ಕಪಿಲ್ ದೇವ್ 
ಕ್ರಿಕೆಟ್

'ಅವರೆಲ್ಲರಿಗೂ ಗಾಲ್ಫ್ ಆಡುವಂತೆ ಹೇಳಿ'; ಮೊಹ್ಸಿನ್ ನಖ್ವಿ ಕೈಯಿಂದ ಮಹಿಳಾ ಏಷ್ಯಾ ಕಪ್ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಭಾರತ: ಕಪಿಲ್ ದೇವ್ ಪ್ರತಿಕ್ರಿಯೆ

ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಶ್ರೀಲಂಕಾವನ್ನು 72 ರನ್‌ಗಳಿಂದ ಸೋಲಿಸುವ ಮೂಲಕ ಭಾರತವು ದಾಖಲೆಯ ಎಂಟನೇ ಬಾರಿಗೆ ಮಹಿಳಾ ಏಷ್ಯಾ ಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

2025ರ ನಂತರ, 2026ರಲ್ಲೂ ಅದೇ ಸನ್ನಿವೇಶ ಮರುಕಳಿಸಿದೆ. ಪುರುಷರ ತಂಡದಂತೆಯೇ, ಇದೀಗ ಮಹಿಳಾ ಕ್ರಿಕೆಟ್ ತಂಡವೂ ಪಾಕಿಸ್ತಾನದ ಸಚಿವ ಹಾಗೂ ಎಎಸಿ ಮುಖ್ಯಸ್ಥರೂ ಆಗಿರುವ ಮೊಹ್ಸಿನ್ ನಖ್ವಿ ಅವರಿಂದ ಏಷ್ಯಾ ಕಪ್ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿದೆ. ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಭಾರತೀಯ ಮಹಿಳಾ ತಂಡ ನಿರಾಕರಿಸಿದ್ದು, 2025ರ ಪುರುಷರ ಟೂರ್ನಿಯಲ್ಲಿ ಕೈಗೊಂಡಿದ್ದ ನಿಲುವಿನ ಪುನರಾವರ್ತನೆಯಾಗಿದೆ. ಅದೇ ವರ್ಷ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಭಟನೆಯಾಗಿ, ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡವು ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಿರಲಿಲ್ಲ.

ಭಾರತೀಯ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಅವರನ್ನು, ಮೊಹ್ಸಿನ್ ನಖ್ವಿ ಅವರಿಂದ ಮಹಿಳಾ ಏಷ್ಯಾ ಕಪ್ ಟ್ರೋಫಿಯನ್ನು ಸ್ವೀಕರಿಸಲು ಭಾರತ ನಿರಾಕರಿಸಿದ ವಿಷಯದ ಕುರಿತು ಕೇಳಿದಾಗ, 'ಅವರೆಲ್ಲರಿಗೂ ಗಾಲ್ಫ್ ಆಡುವಂತೆ ಹೇಳಿ' ಎಂದು ಪ್ರತಿಕ್ರಿಯಿಸಿದ್ದಾರೆ.

ದುಬೈನಲ್ಲಿ ನಡೆದ ಟೂರ್ನಿಯಲ್ಲಿನ ಗೆಲುವಿನ ನಂತರ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಮಹಿಳಾ ಏಷ್ಯಾ ಕಪ್ ಟ್ರೋಫಿಯನ್ನು ಸ್ವೀಕರಿಸದಿರುವ ನಿರ್ಧಾರವನ್ನು ಕೂಲಂಕಷ ಚರ್ಚೆಯ ನಂತರವೇ ತೆಗೆದುಕೊಳ್ಳಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಉಪಾಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ.

ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಶ್ರೀಲಂಕಾವನ್ನು 72 ರನ್‌ಗಳಿಂದ ಸೋಲಿಸುವ ಮೂಲಕ ಭಾರತವು ದಾಖಲೆಯ ಎಂಟನೇ ಬಾರಿಗೆ ಮಹಿಳಾ ಏಷ್ಯಾ ಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಆದರೆ, ಪಾಕಿಸ್ತಾನದ ಗೃಹ ಸಚಿವರು ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಮುಖ್ಯಸ್ಥರೂ ಆಗಿರುವ ನಖ್ವಿ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಲು ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡ ನಿರಾಕರಿಸಿತು.

