ನಂತರ ಫಾತಿಮಾ ಸನಾ ಮಾಡಿದ ಸಂಭ್ರಮಾಚರಣೆಗೆ ಟೀಕೆ ವ್ಯಕ್ತವಾಗಿದೆ. ಫಾತಿಮಾ ಸನಾ 6 ಎಸೆತಗಳಲ್ಲಿ 12 ರನ್ ಗಳಿಸಿದ್ದ ಭಾರತದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಅವರನ್ನು ಔಟ್ ಮಾಡಿ, ನಂತರ ಪೆವಿಲಿಯನ್‌ಗೆ ಹೋಗು ಎನ್ನುವಂತೆ ಕೈ ಸನ್ನೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಸದ್ಯ ಇದರ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದೆ. ಪಾಕಿಸ್ತಾನ ಭಾರತದ ವಿರುದ್ಧ ಸೋತ ನಂತರ ಈ ವಿಡಿಯೋ ಇಟ್ಟುಕೊಂಡು ನೆಟ್ಟಿಗರು ಫಾತಿಮಾ ಸನಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

ಮಹಿಳಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ತಂಡ ತನ್ನ ಅತ್ಯಂತ ಕಡಿಮೆ ಮೊತ್ತವಾದ 55 ರನ್‌ಗಳಿಗೆ ಕುಸಿದಿದ್ದರೂ, ಫಾತಿಮಾ ಅವರ ವರ್ತನೆಯನ್ನು ಕಾಮೆಂಟೇಟರ್ ವಿವೇಕ್ ರಜ್ದಾನ್ ಟೀಕಿಸಿದ್ದಾರೆ.

"ಸರಿ, ನೀವು ಅವರಿಗೆ ಹೊರಹೋಗುವ ದಾರಿಯನ್ನು ತೋರಿಸುತ್ತಿದ್ದೀರಿ. ಆದರೆ ನಿಮ್ಮ ಇಡೀ ತಂಡ ಗಳಿಸಿದ್ದು ಕೇವಲ 55 ರನ್, ಅಂತಹದರಲ್ಲಿ ನೀವು ಶಫಾಲಿ ವರ್ಮಾ ಅವರನ್ನು ಹೊರಗೆ ಹೋಗು ಎನ್ನುತ್ತೀರಾ ಎಂದು ರಜ್ದಾನ್ ಹೇಳಿದ್ದಾರೆ.

2026ರ ಮಹಿಳಾ ಏಷ್ಯಾ ಕಪ್‌ನಲ್ಲಿ ಭಾರತ ತಂಡವು ಇನ್ನೂ 68 ಎಸೆತಗಳು ಬಾಕಿ ಇರುವಾಗ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸುಲಭವಾಗಿ ಸೋಲಿಸಿತು. ಪಾಕಿಸ್ತಾನ 18.1 ಓವರ್‌ಗಳಲ್ಲಿ 55 ರನ್‌ಗಳಿಗೆ ಆಲೌಟ್ ಆಯಿತು. ಇದು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಂಡದ ಅತ್ಯಂತ ಕಡಿಮೆ ಮೊತ್ತವಾಗಿದೆ.

ಭಾರತ ತಂಡವು 8.4 ಓವರ್‌ಗಳಲ್ಲಿ ಪಂದ್ಯವನ್ನು ಗೆದ್ದು, ಪಂದ್ಯಾವಳಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿತು. ಭಾರತ ಈಗಾಗಲೇ ಸೆಮಿಫೈನಲ್‌ಗೆ ಅರ್ಹತೆ ಪಡೆದಿದ್ದು, ಗುಂಪು ಹಂತವನ್ನು ಸೋಲಿಲ್ಲದೆ ಪೂರ್ಣಗೊಳಿಸಿದೆ. ಮತ್ತೊಂದೆಡೆ, ಪಾಕಿಸ್ತಾನ ಇನ್ನೂ ಅರ್ಹತೆ ಪಡೆಯಬೇಕಿದ್ದು, ಅದು ಹಾಂಗ್ ಕಾಂಗ್ ವಿರುದ್ಧ ತನ್ನ ಅಂತಿಮ ಗುಂಪು ಪಂದ್ಯವನ್ನು ಆಡಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Hormuz ಜಲಸಂಧಿಯಲ್ಲಿ ಮಹಾ ಸಂಘರ್ಷ: Iran 3 ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕಾ ದಾಳಿ; 'ಕಠಿಣ ಪ್ರತೀಕಾರ'ದ ಶಪಥ ಮಾಡಿದ ಟೆಹ್ರಾನ್!

100 ದಿನಗಳ ಹೊಸ್ತಿಲಲ್ಲಿ ಡಿಕೆಶಿ ಸರ್ಕಾರ: ಸಾಧನೆಗಳ ಪಟ್ಟಿ ಹಿಡಿದು ಕಾಂಗ್ರೆಸ್ ಅಖಾಡಕ್ಕೆ, ‘ಯು-ಟರ್ನ್’ ಅಸ್ತ್ರದೊಂದಿಗೆ ವಿಪಕ್ಷಗಳ ಕೌಂಟರ್‌..!

ಡಿಕೆಶಿಗೆ ಟಕ್ಕರ್ ಕೊಡಲು ಹೊಸ ತಂತ್ರ: AHINDA ಮುರಿದು ‘HINDA’ ಕಟ್ಟಲು ಸಿದ್ದು ಮಾಸ್ಟರ್ ಪ್ಲ್ಯಾನ್, ಮಗನ ಭವಿಷ್ಯಕ್ಕಾಗಿ ಹಳೆಯ ಮಿತ್ರರಿಗೆ ಗೇಟ್‌ಪಾಸ್?

Miss World 2026: ವಿಶ್ವಸುಂದರಿ ಪಟ್ಟ ಮುಡಿಗೇರಿಸಿಕೊಂಡ ಡೊಮಿನಿಕನ್ ರಿಪಬ್ಲಿಕ್‌ನ ಬ್ಯೂಟಿ! ಭಾರತದ ನಿಕಿತಾ ಪೂರ್ವಾಲ್ ಗೆ ನಿರಾಸೆ

ಅರ್ಷದೀಪ್ ಸಿಂಗ್, ಸಮ್ರೀನ್ ಕೌರ್ ನಡುವೆ ವಿಶೇಷವಾದ ಪ್ರೇಮ: ತೋಳುಗಳ ಮೇಲೆ ತಮ್ಮ ಹೆಸರಿನ ಮೊದಲ ಅಕ್ಷರದ ಟ್ಯಾಟೋ! ವೈರಲ್