ನಿನ್ನೆ ಪುರಭವನದ ಬಳಿ ಗೋಮಾಂಸ ನಿಷೇಧದ ವಿರುದ್ಧ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಜ್ಞಾನಪೀಠ ಪುರಸ್ಕೃತ ಗಿರೀಶ್ ಕಾರ್ನಾಡ್ ಪಾಲ್ಗೊಂಡಿದ್ದರು. 
ಜಿಲ್ಲಾ ಸುದ್ದಿ

ಗೋಮಾಂಸ ತಿಂದೇ ಬಿಟ್ಟರು

ಸಿಲಿಕಾನ್ ಸಿಟಿ ಬೆಂಗಳರೂರಿನಲ್ಲಿ ಬುದ್ಧಿಜೀವಿಗಳು, ಸಾಹಿತಿಗಳು ಎನ್ನಿಸಿಕೊಂಡವರೂ ಸಹ ನ್ಯಾಯಾಲಯದ ಆದೇಶವನ್ನೂ ಲೆಕ್ಕಿಸದೆ ಗೋಮಾಂಸವನ್ನು...

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳರೂರಿನಲ್ಲಿ ಬುದ್ಧಿಜೀವಿಗಳು, ಸಾಹಿತಿಗಳು ಎನ್ನಿಸಿಕೊಂಡವರೂ ಸಹ ನ್ಯಾಯಾಲಯದ ಆದೇಶವನ್ನೂ ಲೆಕ್ಕಿಸದೆ ಗೋಮಾಂಸವನ್ನು ಸಾರ್ವಜನಿಕವಾಗಿ ಭಕ್ಷಿಸಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರ ಮತ್ತು ನ್ಯಾಯಲಯದ ಆದೇಶಕ್ಕೆ ತಿರುಗಿಬಿದ್ದಿದ್ದಾರೆ.
ಗೋವುಗಳ ರಕ್ಷಣೆ ಮಾಡಬೇಕು ಎನ್ನುವ ಕೂಗು ನಡುವೆಯೇ ವೈವಿಧ್ಯಮಯ ಆಹಾರ ಸಂಸ್ಕೃತಿ ಕಾರ್ಯಕ್ರಮದಲ್ಲಿ ಗೋಮಾಂಸವನ್ನು ಸೇವಿಸಬಾರದು ಎಂದು ನ್ಯಾಯಾಲಯ ಆದೇಶಿಸಿತ್ತು. ಡಾ. ಬಿ.ಆರ್.ಅಂಬೇಡ್ಕರ್ 124ನೇ ಜಯಂತಿ ಅಂಗವಾಗಿ ಡಿವೈಎಫ್ಐ ಹಾಗೂ ವಿವಿಧ ಸಂಘಟನೆಗಳು ನಗರದ ಪುರಭವನದ ಮುಂಭಾಗ `ವೈವಿಧ್ಯಮಯ ಆಹಾರ ಸಂಸ್ಕೃತಿ ಎತ್ತಿ ಹಿಡಿಯೋಣ' ಎನ್ನುವ ಕಾರ್ಯಕ್ರಮ ಆಚರಿಸದವು. ಕೆಲವು ಸಾಹಿತಿಗಳು, ಪ್ರತಿಭಟನಾಕಾರರು, ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿ ಗೋಮಾಂಸ ಸೇವಿಸಿದರು.
ಕೋರ್ಟ್ ತಡೆಯಾಜ್ಞೆ: ಕಾನೂನು ಸುವ್ಯ ವಸ್ಥೆ ಹಿನ್ನೆಲೆಯಲ್ಲಿ ಗೋಮಾಂಸ ಸೇವನೆ ನಿಷೇಧಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ತಡೆಯಾಜ್ಞೆ ನೀಡಿತ್ತು. ಸಾಹಿತಿ ಮರುಳಸಿದ್ದಪ್ಪ ನ್ಯಾಯಾಲಯದ ಆದೇಶ ಧಿಕ್ಕರಿಸಿ ಗೋಮಾಂಸ ಸೇವಿಸಿದರು. ಆದರೆ, ಜ್ಞಾನಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡ್ ಅವರಿಗೆ ಮಾಂಸ ಸೇವಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರಾದರೂ ಮಾಂಸ ಸೇವಿಸಲಿಲ್ಲ.
ಆದರೆ, ಕೇಂದ್ರ ಸರ್ಕಾರದ ಕ್ರಮಕ್ಕೆ ಧಿಕ್ಕಾರ ಹಾಕಿದರು. ಮಾಂಸ ಪೊಲೀಸರ ವಶಕ್ಕೆ: ಪೊಲೀಸರು ಪ್ರತಿಭಟನಾಕಾರರ ಬಳಿ ಇದ್ದ ಗೋಮಾಂಸವನ್ನು ವಶಪಡಿಸಿಕೊಂಡರು. ಮಾಂಸ ವಾಪಸ್ ನೀಡುವಂತೆ ಆಗ್ರಹಿಸಿದ್ದರಿಂದ ಮಾತಿನ ಚಕಮಕಿ ನಡೆಯಿತು. ನಂತರ ಪ್ರತಿಭಟನೆ ಕೈಬಿಡಲಾಯಿತು. ಆದರೆ, ಈ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆಯುಂಟು ಮಾಡಿದರು. ಆಹಾರ ಸಂಸ್ಕತಿ ಕೇವಲ ಗೋಮಾಂಸ ಭಕ್ಷಣೆಯಿಂದ ಮಾತ್ರ ಸಾಧ್ಯವೇ. ಚೀನಾದಲ್ಲಿ ಹಾವು, ಚೇಳು, ಜಿರಳೆ, ಹಲ್ಲಿಯಂಥ ಇತರ ಪ್ರಾಣಿಗಳನ್ನು ಸೇವಿಸುತ್ತಾರೆ. ಈ ಎಲ್ಲಾ ಪ್ರಾಣಿಗಳನ್ನು ಸಾರ್ವಜನಿಕವಾಗಿ ಸೇವಿಸಲಿ ಎಂದು ಟೀಕಿಸಲಾಯಿತು.
ದೇಶದಲ್ಲಿ ಅವರಿಗೆ ಇಷ್ಟ ಬಂದ ಆಹಾರ ಸೇವಿಸುವುದು ಅವರ ಹಕ್ಕು. ಸರ್ಕಾರ ಅದಕ್ಕೆ ಅಡ್ಡಿಪಡಿಸಬಾರದು. ಯಾವುದೇ ಕಾರಣಕ್ಕೂ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಬಾರದು. ಸ್ವಾಮಿ ವಿವೇಕಾನಂದ ಅವರು ಸಹ ಗೋಮಾಂಸವನ್ನು ಸೇವಿಸಿದ್ದಾರೆ. ನಮ್ಮ ಯುವಕರಿಗೆ ಇಂದು
ಬೇಕಿರುವುದು ಭಗವದ್ಗೀತೆ ಅಲ್ಲ. ಬೀಫ್ ಆ್ಯಂಡ್ ಬೈಸೆಪ್ಸ್ ಎಂದು ಅವರೇ ಹೇಳಿದ್ದಾರೆ. ಹಾಗಾಗಿ ಅವರವರ ಆಹಾರ ಸಂಸ್ಕೃತಿಗೆ ಯಾರೂ ಅಡ್ಡಿಬರಬಾರದು.
- ಮರುಳಸಿದ್ದಪ್ಪ, ಸಾಹಿತಿ.

ಆಹಾರ ಸಂಸ್ಕೃತಿ ಕಸಿಯುವ ಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ತಮ್ಮ ಆಹಾರ ಸೇವನೆ ಅವರವರ ಮೂಲಭೂತ ಹಕ್ಕು. ಅದನ್ನು ಯಾರೂ ಆದೇಶಿಸುವಂತಿಲ್ಲ. ಹಾಗಾಗಿ ಕೇಂದ್ರ ಸರ್ಕಾರ ಇನ್ನಾದರೂ ಇದನ್ನು ಕೈಬಿಡಬೇಕು.
- ಗಿರೀಶ್ ಕಾರ್ನಾಡ್,
ಜ್ಞಾನಪೀಠ ಪುರಸ್ಕೃತರು

ಆಹಾರ ನಮ್ಮ ಹಕ್ಕು. ಅದನ್ನು ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಸೂಕ್ತ ಕ್ರಮಕೈಗೊಳ್ಳದಿದ್ದಲ್ಲಿ ವೈವಿಧ್ಯಮಯ ಆಹಾರ ಸಂಸ್ಕೃತಿ ಎತ್ತಿಹಿಡಿಯೋಣ ಬನ್ನಿ ಎಂಬ ಶೀರ್ಷಿಕೆಯಡಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತದೆ.
-ರಾಜಶೇಖರ್,
ವೈಎಫ್ಐ ಮುಖಂಡ,


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT