ಹೈ ಕೋರ್ಟ್ 
ಜಿಲ್ಲಾ ಸುದ್ದಿ

ಚಲನಚಿತ್ರ ಪ್ರಶಸ್ತಿ ಅವ್ಯವಹಾರ: ವಾರ್ತಾ ಇಲಾಖೆ ನಿರ್ದೇಶಕರ ಖುದ್ದು ಹಾಜರಿಗೆ ಸೂಚನೆ

ರಾಜ್ಯ ಚಲನಚಿತ್ರ ಪ್ರಶಸ್ತಿಗಳ ನೀಡಿಕೆಯಲ್ಲಿ ಭಾರಿ ಅವ್ಯವಹಾರ ನಡೆದಿರುವುದಾಗಿ ಆರೋಪಿಸಿ ದಾಖಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ವಿಶುಕುಮಾರ್...

ಬೆಂಗಳೂರು: ರಾಜ್ಯ ಚಲನಚಿತ್ರ ಪ್ರಶಸ್ತಿಗಳ ನೀಡಿಕೆಯಲ್ಲಿ ಭಾರಿ ಅವ್ಯವಹಾರ ನಡೆದಿರುವುದಾಗಿ ಆರೋಪಿಸಿ ದಾಖಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ವಿಶುಕುಮಾರ್ ಅವರು ಆ.10ರಂದು ಕೋರ್ಟ್‍ಗೆ ಖುದ್ದು ಹಾಜರಾಗಬೇಕೆಂದು ಹೈಕೋರ್ಟ್ ನಿರ್ದೇಶಿಸಿದೆ. ರಾಜ್ಯ ಚಲನಚಿತ್ರ ಪ್ರಶಸ್ತಿ ನೀಡಿಕೆಯಲ್ಲಿ ಭಾರಿ ಅಕ್ರಮಗಳು ನಡೆದಿದ್ದು, ಲಂಚ ಪಡೆದು ಪ್ರಶಸ್ತಿ ನೀಡಲಾಗಿದೆ ಎಂದು ಆರೋಪಿಸಿ ಎಸ್.ಎನ್.ಆರ್. ಕ್ರಿಯೇಷನ್ಸ್ ಮಾಲೀಕರಾದ  ಎಸ್. ರಾಧಾ ಎಂಬುವರು ಹೈಕೋರ್ಟ್  ನಲ್ಲಿ ತಕರಾರು ಅರ್ಜಿ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾ.ಅಬ್ದುಲ್ ನಜೀರ್ ಅವರಿದ್ದ ಏಕಸದಸ್ಯ ಪೀಠ, ಈ ಸಂಬಂಧ ಇಲಾಖೆಯ ನಿರ್ದೇಶಕರು ಖುದ್ದು ಕೋರ್ಟ್‍ಗೆ ಹಾಜರಾಗಿ ಇದಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ತಿರುಚದೆ ಕೋರ್ಟ್‍ಗೆ ಹಾಜರುಪಡಿಸ ಬೇಕು ಎಂದು ಸೂಚಿಸಿದೆ. ಮಾತ್ರವಲ್ಲದೇ 2009-10ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿರುವ ಸಿನೆಮಾಗಳ ಪಟ್ಟಿಯನ್ನು ಏಕೆ ಹಿಂದಕ್ಕೆ ಪಡೆಯಬಾರದು ಎಂದು ಸರ್ಕಾರವನ್ನು ಪ್ರಶ್ನಿಸಿದೆ.

