ಜಿಲ್ಲಾ ಸುದ್ದಿ

ಕಾಂಗ್ರೆಸ್‍ಗೆ ಅನುಕೂಲಕರ ಮೀಸಲು ಪಟ್ಟಿ: ಎಚ್.ಡಿ.ದೇವೇಗೌಡ

ಹಾಸನ: ಬಿಬಿಎಂಪಿ ತ್ರಿಭಜನೆಯಿಂದ ಮೂವರು ಮೇಯರ್, ಕಚೇರಿಗಳು ಎಲ್ಲ ವಿಭಾಗವಾಗಿ ಆಡಳಿತಾತ್ಮಕ ವೆಚ್ಚ ಹೆಚ್ಚಾಗಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ಏಕ ಸದಸ್ಯ ಪೀಠ ಹೇಳಿದೆ. ವಿಭಾಗೀಯ ಪೀಠಕ್ಕೂ ಸರ್ಕಾರದ ವಾದ ಕೇಳಲಿಕ್ಕೆ ಇಷ್ಟ ಇಲ್ಲ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ವಿಭಜನೆಯ ನೆಪವನ್ನು ಹೂಡುವುದು ಸರಿಯಲ್ಲ ಎಂದು ಹೇಳಿದರು. ಬಿಬಿಎಂಪಿಯಲ್ಲಿ 14 ಮಂದಿ ಒಕ್ಕಲಿ ಸದಸ್ಯರಿದ್ದಾರೆ. ಆ ಕ್ಷೇತ್ರಗಳಿಗೆ ಸರ್ಕಾರ ತಮಗೆ ಬೇಕಾದ ಸಮಾಜದವರಿಗೆ ಮೀಸಲು ನೀಡಿದ್ದಾರೆ. ಮೀಸಲು ಬದಲಿಸಿ ಒಬ್ಬರೂ ಗೆಲ್ಲದಂತೆ ಮಾಡಿದ್ದಾರೆ.

ಚುನಾವಣಾ ಆಯೋಗ ಎಲ್ಲ ಪ್ರಕ್ರಿಯೆಯನ್ನು ನಡೆಸಿದ ಮೇಲೆ ಈಗ ವಿಭಜನೆಯ ಮಾಡಲು ಹೊರಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಚುನಾವಣಾ ಆಯೋಗ ತನ್ನ ಜವಾಬ್ದಾರಿಯನ್ನು ನಿರ್ವಹಿಸಬೇಕು. ಈ ವಿಚಾರ ಕೋರ್ಟ್ ನಲ್ಲಿ ಇದೆ. ಅಲ್ಲದೆ ರಾಜ್ಯಪಾಲರು ಇದನ್ನು ಹೇಗೆ ನಿಭಾಯಿಸುತ್ತಾರೆ ಅನ್ನೋದನ್ನು ನೋಡಿಬೇಕಿದೆ ಎಂದು ಅಭಿಪ್ರಾಯಪಟ್ಟರು.

SCROLL FOR NEXT