ಸಚಿವ ಅಂಬರೀಷ್ 
ಜಿಲ್ಲಾ ಸುದ್ದಿ

ಅಂಬರೀಷ್ ಗಾಲ್ಫ್ ಆಟ!

ತಮ್ಮ ವರ್ತನೆ ಸಮರ್ಥಿಸಿಕೊಂಡು ನೀಡಿರುವ ಹೇಳಿಕೆ ಈಗ ಮತ್ತೊಂದು ವಿವಾದವನ್ನು ಸೃಷ್ಟಿಸಿದೆ...

ಬೆಳಗಾವಿ: ಸದನದಲ್ಲಿ ತಮ್ಮ ವಿಚಾರದ ಬಗ್ಗೆ ಗದ್ದಲವಾಗುತ್ತಿದ್ದರೂ ಸಚಿವ ಅಂಬರೀಷ್ ಮಾತ್ರ ಬೆಳಗಾವಿ ಹೊರವಲಯದಲ್ಲಿ ಗಾಲ್ಫ್ ಆಟದಲ್ಲಿ ತೊಡಗಿಸಿಕೊಂಡಿರುವುದು ಈಗ ಮತ್ತೊಂದು ವಿವಾದ ಸೃಷ್ಟಿಯಾಗಿದೆ.

ಇದು ಕಾಂಗ್ರೆಸ್‌ನಲ್ಲಿ ಮತ್ತೊಂದು ಸುತ್ತಿನ ಅಸಮಾಧಾನ ಸೃಷ್ಟಿಸಿದ್ದು, ಸಿಎಂ ಸಿದ್ದರಾಮಯ್ಯ ಅಂಬರೀಷ್ ವರ್ತನೆ ವಿರುದ್ಧ ಕೆಂಡಾಮಂಡಲಗೊಂಡಿದ್ದಾರೆ.

ಕಾಂಗ್ರೆಸ್‌ನ ಉನ್ನತ ಮೂಲಗಳ ಪ್ರಕಾರ ಕಲಾಪ ಆರಂಭವಾಗುತ್ತಿದ್ದಂತೆ ಪ್ರಭು ಚೌಹಾಣ್ ಮತ್ತು ಸಚಿವ ಅಂಬರೀಷ್ ಅವರು ಸದನದಲ್ಲಿ ಮೊಬೈಲ್ ವೀಕ್ಷಿಸಿದ ಪ್ರಸಂಗ ಉಭಯ ಸದನಗಳಲ್ಲಿ ಗದ್ದಲಕ್ಕೆ ಕಾರಣವಾಗಿತ್ತು. ಇಷ್ಟಾದರೂ ಸಚಿವ ಅಂಬರೀಷ್ ಮಾತ್ರ ಪತ್ತೆ ಇರಲಿಲ್ಲ. ಹೀಗಾಗಿ ಅವರ ಬಗ್ಗೆ ಮಾಹಿತಿ ಕಲೆ ಹಾಕಲು ಆರಂಭಿಸಿದಾಗ, ಅವರು ನಗರದಲ್ಲಿ ಇರುವ ಗಾಲ್ಫ್ ಕ್ಲಬ್‌ನಲ್ಲಿ ಆಡುತ್ತಿರುವ ವಿಚಾರ ತಿಳಿದು ಬಂತು.

ಅಲ್ಲಿಗೆ ಮಾಧ್ಯಮಗಳು ತೆರಳಲು ಸಿದ್ಧತೆ ನಡೆಸಿರುವ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ, ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆಗ ಎಚ್ಚೆತ್ತ ಅಂಬರೀಷ್ ಎದ್ದೆನೋ, ಬಿದ್ದೆನೋ ಎಂದು ವಿಧಾನ ಪರಿಷತ್ ಕಲಾಪಕ್ಕೆ ಹಾಜರಾದರು.

ಏನ್ ಈವಾಗ?: ಇಷ್ಟೆಲ್ಲದರ ಮಧ್ಯೆಯೂ ಸಚಿವ ಅಂಬರೀಷ್ ಅವರು ತಮ್ಮ ವರ್ತನೆ ಸಮರ್ಥಿಸಿಕೊಂಡು ನೀಡಿರುವ ಹೇಳಿಕೆ ಈಗ ಮತ್ತೊಂದು ವಿವಾದವನ್ನು ಸೃಷ್ಟಿಸಿದೆ. ತಾನೊಬ್ಬ ನಟ. ನನಗೆ ಹಲವಾರು ಜನರ ಜತೆ ಒಡನಾಟ ಇರುತ್ತದೆ. ಏನ್ ಈವಾಗ? ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ನಾನು ಕಿಸ್ ಕೊಡುವ ಭಾವಚಿತ್ರವನ್ನು ನೋಡಿಲ್ಲ. ಅಷ್ಟಕ್ಕೂ ನಾನು ಮಂತ್ರಿಯಾದ ಬಳಿಕ ಯಾರ ಜತೆಯೂ ಓಡಾಡಿಲ್ಲ. ನನಗೂ ಖಾಸಗಿ ಬದುಕಿದೆ. ಅದನ್ನು ಯಾರೂ ಪ್ರಶ್ನಿಸುವಂತಿಲ್ಲ. ಅಷ್ಟಕ್ಕೂ ನಾನು ಸದನದಲ್ಲಿ ಯಾವುದೇ ಆಕ್ಷೇಪಾರ್ಹ ಚಿತ್ರ ವೀಕ್ಷಿಸಿಲ್ಲ. ಎಸ್.ಎಸ್.ಮಲ್ಲಿಕಾರ್ಜುನ ಅವರಿಗೆ ಎಸ್‌ಎಂಎಸ್ ಸಂದೇಶ ಬಂತು. ಅದು ಓಪನ್ ಆಗದೇ ಇದ್ದುದರಿಂದ ನನ್ನ ಸಹಾಯ ಕೇಳಿದರು. ಅದಕ್ಕಿಂತ ಹೆಚ್ಚಿನದೇನೂ ನಡೆದಿಲ್ಲ ಎಂದು ಹೇಳಿದ್ದಾರೆ.

ಐ ವಿಲ್ ಪನಿಶ್ ಹಿಂ: ಆದರೆ, ಅಂಬರೀಷ್ ಅವರ ವರ್ತನೆ ಸಿಎಂ ಸಿದ್ದರಾಮಯ್ಯ ಅವರು ಗಂರ ಆಗುವುದಕ್ಕೆ ಕಾರಣವಾಗಿದೆ. ವಿಧಾನ ಪರಿಷತ್ ಕಲಾಪ ಸಂದರ್ಭದಲ್ಲಿ ತಮ್ಮ ಆಪ್ತರ ಜತೆ ಚರ್ಚೆ ನಡೆಸುವ ಸಂದರ್ಭದಲ್ಲಿ ಐ ವಿಲ್ ಪನಿಶ್ ಹಿಂ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಾತು ಜಗತ್ತಿಗೆ ಉತ್ತಮವಾಗದ ಹೊರತು ಅದು ಶಕ್ತಿಯಲ್ಲ; ಡಿಕೆಶಿ ಪೋಸ್ಟ್​​ಗೆ CM ಸಿದ್ದರಾಮಯ್ಯ ಕೌಂಟರ್

ಸಿದ್ದರಾಮಯ್ಯ ಹೈಕಮಾಂಡ್ ಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ: CM ಪುತ್ರ ಯತೀಂದ್ರ ಸ್ಫೋಟಕ ಹೇಳಿಕೆ; Video

Hong Kong ಅಗ್ನಿ ಪ್ರಮಾದ: 55 ಮಂದಿಯ ಜೀವ ತೆಗೆಯಿತಾ ಸಿಗರೇಟ್? ವೈರಲ್ ಆಗಿರುವ ವಿಡಿಯೋದಲ್ಲೇನಿದೆ? 3 ಬಂಧನ

ರಾಜ್ಯದ ಮಹಿಳಾ ಕ್ರೀಡಾಪಟುಗಳನ್ನು ಸನ್ಮಾನಿಸಿ, ತಲಾ 5 ಲಕ್ಷ ರೂ. ಬಹುಮಾನ ಘೋಷಿಸಿದ ಸಿಎಂ

LPG ಆಮದು: ಭಾರತ-ಅಮೆರಿಕ ಒಪ್ಪಂದ ತೈಲ ಸಂಸ್ಥೆಗಳಿಗೆ ದುಬಾರಿ; ಗ್ರಾಹಕರ ಮೇಲೆ ಪರಿಣಾಮ? ತಜ್ಞರು ಹೇಳಿದ್ದೇನು?

SCROLL FOR NEXT