ಅರ್ಜಿದಾರರ ಪರ ವಕೀಲ ನರಸಿಂಹರಾಜು ಅವರು ವಾದ ಮಂಡಿಸಿ, ಆಯ್ಕೆ ಸಮಿತಿಯು ಪ್ರತಿ ವರ್ಷವೂ ಇದೇ ರೀತಿ ತಪ್ಪು ಹೆಜ್ಜೆಗಳನ್ನಿಡುತ್ತಿದೆ. ಸಬ್ಸಿಡಿ ಪಡೆಯಲು ಲಂಚ, ಪ್ರಶಸ್ತಿಗಳ ಆಯ್ಕೆಯಲ್ಲಿ ಅಕ್ರಮ.. ಹೀಗೆ ಸಮಿತಿ ಅವ್ಯವಹಾರಗಳ ಆಗರವಾಗಿದೆ ಎಂದು ಆರೋಪಿಸಿದರು. ಕನ್ನಡ ಹಾಗೂ ಇತರೆ ಪ್ರಾದೇಶಿಕ ಭಾಷೆಯ ಚಲನಚಿತ್ರಗಳಿಗೆ ರಾಜ್ಯ ಪ್ರಶಸ್ತಿ ನೀಡಲು 2012ರ ಮೇ 19ರಂದು ಕೊನೆ ದಿನ ಎಂದು ಪತ್ರಿಕೆಗಳ ಮೂಲಕ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು. ಆದರೆ ಈ ಕೊನೆ ದಿನಾಂಕದ ನಂತರವೂ ಎರಡು ಹಂತಗಳಲ್ಲಿ 14 ಚಲನಚಿತ್ರಗಳನ್ನು ಪ್ರಶಸ್ತಿ ನೀಡುವ ಪಟ್ಟಿಗೆ ಆಯ್ಕೆ ಮಾಡಲಾಗಿದೆ. ಇದು ರಾಜ್ಯ ರೂಪಕ ಚಲನಚಿತ್ರಗಳ ನಿಮಮಾವಳಿ ಪ್ರಕಾರವಾಗಿಲ್ಲ ಎಂದು ನರಸಿಂಹರಾಜು ಪೀಠದ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ಪರ ವಕೀಲರು, ಸಲಹಾ ಸಮಿತಿಯು ತನ್ನ ವಿವೇಚನಾಧಿಕಾರ ಬಳಸಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ ವಿವೇಚನಾಧಿಕಾರ ಎಂದರೆ ಮನಸ್ಸಿಗೆ ಬಂದಂತೆ ನೀಡುವುದಲ್ಲ. 2009ರ ಪ್ರಶಸ್ತಿಯನ್ನು 2012ರಲ್ಲಿ ನೀಡುವುದೆಂದರೆ ಯಾವ ರೀತಿಯ ಸಂಪ್ರದಾಯವಿದು ಎಂದು ಆಶ್ಚರ್ಯ ವ್ಯಕ್ತಪಡಿಸಿತು. ಅಷ್ಟೇ ಅಲ್ಲದೆ, ಇಂತಹ ಪ್ರವೃತ್ತಿ ಈಗಲೇ ನಿಲ್ಲಬೇಕು. ಪ್ರಶಸ್ತಿ ಪಡೆದವರ ಹಣವನ್ನೆಲ್ಲಾ ವಾಪಸ್ ಪಡೆಯಬೇಕು. ಆಗ ಮಾತ್ರ ಈ ರೀತಿ ಘಟನೆ ಮರುಕಳಿಸುವುದಿಲ್ಲ. ಮುಂದೆ ಎಲ್ಲವೂ ನೆಟ್ಟಗಾಗುತ್ತದೆ ಎಂದು ಎಚ್ಚರಿಸಿದರು.

ರಾಜ್‍ಕುಮಾರ್‍ಗೆ ರಾಜ್‍ಕುಮಾರೇ ಸಾಟಿ...
ದ್ವಾರಕೀಶ್, ನರಸಿಂಹರಾಜು ಇವರೆಲ್ಲಾ ಅದ್ಭುತ ನಟರು. ಸಲಹಾ ಸಮಿತಿಗೆ ಅಂದು ಅಧ್ಯಕ್ಷರಾಗಿದ್ದ ನಟ ದ್ವಾರಕೀಶ್ ಅವರು, ಕೋರ್ಟ್ ನಮ್ಮನ್ನೆಲ್ಲಾ ಈ ರೀತಿ ತರಾಟೆಗೆ ತೆಗೆದುಕೊಳ್ಳುತ್ತಿದೆ ಎಂದು ಕೋಪಗೊಂಡು ನಾಳೆ ತಮ್ಮ ಸಿನೆಮಾದಲ್ಲಿ ನ್ಯಾಯಮೂರ್ತಿಗಳನ್ನೆಲ್ಲಾ ಖಳನಾಯಕರ ಥರಾ ಸೃಷ್ಟಿ ಮಾಡಿದರೂ ಮಾಡಬಹುದು ಎಂದು ನ್ಯಾಯಮೂರ್ತಿ ನಜೀರ್ ಚಟಾಕಿ ಹಾರಿಸಿದರು. ಅಲ್ಲದೇ ಸಿನೆಮಾ ಎಂದರೆ ಡಾ.ರಾಜ್‍ಕುಮಾರ್. ಡಾ.ರಾಜ್ ಹೆಸರಿಗೆ ರಾಜ್‍ಕುಮಾರ್ ಅವರೇ ಸಾಟಿ ಎಂದು ಮನಃಪೂರ್ವಕ ಮೆಚ್ಚುಗೆ ಸೂಚಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT