ಪ್ರಧಾನಮಂತ್ರಿ ನರೇಂದ್ರ ಮೋದಿ 
ಜಿಲ್ಲಾ ಸುದ್ದಿ

ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಆಡಳಿತವೇ ನಮ್ಮ ಗುರಿ: ಮೋದಿ

ಭ್ರಷ್ಟಚಾರ ಮುಕ್ತ, ಪಾರದರ್ಶಕ ಆಡಳಿತವೇ ಗುರಿ ಎಂದು ಇಡೀ ಕಾರ್ಯಕಾರಣಿಯನ್ನು ಎರಡೇ ಮಾತುಗಳಲ್ಲಿ ಹಿಡಿದಿಟ್ಟಿದ್ದಾರೆ ಪ್ರಧಾನಿ ನರೇಂದ್ರ ಮೋದಿ...

ಬೆಂಗಳೂರು: ಭ್ರಷ್ಟಚಾರ ಮುಕ್ತ, ಪಾರದರ್ಶಕ ಆಡಳಿತವೇ ಗುರಿ ಎಂದು ಇಡೀ ಕಾರ್ಯಕಾರಣಿಯನ್ನು ಎರಡೇ ಮಾತುಗಳಲ್ಲಿ ಹಿಡಿದಿಟ್ಟಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಯುಪಿಎ ಸರ್ಕಾರಕ್ಕೆ ತಿರುಗೇಟು ನೀಡಿ ಕಾಂಗ್ರೆಸ್ ಮುಕ್ತ ಮನಸ್ಥಿತಿ ಹೇಗೆ ಎಂದು ಬಿಜೆಪಿ ಕಾರ್ಯಕಾರಿಣಿಯಲ್ಲಿ ಸಮಾರೋಪ ಭಾಷಣದಲ್ಲಿ ಸ್ಪಷ್ಟಪಡಿಸಿದ್ದಾರೆ.

ಬಡವರಿಗಾಗಿ ಜೀವಿಸುತ್ತೇವೆ, ಬಡವರಿಗಾಗಿ ದುಡಿಯುತ್ತೇವೆ. ಸಮಗ್ರ ಭಾರತದ ಅಬಿsವೃದಿಟಛಿಯನ್ನು ಹೊರತುಪಡಿಸಿದರೆ ಬೇರೆ ಚಿಂತನೆಯೇ ಇಲ್ಲ. ಭ್ರಷ್ಟಾಚಾರ ಇರಬಾರದು ಅನ್ನುವುದೇ ನಮ್ಮ ಗುರಿ. ಭ್ರಷ್ಟಾಚಾರ ಮಾಡಿದ ಮೇಲೆ ಏನು ಮಾಡಬೇಕು ಎಂಬುದಕ್ಕೆ ಕಾನೂನುಗಳಿವೆ. ಭ್ರಷ್ಟಾಚಾರರಹಿತ ಆಡಳಿತ ಕೊಡುವ ಆಲೋಚನೆಯನ್ನು ನಾವು ಮಾಡಿದ್ದೇವೆ. ಅದು ಪಾರದರ್ಶಕತೆಯಲ್ಲಿದೆ. ಕಲ್ಲಿದ್ದಲು ಹರಾಜು ಒಂದು ಉದಾಹರಣೆ ಅಷ್ಟೇ ಎಂದು ವಿವರಿಸಿದರು.

ಯಾರು ಶ್ರೀಮಂತರ ಪರ?

ನಮ್ಮನ್ನು ಶ್ರೀಮಂತ ಪರ ಎಂದು ಆರೋಪ ಮಾಡುತ್ತಾರೆ. ಒಂದು ಕೋಟಿ ಅನುಕೂಲಸ್ಥರ ಗ್ಯಾಸ್ ಸಬ್ಸಿಡಿಯನ್ನು ತೆಗೆಸಿ ಬಡವರಿಗೆ ನೀಡುತ್ತೇವೆ. ಕಟ್ಟಿಗೆಯಲ್ಲಿ ಅಡುಗೆ ಮಾಡಿ ಬಳಲುವ ಜನರಿಗೆ ಗ್ಯಾಸ್ ನೀಡಿದರೆ ಅದು ಶ್ರೀಮಂತರ ಪರವಾಗುತ್ತದೆಯೇ? `ಸಂಪತ್ತು ತೆರಿಗೆ'ಯಿಂದ ಕೇವಲ ರು.900 ಕೋಟಿ ತೆರಿಗೆ ಬರುತ್ತಿತ್ತು. ಕೇವಲ ರು.900 ಕೋಟಿ.
`ವೆಲ್ತ್ ಟ್ಯಾಕ್ಸ್' ಸಂಗ್ರಹ ಮಾಡುವವರು ಅದಕ್ಕಿಂತ `ವೆಲ್ತ್' ಆಗಿ ಇರೋರು. ನಾವು ಒಂದು ಸಣ್ಣ ಬದಲಾವಣೆ ಮಾಡಿದೆವು. ಹೊಸ ಕಾನೂನು ತಂದೆವು. ಅದರ ಪರಿಣಾಮ ಒಂದು ವರ್ಷದಲ್ಲಿ ರು.9500 ಕೋಟಿ ಹರಿದುಬಂದಿತು. ಹೀಗೆ ಸಣ್ಣ ಪುಟ್ಟ ಬದಲಾವಣೆ ಮೂಲಕವೇ ದೇಶದ ಸ್ಥಿತಿ ಬದಲಾವಣೆ ಆಗುತ್ತಿದೆ ಎಂದು ಸರ್ಕಾರದ ನೀತಿಗಳನ್ನೂ ಉಲ್ಲೇಖಿಸಿದ್ದಾರೆ.

