ಕೂಡ್ಲಿಗಿಯಲ್ಲಿರುವ ಗೊಲ್ಲರಹಟ್ಟಿಯಲ್ಲಿ ಡಿವೈಎಸ್‌ಪಿ ಅನುಪಮಾ ಶೆಣೈರಿಂದ ಅರಿವು ಕಾರ್ಯಕ್ರಮ 
ಜಿಲ್ಲಾ ಸುದ್ದಿ

ಗೊಲ್ಲರ ಮೌಢ್ಯಕ್ಕೆ ಬ್ರೇಕ್ ಹಾಕಿದ ಖಾಕಿ

ಗೊಲ್ಲರಹಟ್ಟಿ ಮೌಢ್ಯ ತೊಡೆದು ಹಾಕಲು ಕೂಡ್ಲಿಗಿ ಡಿವೈಎಸ್‌ಪಿ ಅನುಪಮಾ ಶೆಣೈ ಸದ್ದಿಲ್ಲದೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ.

-ಭೀಮಣ್ಣ ಗಜಾಪುರ
ಕೂಡ್ಲಿಗಿ:
ರಾಜ್ಯದೆಲ್ಲೆಡೆ ಗೊಲ್ಲರಹಟ್ಟಿಗಳಲ್ಲಿರುವ ಮೌಢ್ಯ ತೊಡೆದು ಹಾಕಲು ಪ್ರಗತಿಪರರು ಪ್ರಯತ್ನ ನಡೆಸುತ್ತಿದ್ದರೆ, ಕೂಡ್ಲಿಗಿ ಡಿವೈಎಸ್‌ಪಿ ಅನುಪಮಾ ಶೆಣೈ ಸದ್ದಿಲ್ಲದೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ.

ಗೊಲ್ಲರಹಟ್ಟಿಗಳಲ್ಲಿ ರಾತ್ರಿ ವಾಸ್ತವ್ಯ ಮಾಡಿದ ಅನುಪಮಾ, ಕುಟುಂಬದ ಸದಸ್ಯೆಯಂತೆಯೇ ಬೆರೆದು, ಬಾಣಂತಿಯರು, ಋತುಮತಿಯಾದವರನ್ನು ಊರಿನಿಂದ ಹೊರಗಿಡುವುದು ತಪ್ಪು ಎಂದು ತಿಳುವಳಿಕೆ ಮೂಡಿಸಿದರು. ಮೌಢ್ಯ ತೊಲಗಿಸಲು ಪಣತೊಟ್ಟು ಪ್ರಯತ್ನಿಸಿದರು. ಕೂಡ್ಲಿಗಿ ತಾಲೂಕು ಗುಡೇಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕುದುರೆಡವು, ಸೂರವ್ವನಹಳ್ಳಿ, ರಾಮದುರ್ಗ, ಸಂಡೂರು ತಾಲ್ಲೂಕಿನ ವಡೇರಹಳ್ಳಿ, ಚೋರನೂರು ಸೇರಿದಂತೆ 6 ಗೊಲ್ಲರಹಟ್ಟಿಗಳಲ್ಲಿ ಡಿವೈಎಸ್‌ಪಿ ಅನುಪಮಾ ಶೆಣೈ, ಕೂಡ್ಲಿಗಿ ಸಿಪಿಐ ಜೆ ರಮೇಶ್, ಗುಡೇಕೋಟೆ ಪಿಎಸ್‌ಐ ನವೀನ್‌ಗೌಡ ಸಹಕಾರದಿಂದ ಆಂದೋಲನ ಆರಂಭಿಸಿದ್ದಾರೆ. ಹಟ್ಟಿಗಳಿಗೆ ತೆರಳಿ, ಅರಿವು ಮೂಡಿಸಿದ್ದಾರೆ.

ಡಿ. 1ರಿಂದ ಗೊಲ್ಲರಹಟ್ಟಿಗಳಲ್ಲಿ ಅವರು ಬಿಡಾರ ಹೂಡಿದ್ದಾರೆ. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಜನಪ್ರತಿನಿಧಿಗಳು, ಸಂಘ, ಸಂಸ್ಥೆಗಳ ಕಾರ್ಯಕರ್ತರು, ಆರೋಗ್ಯ ಇಲಾಖೆ ವೈದ್ಯರು, ಸಮಾಜ ಸೇವಕರ ಸಹಕಾರ ಪಡೆದು ಮೌಢ್ಯ ತೊಲಗಿಸುವ ಬಗ್ಗೆ ಯೋಜನೆ ಹಾಕಿಕೊಂಡಿದ್ದಾರೆ. ಈಗ 6 ಗೊಲ್ಲರಹಟ್ಟಿಗಳ ಗ್ರಾಮಸ್ಥರಿಗೆ ತಮ್ಮ ತಪ್ಪಿನ ಅರಿವಾಗುತ್ತಿದೆ.