ಪಾಕಿಸ್ತಾನ ವಿರುದ್ಧದ 2025ರ ಏಷ್ಯಾ ಕಪ್ ಗೆಲುವಿನ ನಂತರ ಭಾರತೀಯ ಪುರುಷರ ತಂಡವು ಕೈಗೊಂಡಿದ್ದ ನಿರ್ಧಾರವನ್ನೇ ಈ ನಿಲುವೂ ಪ್ರತಿಬಿಂಬಿಸಿತು. 50 ನಿಮಿಷಗಳ ವಿಳಂಬದ ನಂತರ, ಪ್ರಶಸ್ತಿ ಪ್ರದಾನ ಸಮಾರಂಭವು ಹಠಾತ್ತನೆ ಮುಕ್ತಾಯಗೊಳ್ಳುವ ಮುನ್ನ ನಖ್ವಿ ಅವರು ಶ್ರೀಲಂಕಾ ತಂಡಕ್ಕೆ ರನ್ನರ್-ಅಪ್ ಪದಕಗಳನ್ನು ವಿತರಿಸಿದರು.

'ನಾವು ಟ್ರೋಫಿ ವಿಷಯದ ಬಗ್ಗೆ ಚರ್ಚಿಸಿ, ಅದನ್ನು ಅವರಿಂದ ಹಿಂಪಡೆಯದಿರಲು ನಿರ್ಧರಿಸಿದೆವು. ಅವರು ಇದಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ ಮತ್ತು ನಾವು ನಮ್ಮ ತಂಡಕ್ಕೆ ಈ ವಿಷಯವನ್ನು ತಿಳಿಸಿದೆವು. ಅವರು ತಮ್ಮ ಬಳಿ ಇದ್ದದ್ದನ್ನು ಹಸ್ತಾಂತರಿಸಿ ಅಲ್ಲಿಂದ ತೆರಳಿದರು. ಅಲ್ಲಿ ಯಾವುದೇ ಜಗಳ, ಹೊಡೆದಾಟ ಅಥವಾ ಸಂಘರ್ಷ ನಡೆಯಲಿಲ್ಲ; ದೇವಜಿತ್ ಸೈಕಿಯಾ ಜಿ ಹೇಳಿದ್ದು ಸತ್ಯ. ಪಂದ್ಯವೊಂದರ ವೇಳೆ ಎಲ್ಲರೂ ಒಂದೆಡೆ ಸೇರುತ್ತಾರೆ ಮತ್ತು ಪರಸ್ಪರ ಭೇಟಿಯಾಗುತ್ತಾರೆ. ಹಾಗಂದ ಮಾತ್ರಕ್ಕೆ ಅವರನ್ನು ಅತಿಯಾಗಿ ಟೀಕಿಸಬೇಕೆಂದೇನಿಲ್ಲ. ಪಂದ್ಯದ ಸಂದರ್ಭದಲ್ಲಿ ವಿವಿಧ ದೇಶಗಳ ಜನರು ಅಲ್ಲಿ ಒಟ್ಟಿಗೆ ಕುಳಿತುಕೊಳ್ಳುತ್ತಾರೆ ಮತ್ತು ಭೇಟಿಯಾಗುತ್ತಾರೆ' ಎಂದು ಶುಕ್ಲಾ ಸುದ್ದಿಗಾರರಿಗೆ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅತಿದೊಡ್ಡ ಲೋಕಾಯುಕ್ತ ದಾಳಿ: ಭೂ ದಾಖಲೆ ತಿದ್ದುಪಡಿಗೆ ಬರೋಬ್ಬರಿ 50 ಲಕ್ಷ ರೂ.ಲಂಚ; ಬಲೆಗೆ ಬಿದ್ದ ಧಾರವಾಡ ತಹಶೀಲ್ದಾರ್!

ಬದಲಾಗುತ್ತಿರುವ ಜಗತ್ತಿನ ನಡುವೆ ನಡೆದ ಬ್ರಿಕ್ಸ್ ಸಭೆಯಲ್ಲಿನ ಕಥೆ! (ಹಣಕ್ಲಾಸು)

ಅಮೆರಿಕಾ ಸುಂಕದ ಬೆದರಿಕೆಗೆ ಜಗ್ಗದ ಭಾರತ: 140 ಕೋಟಿ ಜನರ ಹಿತಾಸಕ್ತಿ ಮುಖ್ಯ, ಇಂಧನ ಭದ್ರತೆ ಕಾಪಾಡಲು ಅಗತ್ಯ ಕ್ರಮ ಎಂದ MEA

76ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿ: ರಾಜಕೀಯ ನಾಯಕರಿಂದ ಶುಭಾಶಯ, ‘ವಿಶ್ವದ ಅತ್ಯಂತ ಜನಪ್ರಿಯ ನಾಯಕ’ ಎಂದು ಬಣ್ಣನೆ..!

ಜಮ್ಮು-ಕಾಶ್ಮೀರದಲ್ಲಿ ಭರ್ಜರಿ ಕಾರ್ಯಾಚರಣೆ: ಇಬ್ಬರು ಉಗ್ರರ ಹೊಡೆದುರುಳಿಸಿದ ಭಾರತೀಯ ಸೇನಾಪಡೆ, ಮುಂದುವರೆದ ಕಾರ್ಯಾಚರಣೆ..!