ಎಚ್‌ಡಿಎಫ್‌ಸಿ ಬ್ಯಾಂಕ್ ಎಟಿಎಂ (ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ

ಕಮ್ಮಗೊಂಡನಹಳ್ಳಿ ಮುಖ್ಯರಸ್ತೆಯಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಎಟಿಎಂನ ಸೆಕ್ಯೂರಿಟಿ ಗಾರ್ಡ್ ಆಯ್ಯಣ್ಣ ಎಂಬಾತನ ಮೇಲೆ..

ಬೆಂಗಳೂರು: ಕಮ್ಮಗೊಂಡನಹಳ್ಳಿ ಮುಖ್ಯರಸ್ತೆಯಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಎಟಿಎಂನ ಸೆಕ್ಯೂರಿಟಿ ಗಾರ್ಡ್ ಆಯ್ಯಣ್ಣ ಎಂಬಾತನ ಮೇಲೆ ದುಷ್ಕರ್ಮಿಗಳು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ್ದಾರೆ.

ಸೋಮವಾರ ರಾತ್ರಿ 11.30ರ ಸುಮಾರಿಗೆ ಅಯ್ಯಣ್ಣ ಎಟಿಎಂ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಮದ್ಯದ ನಶೆಯಲ್ಲಿದ್ದ ಇಬ್ಬರು ಎಟಿಎಂ ಕೇಂದ್ರದ ಮುಂದೆ ಜಗಳ ಮಾಡುತ್ತಿದ್ದರು. ಸ್ಥಳಕ್ಕೆ ಬಂದ ಅಯ್ಯಣ್ಣ ಎಟಿಎಂ ಕೇಂದ್ರದ ಮುಂದೆ ಜಗಳ ಮಾಡಬೇಡಿ ನಡೀರಿ ಎಂದು ಹೇಳಿದ್ದಾನೆ. ಇದರಿಂದ ಕುಪಿತಗೊಂಡ ಆರೋಪಿಗಳು ಅಯ್ಯಣ್ಣನ ಕೈಯಲ್ಲಿದ್ದ ಲಾಠಿಯನ್ನು ಕಿತ್ತುಗೊಂಡು ಹಲ್ಲೆ ನಡೆಸಿದ್ದಾರೆ. ಕಿರುಚಾಟ ಕೇಳಿದ ಪಕ್ಕದ ಎಟಿಎಂನ ಸೆಕ್ಯೂರಿಟಿ ಗಾರ್ಡ್ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಂಗಮ್ಮನ ಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

NEET paper leak: ಯುವಕರ ಭವಿಷ್ಯದ ಜೊತೆ ಆಟ, ತಕ್ಷಣ ಧರ್ಮೇಂದ್ರ ಪ್ರಧಾನ್ ವಜಾಗೊಳಿಸಿ: ರಾಹುಲ್ ಗಾಂಧಿ ಆಗ್ರಹ

ನಟ Jayam Ravi ವಿಚ್ಛೇದನ: ನಿರಾಕರಿಸಿದ್ದು ಯಾರು?, ಮದುವೆಯಾಗಿದ್ದು ಯಾರು? ಎಂಬುದನ್ನು ಸಾಬೀತು ಪಡಿಸುತ್ತೇನೆ: ಆರ್ತಿ ತಾಯಿ ಸುಜಾತ

'ಪ್ಲೀಸ್ ನಾಳೆ ಒಂದಿನ ಗೆಲ್ರಪ್ಪಾ': ಎದುರಾಳಿ RCB ಬೆನ್ನು ಬಿದ್ದ CSK ಫ್ಯಾನ್ಸ್! ಬೆಂಗಳೂರು ಗೆಲುವು ಚೆನ್ನೈಗೇಕೆ ಮುಖ್ಯ?

POCSO case: ಲುಕ್ ಔಟ್ ನೋಟಿಸ್ ಬೆನ್ನಲ್ಲೇ ಪೊಲೀಸರ ಮುಂದೆ ಶರಣಾದ ಕೇಂದ್ರ ಸಚಿವ ಬಂಡಿ ಸಂಜಯ್ ಪುತ್ರ!

ಮುಷ್ಕರಕ್ಕೂ ಮುನ್ನವೇ BMTC ನೌಕರರಿಗೆ ಸಿಹಿಸುದ್ದಿ: 11 ತಿಂಗಳ ಬಾಕಿ ವೇತನ ಬಿಡುಗಡೆ

SCROLL FOR NEXT