ವ್ಯಕ್ತಿ ಎಷ್ಟೇ ದೊಡ್ಡವನಾಗಿದ್ದರೂ ವಿಚಾರಧಾರೆ ಉಳ್ಳವನಾಗಿರಬೇಕು. ಆ ವಿಚಾರಧಾರೆಯನ್ನು ತಿಳಿಸುವ ಕೆಲಸ ಆಗಬೇಕು. ಸಂಘಟನೆಯ ಕಾರ್ಯವಷ್ಟೇ ಅಲ್ಲ, ಸಂಘಟಕರ ಕಾರ್ಯವಿಸ್ತಾರವನ್ನೂ ಗಮನದಲ್ಲಿಟ್ಟುಕೊಳ್ಳಬೇಕು. ಕೇವಲ ರಾಜಕೀಯ ನೇತೃತ್ವಕ್ಕಾಗಿ ತಯಾರಿ ನಡೆಸದೆ, ಸಾಮಾಜಿಕ ಸಮಸ್ಯೆಗಳನ್ನು ಅಧ್ಯಯನ ಮಾಡಿ ಅವುಗಳ ಪರಿಹಾರಕ್ಕೆ ಆಂದೋಲನ ನಡೆಸಬೇಕು. ತಂತ್ರಜ್ಞಾನದ ಆಧುನಿಕತೆ ಎನ್ನುವುದು ವೈಭವ ಅಲ್ಲ. ಅದು ಅವಶ್ಯಕತೆ ಎಂದರು.

ಬಡವರಿಗೆ ಆರೋಗ್ಯ
ದೀನ್‍ದಯಾಳ್ ಶರ್ಮಾ ಅವರ ಶತಮಾನೋತ್ಸವದ ಸಂದರ್ಭದಲ್ಲಿ ನಾವು ಬಡವರ ಉನ್ನತೀಕರಣಕ್ಕೆ ಯೋಜನೆಗಳನ್ನು ರೂಪಿಸಬೇಕಿದೆ. ಸರ್ಕಾರ ಹಾಗೂ ಪಕ್ಷದ ಕಾರ್ಯಕ್ರಮಗಳು ಸಮಾಜದ ಅಶಕ್ತ ವರ್ಗಕ್ಕಾಗಿ ರೂಪುಗೊಳ್ಳಲಿವೆ. ಸ್ವಚ್ಛ ಭಾರತ ಅಭಿಯಾನ ಕೂಡ ಅದೇ ನಿಟ್ಟಿನಲ್ಲೇ ಇದೆ.

ಬಡವರ ಆರೋಗ್ಯ ವೆಚ್ಚ ಕಡಿಮೆ ಆಗಬೇಕೆಂಬುದೇ ಉದ್ದೇಶ. ಉದಾಹರಣೆಗೆ ಆಟೋ ಚಾಲಕ ನಾಲ್ಕು ದಿನ ಅನಾರೋಗ್ಯದಿಂದ ಮನೆಯಲ್ಲಿ ಉಳಿದುಕೊಂಡರೆ ಅತ್ತ ಅವನ ದುಡಿಮೆಗೂ ಕೊರತೆ ಹಾಗೂ ಇತ್ತ ಆರೋಗ್ಯವೂ ಇಲ್ಲ. ಪ್ರತಿ ವರ್ಷ ಸರಿಸುಮಾರು ರು.16 ಸಾವಿರ ಆರೋಗ್ಯಕ್ಕಾಗಿ ಈ ವರ್ಗ ವ್ಯಯ ಮಾಡಬೇಕಾಗಿದೆ. ಅದು ಅವನಿಗೆ ನಷ್ಟ ಆಗುತ್ತಿದೆ. ಈ ಬಗ್ಗೆ ಅವನಿಗೆ ಆರೋಗ್ಯ ನೀಡುವ ದೃಷ್ಟಿಯಲ್ಲಿ ಸ್ವಚ್ಛ ಭಾರತ ಅಭಿಯಾನ ಪೂರಕ. ಸ್ವಚ್ಛತೆ ಇದ್ದರೆ ಅನಾರೋಗ್ಯದ ಪ್ರಮಾಣ ಕಡಿಮೆಯಾಗುತ್ತದೆ.

