ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಯಾವುದೇ ಕಾರಣಕ್ಕೂ ಡಬ್ಬಿಂಗ್‍ಗೆ ಅವಕಾಶ ಕಲ್ಪಿಸಬಾರದೆಂದು ಆಗ್ರಹಿಸಿ ಚಿತ್ರ ನಿರ್ದೇಶಕರ ಸಂಘದ ಸದಸ್ಯರು ನಗರದಲ್ಲಿ ಬಾಯಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಮೌನ ಪ್ರತಿಭಟನೆ ನಡೆಸಿದರು. ಕನ್ನಡಪರ ಸಂಘಟನೆಗಳು, ಹಿರಿ-ಕಿರಿ ತೆರೆಯ ಕಲಾವಿದರು, ತಂತ್ರಜ್ಞರು ಹಾಗೂ ಕಾರ್ಮಿಕರು ಪ್ರತಿಭಟನೆಗೆ ಸಾಥ್ ನೀಡಿದರು.
ಭಾನುವಾರ ಬೆಳಗ್ಗೆ ಡಾ.ರಾಜ್‍ಕುಮಾರ್ ಸಮಾಧಿಗೆ ಪೂಜೆ ಮಾಡಿದ ನಂತರ ಸುಮಾರು ಒಂದು ಗಂಟೆ ಕಾಲ ಪ್ರತಿಭಟಿಸಿದ ಪ್ರತಿಭಟನಾಕಾರರು ನಂತರ ಮೈಲಸಂದ್ರದಲ್ಲಿರುವ ಡಾ.ವಿಷ್ಣುವರ್ಧನ್ ಅವರ ಸಮಾಧಿ ಬಳಿ ತೆರಳಿ ಅಲ್ಲಿಯೂ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ, ನಿರ್ದೇಶಕ ಪಿ.ಶೇಷಾದ್ರಿ, ಕಾಂಪಿಟೇಷನ್ ಕಮಿಷನ್ಆಫ್ ಇಂಡಿಯಾ(ಸಿಸಿಐ) ಡಬ್ಬಿಂಗ್ ವಿರೋಧಿಸದಂತೆ ಹಾಗೂ ಈ ಸಂಬಂಧ ಕೆಲವರಿಗೆ ದಂಡ ಸಹ ವಿಧಿಸಿದೆ. ಈ ತೀರ್ಪು ಪ್ರಶ್ನಿಸಿ ತಾವು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು. ಈ ಸಂಬಂಧ ಇದೇ ಆಗಸ್ಟ್ 8ರಂದು ನಿರ್ದೇಶಕರು,ನ ಕರು ಸೇರಿದಂತೆ ಕಲಾವಿದರ ಸಭೆ ನಡೆಯಲಿದೆ. ಈ ವೇಳೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕಾನೂನು ಪ್ರಕಾರ ಡಬ್ಬಿಂಗ್ ಅನ್ನು ಯಾರೂ ತಡೆಯಲು ಆಗುವುದಿಲ್ಲ. ಆದರೆ, ಸಾಧ್ಯವಾದಷ್ಟು ಡಬ್ಬಿಂಗ್ ನಿಯಂತ್ರಿಸಬೇಕು. ಇದರಿಂದ ಕನ್ನಡ ಭಾಷೆ ಹಾಗೂ ಚಿತ್ರಗಳ ಮೇಲೆ ಪರಿಣಾಮ ಬೀರಲಿದೆ. ಭಾಷೆ, ಸಂಸ್ಕೃತಿ ವಿನಾಶದ ಅಂಚಿಗೆ ತಲುಪಲಿವೆ. ಹಾಗಾಗಿ ಡಬ್ಬಿಂಗ್ ವಿರೋಧ ನಮ್ಮ ಹಕ್ಕು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲಾಗಿದೆ ಎಂದರು. ನಾಡಿನ ಸಂಸ್ಕೃತಿ ಮೇಲೆ ದಬ್ಬಾಳಿಕೆ ನಡೆಸುವಡಬ್ಬಿಂಗ್ ಸಂಸ್ಕೃತಿಯನ್ನು ಕನ್ನಡ ಚಿತ್ರರಂಗಕ್ಕೆ ಕಾಲಿಡಲು ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಸಿದರು.
ನಟ ಶರಣ್, ನಿರ್ದೇಶಕರಾದ ಯೋಗೇಶ್ ಹುಣಸೂರು, ರವಿ ಶ್ರೀವತ್ಸ, ಮಳವಳ್ಳಿ ಸಾಯಿಕೃಷ್ಣ, ಡಾ.ವಿ.ನಾಗೇಂದ್ರ ಪ್ರಸಾದ್, ಚಲನಚಿತ್ರ ಕಾರ್ಮಿಕರಒಕ್ಕೂಟದ ಕಾರ್ಯದರ್ಶಿ ರವೀಂದ್ರನಾಥ್ ರಿದಂತೆ ಕಿರುತೆರೆ ಕಲಾವಿದರು, ತ್ರಜ್ಞರು ಭಾಗವಹಿಸಿದ್ದರು.