ಹುನಗುಂದ: ತಾಲೂಕಿನ ಇಂದವಾರ ಬಳಿ ನಾರಾಯಣಪುರ ಜಲಾಶಯದ ಹಿನ್ನೀರಿನಲ್ಲಿ ಬುಧವಾರ ಮಧ್ಯಾಹ್ನ ತೆಪ್ಪ ಮುಳುಗಿ ಇಬ್ಬರು ಮಕ್ಕಳು ಸೇರಿ ಆರು ಮಂದಿ ಜಲಸಮಾಧಿಯಾಗಿದ್ದಾರೆ.
ಇಬ್ಬರು ಈಜಿ ದಡ ಸೇರಿದ್ದಾರೆ. ಕೌಜಗನೂರು ಗ್ರಾಮದ ಮಲ್ಲವ್ವ ಯಲ್ಲಪ್ಪ ಮಡಿವಾಳ (40), ಮಂಜವ್ವ ಭೀಮಪ್ಪ ಮಡಿವಾಳ (21) ಹುಲಿಗೆವ್ವ ಮಹಾಂತೇಶ ಮಡಿವಾಳರ (20), ಸಾವಿತ್ರಿ ಯಮನಪ್ಪ ಮಡಿವಾಳರ (6) ಸಚಿನ ಯಮನಪ್ಪ ಮಡಿವಾಳರ (4) ತೆಪ್ಪದ ನಾವಿಕ ಅಮರಮಾಡಗಿ ಗ್ರಾಮದ ಕರಿಯಪ್ಪ ಪರಸಪ್ಪ ಬಾರಕೇರ (42) ಮೃತರು. ರೇಣವ್ವ ಯಮನಪ್ಪ ಮಡಿವಾಳರ, ಮಹಾಂತೇಶ ಶಿವಸಂಗಪ್ಪ ಮಡಿವಾಳರ ಈಜಿ ದಡ ಸೇರಿದ್ದಾರೆ.
ರೇಣವ್ವಳ ಇಬ್ಬರು ಪುಟ್ಟ ಮಕ್ಕಳು, ಮಹಾಂತೇಶನ ಪತ್ನಿ ಮೃತಪಟ್ಟಿದ್ದಾರೆ. ಇವರೆಲ್ಲರೂ ಮದುವೆಗೆ ತೆರಳುತ್ತಿದ್ದರು.