ಮನೆಗೆ ವಾಪಸ್: ಗೊಲ್ಲರಹಟ್ಟಿಗಳಲ್ಲಿ ಆಂಗನವಾಡಿ ಕೇಂದ್ರಗಳಿಂದ ಬಾಣಂತಿಯರ, ಕಿಶೋರಿಯರ ಪಟ್ಟಿ ತರಿಸಿಕೊಂಡು ವಾರಗಟ್ಟಲೆ ಊರಹೊರಗಿರುವ ಮಹಿಳೆಯರನ್ನು ಮನೆಗೆ ಕಳುಹಿಸುವ ಅನುಪಮ ಕಾರ್ಯ ಮಾಡಿದ್ದಾರೆ. ಗೊಲ್ಲರಹಟ್ಟಿಗಳ ಮಹಿಳೆಯರೀಗ ನೆಮ್ಮದಿಯ ನಿಟ್ಟುಸಿರುವ ಬಿಡುತ್ತಿದ್ದಾರೆ. ಕೂಡ್ಲಿಗಿ ತಾಲೂರಿನಲ್ಲಿರುವ 30ಕ್ಕೂ ಹೆಚ್ಚು ಗೊಲ್ಲರಹಟ್ಟಿಗಳಿಗೂ ಭೇಟಿ ನೀಡಿ, ತಿಳಿ ಹೇಳಲು ಅನುಪಮಾ ಮುಂದಾಗಿದ್ದಾರೆ. ಮಂಗಳವಾರ ಕುದುರೆಡವು ಗೊಲ್ಲರಹಟ್ಟಿಯಲ್ಲಿ ಇಬ್ಬರು ಬಾಣಂತಿಯರು ವಡೇರಹಳ್ಳಿ ಗೊಲ್ಲರಹಟ್ಟಿಯಲ್ಲಿ ಒಬ್ಬಳನ್ನು ಮನೆಗೆ ಕರೆಸಿಕೊಳ್ಳುವಂತೆ ಜನರ ಮನವೊಲಿಸಿದರು. ಮನೆಗೆ ಬಂದ ಬಾಣಂತಿ, ಮಗುವನ್ನು ಮಹಿಳೆಯರು ಕಣ್ತುಂಬಿಕೊಂಡರು, ಗೊಡ್ಡು ಆಚರಣೆಗಳನ್ನು ಧಿಕ್ಕರಿಸುವ ಧೈರ್ಯ ಇಲ್ಲದ ಮಹಿಳೆಯರಿಗೆ ಮಹಿಳಾ ಪೊಲೀಸ್ ಅಧಿಕಾರಿ ಬೆನ್ನಿಗೆ ನಿಂತಿದ್ದರಿಂದ ಎಲ್ಲರೂ ಸಂತಸಪಟ್ಟರು.

ಐಜಿ, ಎಸ್ಪಿ ಪ್ರೇರಣೆ
ನಾನು ಕಲಬುರಗಿ ಪೊಲೀಸ್ ಇಲಾಖೆ ಸಭೆಗೆ ಹೋದಾಗ, ಐಜಿ ಸುರೇಶ್ ಮಹಮದ್ ಅವರು, ಮಾಧ್ಯಮಗಳಲ್ಲಿ ಗೊಲ್ಲರಹಟ್ಟಿಗಳ ಮೌಢ್ಯದ ಕುರಿತುಬಂದ ವರದಿ ಪ್ರಸ್ಥಾಪಿಸಿದರು. ನಿಮ್ಮ ಕೂಡ್ಲಿಗಿ ತಾಲ್ಲೂಕಿನಲ್ಲಿಯೂ ಅತಿ ಹೆಚ್ಚು ಗೊಲ್ಲರಹಟ್ಟಿಗಳಿವೆ. ಅಪರಾಧ ತಡೆ ಮಾಸಾಚರಣೆ ಸಪ್ತಾಹ ಅಂಗವಾಗಿ ನೀವೊಬ್ಬ ಮಹಿಳೆಯಾಗಿ ಏಕೆ ನೀವು ಗೊಲ್ಲರಹಟ್ಟಿ ಮಹಿಳೆಯರ ಮೌಢ್ಯ ಅಳಿಸಬಾರದು ಎಂದು ಕೇಳಿದರು. ಬಳ್ಳಾರಿ ಎಸ್ಪಿ ಚೇತನ್‌ಸಿಂಗ್ ರಾಥೋಡ್ ಕೂಡ ಮಾರ್ಗದರ್ಶನ ಮಾಡಿ ಸಹಕರಿಸಿದರು. ಕೂಡ್ಲಿಗಿ ಸಿಪಿಐ ರಮೇಶ್, ಗುಡೇ ಕೋಟೆ ಪಿಎಸ್‌ಐ ನವೀನ್ ಗೌಡ, ಜನರ ಸಹಕಾರ ಪಡೆದು ಗೊಲ್ಲರಹಟ್ಟಿಗಳಿಗೆ ತೆರಳಿ ಜನರನ್ನು ಮೌಢ್ಯದಿಂದ ಪಾರು ಮಾಡಲು ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತಿದ್ದೇನೆ.

-ಅನುಪಮಾ ಶೆಣೈ
ಕೂಡ್ಲಿಗಿ ಡಿವೈಎಸ್‌ಪಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT