ಬೆಂಗಳೂರು: ಅಶೋಕ ನಗರದ ಮದರ್ ಥೆರೆಸಾ ರಸ್ತೆಯಲ್ಲಿ ವಾಟರ್ ಟ್ಯಾಂಕರ್, ಬೈಕ್ ಗೆ ಡಿಕ್ಕಿ ಹೊಡೆದು ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಉತ್ತರಾಖಂಡ ಮೂಲದ ಸೋನಮ್ (28) ಮೃತ ವಿದ್ಯಾರ್ಥಿ.
ಸೋನಮ್ ತರಬೇತಿ ಕಾರ್ಯಕ್ರಮವೊಂದರ ಮೇಲೆ ಕೆಲ ದಿನಗಳ ಹಿಂದೆ ನಗರಕ್ಕೆ ಬಂದು ಕೋರ ಮಂಗಲದಲ್ಲಿನ ಸ್ನೇಹಿತನ ಮನೆಯಲ್ಲಿದ್ದ. ಬ್ರಿಗೇಡ್ ರಸ್ತೆಯಲ್ಲಿ ಊಟ ಗುರುವಾರ ರಾತ್ರಿ ಊಟ ಮಾಡಿ 11.45ಕ್ಕೆ ಥೆರೆಸಾ ರಸ್ತೆಯಲ್ಲಿ ಬೈಕ್‍ನಲ್ಲಿ ತೆರಳುತ್ತಿದ್ದ. ಈ ವೇಳೆ ವಿರುದ್ಧ ದಿಕ್ಕಿನಲ್ಲಿ ಬೈಕ್ ಗಳು ಬಂದಿದ್ದವು. ಅವುಗಳಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಯತ್ನಿಸಿದಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಹಿಂಬದಿ ಯಿಂದ ವೇಗವಾಗಿ ಬರುತ್ತಿದ್ದ ವಾಟರ್ ಟ್ಯಾಂಕ್ ಮೈ ಮೇಲೆ ಹರಿದಿದೆ. ಟ್ಯಾಂಕರ್ ನಿಲ್ಲಿಸದೆ ಚಾಲಕ ಪರಾರಿಯಾಗಿದ್ದಾನೆ. ತೀವ್ರ ಗಾಯಗೊಂಡ ಸೋನಮ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.