ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಮೇ ರಂದು, ಕಾರ್ಮಿಕ ದಿನಾಚರಣೆಯನ್ನು ಕರಾಳ ದಿನವಾಗಿ ಆಚರಿಸಲಾಗುವುದು ಎಂದು ಕಾರ್ಮಿಕ ಸಂಘಗಳ ಮೇ ದಿನಾಚರಣೆ ಸಮಿತಿ ತಿಳಿಸಿದೆ. ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸಂಚಾಲಕ, ಕೆ.ಎ ಗಂಗಣ್ಣ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದೇಶದ ಕಾರ್ಮಿಕ ಸಮುದಾಯದ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿವೆ. ಅಲ್ಲದೆ ಗುತ್ತಿಗೆ ಪದ್ಧತಿ ಆಧಾರಿತ ಉದ್ಯೋಗ ಹೆಚ್ಚಾಗಿದ್ದು, ಕಾರ್ಮಿಕ ಹಿತರಕ್ಷಣಾ ಕಾಯ್ದೆಯನ್ನು ಕಂಪನಿ ಮತ್ತು ಕಾರ್ಖಾನೆಗಳು ಪರಿಗಣಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ರು. ಮೋದಿ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ. ವಿದೇಶಿ ಹೂಡಿಕೆದಾರರನ್ನು ಆಹ್ವಾನಿಸಿ ದೇಶದ ಕಾರ್ಮಿಕರ ಶೋಷಣೆಗೆ ಮುಂದಾಗಿದೆ. ಈಗಾಗಲೇ ಕಾಯಂ ಕಾರ್ಮಿಕರ ಸಂಖ್ಯೆ ಕಾರ್ಖಾನೆಗಳಲ್ಲಿ ಶೇ. 10 ರಷ್ಟು ಮಾತ್ರವಿದೆ. ಉಳಿದ ಶೇ. 90 ರಷ್ಟು ಮಂದಿ ಕಾಂಟ್ರಾಕ್ಟ್ ಟ್ರೈನಿ, ಪಾರ್ಟ್ ಟೈಂ, ಅಪ್ರೆಂಟಿಸ್ ಸೇರಿದಂತೆ ನಾನಾ ರೀತಿಯಲ್ಲಿ ಕಾರ್ಮಿಕರಿಂದ ದುಡಿಸಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದರು.
ಮೇ ಡೇ ಸಮಾವೇಶ: ಕಾರ್ಮಿಕರ ದಿನಾಚರಣೆ ಮೇ 1 ರಂದು ಶಿಕ್ಷಕರ ಸದನದಲ್ಲಿ ಮೇ ಡೇ ಸಮಾವೇಶ ಆಯೋಜಿಸಲಾಗಿದೆ ಎಂದರು.