ಯು ಆರ್ ಅನಂತಮೂರ್ತಿ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ನಾಳೆ ಯು ಆರ್ ಎ - 'ಹಿಂದುತ್ವ ಮತ್ತು ಹಿಂದ್ ಸ್ವರಾಜ್' ಸಂವಾದ ಗೋಷ್ಠಿ

ಇತ್ತೆಚೆಗಷ್ಟೇ ಅಗಲಿದ ಕರ್ನಾಟಕದ ಖ್ಯಾತ

ಬೆಂಗಳೂರು: ಇತ್ತೆಚೆಗಷ್ಟೇ ಅಗಲಿದ ಕರ್ನಾಟಕದ ಖ್ಯಾತ ವಿಶ್ವ ಸಾಹಿತಿ ಯು ಆರ್ ಅನಂತಮೂರ್ತಿ ಅವರ ಕೊನೆಯ ಪುಸ್ತಕ 'ಹಿಂದುತ್ವ ಅಥವಾ ಹಿಂದ್ ಸ್ವರಾಜ್' ಕೃತಿಯ ಎರಡನೆ ಆವೃತ್ತಿ ಬಿಡುಗಡೆ ನೆನಪಿನಲ್ಲಿ ಸಂವಾದ ಗೋಷ್ಠಿ ನಾಳೆ ಶುಕ್ರವಾರ(೨೮.೧೧.೨೦೧೪) ನಗರದಲ್ಲಿ ಸಂಜೆ ೬ ಘಂಟೆಗೆ ನಡೆಯಲಿದೆ.

ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯಲಿರುವ ಈ ಸಂವಾದವನ್ನು ಪುಸ್ತಕ ಪ್ರಕಾಶಕರಾದ ಅಭಿನವ ಸಂಸ್ಥೆ ಏರ್ಪಡಿಸಿದೆ.

ಖ್ಯಾತ ಇತಿಹಾಸಕಾರ ಷ ಶೆಟ್ಟರ್  ಈ ಸಂವಾದದ ಅಧ್ಯಕ್ಷತೆ ವಹಿಸಿದ್ದು, ಪತ್ರಕರ್ತ ಸೂರ್ಯಪ್ರಕಾಶ ಪಂಡಿತ್, ಉಪನ್ಯಾಸಕಿ-ಅಂಕಣಕಾರ್ತಿ ವಸು ಎಂ ವಿ ಮತ್ತು ಚಿಂತಕ ಪ್ರೊ. ಚಂದನ ಗೌಡ ಭಾಗವಹಿಸಲಿದ್ದಾರೆ.

ಅನಂತಮೂರ್ತಿ ಅವರು ಮೃತ ಪಟ್ಟ ಮೇಲೆ ಪ್ರಕಟವಾದ ಹಿಂದುತ್ವ ಮತ್ತು ಹಿಂದ್ ಸ್ವರಾಜ್ ಪುಸ್ತಕ, ಗಾಂಧಿ ಅವರ ಹಿಂದ್ ಸ್ವರಾಜ್, ಗೋಡ್ಸೆ ಪ್ರತಿಪಾದಿಸಿದ ಹಿಂದುತ್ವ, ಆರ್ ಎಸ್ ಎಸ್, ನರೇಂದ್ರ ಮೋದಿ ಅವರ ರಾಜಕೀಯ ಬೆಳವಣಿಗೆ ಮುಂತಾದ ವಿಷಯಗಳನ್ನು ಚರ್ಚೆ ಮಾಡಿದೆ. ಸಂವಾದ ಸಾರ್ವಜನಿಕರಿಗೆ ಮುಕ್ತವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಏನೇ ಆದ್ರೂ, ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

SCROLL FOR NEXT