ಬಡವರಿಗೆ ಹಣ

ಇನ್ನು ನಮ್ಮ ಸರ್ಕಾರದ ಬಗ್ಗೆ ಸಾಕಷ್ಟು ತಪ್ಪು ಮಾಹಿತಿಗಳನ್ನು ನೀಡಲಾಗುತ್ತಿದೆ. ನಮ್ಮ ಎನ್‍ಡಿಎ ಸರ್ಕಾರ ಬಂದಮೇಲೆ ಗ್ಯಾಸ್ ದರವನ್ನು ಹೆಚ್ಚಿಸಲಾಗಿದೆ ಎಂದು ಹೇಳಲಾಗುತ್ತಿದೆ. 8.4 ಡಾಲರ್ ನಿಂದ 5 ಡಾಲರ್‍ಗೂ ಕಡಿಮೆಗೆ ಇದು ಬಂದಿದೆ. ಇದರ ಪ್ರಯೋಜನ ಬಡವರಿಗೆ ಆಗಿಲ್ಲ ಎನ್ನಲಾಗಿದೆ. ಆದರೆ, ಕಾಂಗ್ರೆಸ್ಸೇ ಈ ಪ್ರಯೋಜನ ಬಡವರಿಗೆ ತಲುಪದೆ ಶ್ರೀಮಂತರಿಗೇ ತಲುಪುವಂತೆ ಮಾಡಿತ್ತು.

ಒಂದು ಕೋಟಿ ಶ್ರೀಮಂತರು ಸಬ್ಸಿಡಿ ಬೇಡ ಎಂದು ಹೇಳಿದ್ದು, ಅವರ ಸಬ್ಸಿಡಿಯನ್ನು ಬಡವರಿಗೆ ತಲುಪಿಸುವಂತೆ ನಾವು ಮಾಡಿದ್ದೇವೆ. ಒಂದು ಎಲ್‍ಇಡಿ ಲೈಟ್ ಅನ್ನು ರು.310ಕ್ಕೆ ಕಾಂಗ್ರೆಸ್ ಸರ್ಕಾರ ಖರೀದಿಸುತ್ತಿತ್ತು. ನಾವು ಈಗ ರು.80ಗೆ ಖರೀದಿಸುತ್ತಿದ್ದೇವೆ. ಪ್ರತಿ ಚೀಲದ ಸಿಮೆಂಟ್‍ಗೆ  ರು.350 ವೆಚ್ಚ ಮಾಡಲಾಗುತ್ತಿತ್ತು. ಕಂಪನಿಗಳೊಂದಿಗೆ ಮಾತನಾಡಿ, ಅದನ್ನು ರು.150ಕ್ಕೆ ಖರೀದಿಸುತ್ತಿದ್ದೇವೆ. ವರ್ಷಕ್ಕೆ ಸುಮಾರು 100 ಲಕ್ಷ ಟನ್ ಸಿಮೆಂಟ್ ಖರೀದಿಯಾಗುತ್ತದೆ. ಇಷ್ಟು ಹಣ ಉಳಿದಿದ್ದು ಯಾರಿಗೆ?

ಆರ್ಥಿಕ ಪ್ರಗತಿ

ನಮ್ಮದು ಪ್ರಗತಿಯ ಮಾದರಿ. ಆರ್ಥಿಕತೆ ಬೆಳೆಯಬೇಕು. ಉದ್ಯೋಗಾವಕಾಶದ ಮೂಲಕ ಇದರ ಸೌಲಭ್ಯ ಬಡವರಿಗೆ ವಿತರಣೆಯಾಗಬೇಕು. ಬಡತನ ನಿರ್ಮೂಲನೆ ಕಾರ್ಯಕ್ರಮಗಳೂ ಈ ಮೂಲಕ ಆಗಬೇಕು. ಕೈಗಾರಿಕೆಗಳ ಕಾರಿಡಾರ್ ಹಾಗೂ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಬಡವರಿಗೆ ಉದ್ಯೋಗ, ಭೂಮಿ ಇಲ್ಲದ ದಲಿತರಿಗೆ ಉದ್ಯೋಗ ಕಲ್ಪಿಸುವ ಜತೆಗೆ ಬಡತನ ನಿರ್ಮೂಲನೆಗೂ ಅವಕಾಶ ಸಿಕ್ಕಂತಾಗುತ್ತದೆ. ಹೀಗಾಗಿ, ಕೈಗಾರಿಕೆಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಭೂಸ್ವಾಧೀನ ಕಾಯಿದೆ-2013 ರೈತ ವಿರೋಧಿ, ಗ್ರಾಮೀಣ ಅಭಿವೃದ್ಧಿಗೆ ತಡೆ, ಗ್ರಾಮಗಳಿಗೆ ವಿದ್ಯುತ್, ನೀರಾವರಿಗೆ ಅವಕಾಶ ಕಲ್ಪಿಸುತ್ತಿರಲಿಲ್ಲ. ಇದನ್ನೆಲ್ಲ 2015ರ ಕಾಯಿದೆಯಲ್ಲಿ ಅಳವಡಿಸಿಕೊಂಡು ಜಾರಿಗೆ ತರಲಾಗಿದೆ. ಈ ಮೂಲಕ ಭೂಮಿ ರಹಿತರು ಹಾಗೂ ದಲಿಗರಿಗೆ ಉದ್ಯೋಗ ಲಭ್ಯವಾದಂತಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT