ನಂದಿತಾ 
ಜಿಲ್ಲಾ ಸುದ್ದಿ

ನಂದಿತಾ ಸಾವು: ಮರ್ಯಾದಾ ಹತ್ಯೆಯೇ?

ತೀರ್ಥಹಳ್ಳಿಯಲ್ಲಿ ಶಾಂತಿ ಕಾಪಾಡುವ ಕಾರಣದಿಂದಲೇ ನಿಷೇಧಾಜ್ಞೆ ಮುಂದುವರಿಸಲಾಗಿದೆ...

ಶಿವಮೊಗ್ಗ: ವಾರಕ್ಕೂ ಹೆಚ್ಚು ಕಾಲ ಮಲೆನಾಡಿಗರ ನಿದ್ದೆಗೆಡಿಸಿದ್ದ ನಂದಿತಾ ಸಾವು ಪ್ರಕರಣ ಯಾರೂ ನಿರೀಕ್ಷಿಸಿರದ ತಿರುವಿನತ್ತ ಸಾಗುತ್ತಿದೆ. ಸಿಐಡಿ ತನಿಖೆಯ ಜಾಡು ಹೊಸ ಹೊಲವುಗಳನ್ನು ಹುಡುಕುತ್ತಿದೆ.

ಶೀಘ್ರವೇ ಆರೋಪ ಪಟ್ಟಿ ಸಲ್ಲಿಸಲು ಸಿದ್ದತೆ ನಡೆದಿದೆ ಎಂದು ಸಿಐಡಿ ಮೂಲಗಳು ತಿಳಿಸಿದ್ದು, ಪ್ರಮುಖವಾಗಿ ತೀರ್ಥಹಳ್ಳಿಯಲ್ಲಿ ಶಾಂತಿ ಕಾಪಾಡುವ ಕಾರಣದಿಂದಲೇ ನಿಷೇಧಾಜ್ಞೆ ಮುಂದುವರಿಸಲಾಗಿದೆ. ನಂದಿತಾ ಅಪಹರಣ ನಡೆದಿತ್ತು. ಎಂಬುದೇ ಕಟ್ಟಕತೆ ಎಂಬುದನ್ನು  ತೀರ್ಥಹಳ್ಳಿಯ ಪ್ರಮುಖ ಸ್ಥಳಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ರೆಕಾರ್ಡಿಂಗ್ ಮೂಲಕ ಗೊತ್ತಾಗುತ್ತಿದೆ. ಅಪಹರಣವೇ ನಡೆದಿಲ್ಲವೆಂದ ಮೇಲೆ ಅತ್ಯಾಚಾರ ಹೇಗೆ ನಡೆದೀತು ಎಂಬುದರತ್ತ ತನಿಖೆಯ ಜಾಡು ಸಾಗಿದಾಗ ಹಲವು ಸತ್ಯಗಳು ಹೊರ ಬಂದಿವೆ.

ಬೆಳಗ್ಗೆ ಗುಡ್ಡದಿಂದ ಬಂದು ದಿನಗಳೇ ಕಳೆದ ನಂತರ ವಿಷ ದೇಹದ ಮೇಲೆ ಹೇಗೆ ಪರಿಣಾಮ ಬೀರಿತು ಎಂಬುದರ ಬಗ್ಗೆ ಸಿಐಡಿ ಪೊಲೀಸರು ತನಿಖೆಯ ಬೆನ್ನತ್ತಿದ್ದಾರೆ. ಆ.29 ರಂದು ಶಾಲೆಗೆ ಹೊರಟ ಬಾಲಕಿ ನಂದಿತಾಳನ್ನು ಮೂವರು ಅಪಹರಿಸಿಕೊಂಡು ಅತ್ಯಾಚಾರ ಯತ್ನ ನಡೆಸಿದ್ದಾರೆ. ನಂತರ ಆಕೆಯನ್ನು ನೀರಿನಲ್ಲಿ ವಿಷ ಬೆರಸಿ ಗುಡ್ಡದ ಮೇಲೆ ಬಿಟ್ಟು ಪರಾರಿಯಾಗಿದ್ದಾರೆ ಎಂದು ನಂದಿತಾಳ ತಂದೆ ಟಿ.ಜಿ.ಕೃಷ್ಣ ಅ.31ರ ರಾತ್ರಿ ತೀರ್ಥಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು.

