ಬೆಂಗಳೂರು: ನಿವೃತ್ತ ಕೆಲವು ಕೆಟ್ಟ ಅಧಿಕಾರಿಗಳ ಮಾತು ಕೇಳಿ, ಬೆಂಗಳೂರನ್ನು ಮೂರು ಭಾಗ ಮಾಡಲು ಸರ್ಕಾರ ಹೊರಟಿದೆ. ಮುಂದಿನ ದಿನಗಳಲ್ಲಿ ಲಾಲ್ಬಾಗ್, ಕಬ್ಬನ್ಪಾರ್ಕ್, ವಿಧಾನಸೌಧ ಹೀಗೆ ಪ್ರತಿ ಪ್ರತಿಷ್ಠಿತ ಕಟ್ಟಡ, ಸ್ಥಳಗಳನ್ನೂ ಭಾಗ ಮಾಡಬೇಕಾಗುತ್ತದೆ. ಅದಕ್ಕೇನು ಮಾಡುವಿರಿ? ಎಲ್ಲಿ ಕೂತು ಅಧಿಕಾರ ನಡೆಸುತ್ತೀರಿ ಎಂದು ವಾಟಾಳ್ ನಾಗರಾಜ್ ಪ್ರಶ್ನಿಸಿದರು.
ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ಇದು ಹುಡುಗಾಟದ ವಿಚಾರವಲ್ಲ. ಬೆಂಗಳೂರನ್ನು ಮೂರು ಭಾಗ ಮಾಡುವುದೆಂದರೆ ಕೆಂಪೇಗೌಡರಿಗೆ ಮಾಡುವ ಅವಮಾನ. ಆದ್ದರಿಂದ ಕೂಡಲೇ ಈ ನಿರ್ಧಾರವನ್ನು ಕೈಬಿಡಬೇಕು.
ಒಂದು ವೇಳೆ ಇಬ್ಭಾಗ ಮಾಡಿದರೆ ಮೇಯರ್, ಕಮಿಷನರ್ ಒಬ್ಬರೇ ಇರಲಿ. ಉಪಮೇಯರ್, ಉಪ ಕಮಿಷನರ್ಗಳನ್ನು ಹೆಚ್ಚು ಮಾಡಿಕೊಳ್ಳಲಿ. ಇಲ್ಲದಿದ್ದರೆ ನಾವು ಹೋರಾಟಗಳನ್ನು ರೂಪಿಸುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.