ಜಿಲ್ಲಾ ಸುದ್ದಿ

ಹೈಟೆಕ್ ವೇಶ್ಯಾವಾಟಿಕೆ: ಮಲ್ಲೇಶ್ವರಂನ ರತನಂ ಲಾಡ್ಜ್ ಮೇಲೆ ದಾಳಿ

Lingaraj Badiger

ಬೆಂಗಳೂರು: ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಹೈಟೆಕ್ ವೇಶ್ಯಾವಾಟಿಕೆ ಜಾಲ ಪತ್ತೆಯಾಗಿದ್ದು, ಸೋಮವಾರ ಮಂತ್ರಿಮಾಲ್ ಬಳಿ ಇರುವ ರತನಂ ಲಾಡ್ಜ್ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು, ಓರ್ವನನ್ನು ಬಂಧಿಸಿ ಇಬ್ಬರು ಯುವತಿಯರನ್ನು ರಕ್ಷಿಸಿದ್ದಾರೆ.

ಮಲ್ಲೇಶ್ವರಂನ 6ನೇ ಅಡ್ಡರಸ್ತೆಯಲ್ಲಿರುವ ಪಿಜಿಯಲ್ಲಿದ್ದ ಯುವತಿಯರನ್ನು ದಂಧೆಗೆ ದೂಡಲಾಗುತ್ತಿತ್ತು. ಪ್ರಕರಣ ಸಂಬಂಧ ಆಟೋ ಚಾಲಕ, ಪಿಂಪ್ ಶ್ರೀನಿವಾಸ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆಟೋ ಚಾಲಕನ ಸಹಕಾರದೊಂದಿಗೆ ಇಂಟರ್‌ನೆಟ್ ಹಾಗೂ ವಾಟ್ಸಪ್ ಮೂಲಕ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಪಿಜಿಯ ಮ್ಯಾನೇಜರ್ ಶಿವು ಹಾಗೂ ರವಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

ಆರೋಪಿಗಳಾದ ಶಿವು ಮತ್ತು ರವಿ, ಆಟೋ ಚಾಲಕ ಶ್ರೀನಿವಾಸ್ ಸಹಕಾರ ಪಡೆದು ಪಿಜಿಯಲ್ಲಿ ವಾಸವಾಗಿದ್ದ ಮಹಿಳೆಯರನ್ನು ರತನಂ ಲಾಡ್ಜ್‌ಗೆ ಕಳುಹಿಸಿಕೊಡುತ್ತಿದ್ದರು. ಈ ಕುರಿತು ಮಾಹಿತಿ ಪಡೆದ ಪೊಲೀಸರು ಇಂದು ಬೆಳಗ್ಗೆ ರತನಂ ಲಾಡ್ಜ್ ಮೇಲೆ ದಾಳಿ ಮಾಡಿ ಇಬ್ಬರು ಯುವತಿಯರನ್ನು ರಕ್ಷಿಸಿದ್ದಾರೆ. ಅಲ್ಲದೆ ದಂಧೆಗೆ ಸಹಕರಿಸುತ್ತಿದ್ದ ಆಟೋ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

SCROLL FOR NEXT