ನಂದಿತಾಗೆ ಒಂದು ವರ್ಷದಿಂದ ಸೋಹನ್ ಎನ್ನುವ ಯುವಕನೊಂದಿಗೆ ಸ್ನೇಹ ಬೆಳೆಸಿದ್ದಳು. ಆತನ ಜತೆ ಸ್ನೇಹ ಹೊಂದಿರುವ ಬಗ್ಗೆ ನಂದಿತಾಗೆ ತಂದೆ ಎಚ್ಚರಿಕೆ ಹಾಕಿದ್ದಾರೆ. ತಂದೆಯ ನಿಬಂಧದ ಬಳಿಕವೂ ಅ.29 ರಂದು, ಸೋಹನ್ ಜತೆ ಮಾತನಾಡಲು ಆನಂದಗಿರಿ ಬೆಟ್ಟಕ್ಕೆ ತೆರಳಿದ್ದಾಳೆ. ಆ ವೇಳೆ ಯಾರೋ ಅಪರಿಚಿತರು ಬರುವುದನ್ನು ಕಂಡ ನಂದಿತಾ ಸೋಹನ್ನನ್ನು ಸ್ಥಳದಿಂದ ಕಳುಹಿಸಿದ್ದಾಳೆ. ನಂತರ ಗುಡ್ಡದ ಬಳಿ ಪರಿಚಯಸ್ಥರಾದ ಕಮಲಮ್ಮ ಅವರನ್ನು ಕೂಗಿ ಕರೆದಿದ್ದಾಳೆ. ಕಮಲಮ್ಮನ ಮಗನ ಸಹಕಾರದಿಂದ ನಂದಿತಾಳನ್ನು ಅಪ್ಪನನ ಜತೆ ಮನೆ ತಲುಪಿದ್ದಾಳೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ತಂದೆಯ ಬೈಗುಳದಿಮಂದ ಆಕೆ ವಿಷ ಸೇವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇದೀಗ ಪೊಲೀಸರು ಪ್ರಕರಣವನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

ಸಾವಿಗೂ ಮುನ್ನಾ ಬರೆದಿರುವ ಆತ್ಮಹತ್ಯೆ ಪತ್ರದಲ್ಲಿರುವುದು ನಂದಿತಾ ಕೈ ಬರಹ ಎನ್ನುವುದನ್ನು ವಿಧಿ-ವಿಜ್ಞಾನ ಪ್ರಯೋಗಾಲಯವೂ ದೃಢಪಡಿಸಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ 'ನಾನು ನನ್ನ ಜೀವ ಕಳೆದುಕೊಳ್ಳಲು ನಿರ್ಧರಿಸಿದ್ದೇನೆ' ಎಂದು ಗೆಳೆಯ ಸೋಹನ್ಗೆ ಎಸ್ಎಂಎಸ್ ಸಂದೇಶ ಕಳುಹಿಸಿದ್ದಾಳೆ ಎನ್ನಲಾಗಿದೆ.

ನಂದಿತಾಳ ಕನ್ಯತ್ವಕ್ಕೆ ಯಾವುದೇ ಧಕ್ಕೆಯಾಗಿಲ್ಲ ಎಂದು ಮಣಿಪಾಲದ ವೈದ್ಯರು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ದೃಡಪಡಿಸಿದ್ದು, ನಂದಿತಾ ಪ್ರಕರಣ ಆತ್ಮಹತ್ಯೆ ಎಂದು ಸಾಬೀತಾಗಿದೆ. ಇದೀಗ ಸಿಐಡಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಸ್ಸಾಂ: ಸೈರಾಂಗ್‌-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ; ಸ್ಥಳದಲ್ಲೇ 7 ಆನೆಗಳ ದಾರುಣ ಸಾವು

ಉ.ಕ. ನಿರ್ಲಕ್ಷ್ಯ ಮಾಡಿದ್ದೇವೆ ಎಂದು ಹೇಳುವ ನೈತಿಕ ಹಕ್ಕು ಬಿಜೆಪಿಯವರಿಗೆ ಇಲ್ಲ, 'ಗ್ಯಾರಂಟಿ ನಿಧಿ'ಯ ಶೇ. 43.63 ಭಾಗ ನೀಡಿದ್ದೇವೆ: ಸಿದ್ದರಾಮಯ್ಯ

Epstein Files ಬಿಡುಗಡೆ: ಟ್ರಂಪ್ ಬಗ್ಗೆ ಹೆಚ್ಚಿನದ್ದಿಲ್ಲ; ಕ್ಲಿಂಟನ್ ಫೋಟೋಗಳು ಬಹಿರಂಗ!

ಬಿಕ್ಲು ಶಿವ ಕೊಲೆ ಕೇಸ್ ನಲ್ಲಿ ಸಿಗದ ನಿರೀಕ್ಷಣಾ ಜಾಮೀನು: ಅಜ್ಞಾತ ಸ್ಥಳಕ್ಕೆ ತೆರಳಿದ ಬಿಜೆಪಿ ಶಾಸಕ ಭೈರತಿ ಬಸವರಾಜು?

ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾತ್ರೋರಾತ್ರಿ ಶೋಧ; ಇತಿಹಾಸದಲ್ಲಿಯೇ ಮೊದಲ ಬಾರಿಗೆ 30 ಮೊಬೈಲ್ ಫೋನ್‌ಗಳು ವಶ!

SCROLL FOR NEXT