ಜಿಲ್ಲಾ ಸುದ್ದಿ

ನಗರ ಜಿಲ್ಲಾ ಸಾಹಿತ್ಯ ಸಮ್ಮೇಳನ 5ರಿಂದ

Rashmi Kasaragodu

ಬೆಂಗಳೂರು: ಕನ್ನಡಿಗರ ಅಭಿಮಾನದ ಪ್ರತೀಕವಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ನೂರು ವರ್ಶ ತುಂಬಿದ ಹಿನ್ನೆಲೆಯಲ್ಲಿ ಮೇ 5, 6ರಂದು ನಗರದ ಮಲ್ಲೇಶ್ವರದಲ್ಲಿ ಬೆಂಗಳೂರು ನಗರ ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ, ಚೌಡಯ್ಯ ಸ್ಮಾರಕ ಭವನದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಕನ್ನಡದ ಆತಂಕಗಳು, ಕನ್ನಡ- ಕನ್ನಡಿಗ-ಕರ್ನಾಟಕದ ರಕ್ಷಣೆ ಕುರಿತು ಚರ್ಚೆ ನಡೆಸಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಶ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಚಾರವಾದಿ ಡಾ.ಜಿ.ರಾಮಕೃಷ್ಣ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರ.
ಬೆಳಗ್ಗೆ 8 ಗಂಟೆಗೆ ಫ್ರೀಡಂ ಪಾರ್ಕ್ನ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕೆಂಪೇಗೌಡ ವೃತ್ತ, ಆನಂದ್ ರಾವ್ ವೃತ್ತ,  ಸಂಪಿಗೆ ರಸ್ತೆ ಮೂಲಕ ಮಲ್ಲೇಶ್ವರ 18ನೇ ಅಡ್ಡರಸ್ತೆಯಲ್ಲಿ ತಿರುವು ಪಡೆದು ಚೌಡಯ್ಯ ಸ್ಮಾರಕ ಮೆರವಣಿಗೆ ತಲುಪಲಿದೆ. ಬೆಳಗ್ಗೆ 10.30ಕ್ಕೆ ಭಾರತರತ್ನ ಡಾ.ಸಿ.ಎನ್. ಆರ್ ರಾವ್ ಸಮ್ಮೇಳನಕ್ಕೆ ಚಾಲನೆ ನೀಡಿದ್ದಾರೆ. ಇದೇ ವೇಳೆ ಕೆಂಪಾಬುಧಿ ಸ್ಮರಣ ಸಂಚಿಕೆಯನ್ನು ಸಚಿವೆ ಉಮಾಶ್ರೀ ಅಂಗೈಲಿ ಬೆಂಗಳೂರು ಕೃತಿಯನ್ನು ಸಚಿವ ರಾಮಲಿಂಗಾ ರೆಡ್ಡಿ `ನವರತ್ನ ಕನ್ನಡ ಚಿಂತನೆಗಳು' ಕೃತಿಯನ್ನು ಕನ್ನಡ ಅಭಿವೃದ್ಧಿ  ಪ್ರಾಧಿಕಾರದ ಅಧ್ಯಕ್ಷ  ಡಾ.ಎಲ್.ಹನುಮಂತಯ್ಯ ಬಿಡುಗಡೆ ಮಾಡಲಿದ್ದಾರೆ. ಕನ್ನಡವನ್ನು ಕಾಡುತ್ತಿರುವ ಪ್ರಸ್ತುತ ಸಮಸ್ಯೆಗಳು, ಜನಪರ ಚಳವಳಿಗಳು, ಕವಿಗೋಷ್ಠಿಗಳು ಸಂಜೆಯವರೆಗೂ ನಡೆಯಲಿವೆ ಎಂದರು.

ಸನ್ಮಾನ: ಶತಾಯುಷಿಗಳಾದ ಸಿದ್ಧಗಂಗೆಯ ಶ್ರೀ ಶಿವಕುಮಾರ ಸ್ವಾಮೀಜಿ ಮತ್ತು ನಿಘಂಟು ತಜ್ಞ ಡಾ.ಜಿ.ವೆಂಕಟಸುಬ್ಬಯ್ಯ ಅವರಿಗೆ ಮೊದಲ ದಿನ (ಮೇ 5) ಶತಮಾನೋತ್ಸವದ ಗೌರವಾರ್ಪಣೆ ನೀಡಲಾಗುವುದು.

ನಿರ್ಣಯ ಮಂಡನೆ: ಮೇ 6ರಂದು ಸಂಜೆ ಸನ್ಮಾನ ಮತ್ತು ಸಮಾರೋಪ ಸಮಾರಂಭ ವಿದ್ದು, ನಿವೃತ್ತ ನ್ಯಾ. ಎ.ಜೆ.ಸದಾಶಿವ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈ ವೇಳೆ ಚಿತ್ರೋದ್ಯಮದ ಗಣ್ಯರು, ಸಂಗೀತ ನಿರ್ದೇಶಕರು, ಸಾಹಿತಿಗಳು ಸೇರಿದಂತೆ ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

SCROLL FOR NEXT