ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಇನ್ನು ಡಿ ಗ್ರೂಪ್ ನೌಕರರಿಗೂ ಆಸ್ತಿ ವಿವರ ಸಲ್ಲಿಕೆ ಕಡ್ಡಾಯ

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಹೂಡಲು ಹೊರಟಿದೆಯೇ ಸರ್ಕಾರ? ಹೌದು ಎನ್ನುತ್ತಿದೆ ಸ್ವತಃ ಸರ್ಕಾರವೇ ಹೊರಡಿಸಿರುವ ಆದೇಶ!...

ಬೆಂಗಳೂರು: ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಹೂಡಲು ಹೊರಟಿದೆಯೇ ಸರ್ಕಾರ? ಹೌದು ಎನ್ನುತ್ತಿದೆ ಸ್ವತಃ ಸರ್ಕಾರವೇ ಹೊರಡಿಸಿರುವ ಆದೇಶ!
ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ `ಡಿ' ಗ್ರೂಪ್ ನೌಕರರು ತಮ್ಮ ಆಸ್ತಿ ಮತ್ತು ಹೊಣೆಗಾರಿಕೆಗಳ ವಿವರವನ್ನು ನಿಯಮಿಸಲಾದ ಪ್ರಾಧಿಕಾರಕ್ಕೆ ಸಲ್ಲಿಸುವಂತೆ ಸರ್ಕಾರವು ಆಗಸ್ಟ್ 1 ರಂದು ಆದೇಶ (ಸಂಖ್ಯೆ: ಸಿಆಸುಇ 90 ಸೇನಿಸಿ 2014) ಹೊರಡಿಸಿದೆ. ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು, 1996 ನಿಯಮ 23(1)(ಡಿ) ಟಿಪ್ಪಣಿ-1ರಲ್ಲಿ `ಡಿ' ದರ್ಜೆ ಸರ್ಕಾರಿ ನೌಕರರಿಗೆ ಆಸ್ತಿ ಮತ್ತು ಹೊಣೆಗಾರಿಕೆ ವಿವರ ಪಟ್ಟಿ ಸಲ್ಲಿಸಲು ನೀಡಿದ್ದ ವಿನಾಯಿತಿಯನ್ನು ಈ ತಕ್ಷಣದಿಂದಲೇ ಜಾರಿಗೆ ಬರುವಂತೆ ತೆರವುಗೊಳಿಸಿದೆ. ಈ ಆದೇಶದಿಂದ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನೂರಾರು `ಡಿ' ಗ್ರೂಪ್ ನೌಕರರಿಗೆ ಹೊಸದೊಂದು ಸಂಕಷ್ಟ ಎದುರಾಗಿದೆ.

ಇಷ್ಟು ವರ್ಷ ಇಲ್ಲದ ನಿಯಮವನ್ನು ಸರ್ಕಾರ ರೂಪಿಸುವ ಮೂಲಕ ತನ್ನ ವಿಕೃತ ಮನಸ್ಸಿನ ಭಾವನೆ ಹೊರ ಹಾಕಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ  ನೌಕರರ
ಒಕ್ಕೂಟ ಟೀಕಿಸಿದೆ. ಅಲ್ಲದೆ ಸರ್ಕಾರದ ಈ ಕ್ರಮ ತಲೆ ಬುಡ ಇಲ್ಲದ್ದು ಎಂದೂ ಖಾರವಾಗಿ ಪ್ರತಿಕ್ರಿಯಿಸಿದೆ.
ಆದೇಶ ಗೊಂದಲ ನಿವಾರಿಸೀತೆ?: ಕರ್ನಾಟಕ ನಾಗರಿಕ ಸೇವಾ   (ನಡತೆ )ನಿಯಮ ಗಳು, 1996ರ ನಿಯಮ 23(1) ರನ್ವಯ`ಪ್ರತಿಯೊಬ್ಬ ಸರ್ಕಾರಿ ನೌಕರನು ಯಾವು
ದೇ ಸೇವೆಗೆ ಅಥವಾ ಹುದ್ದೆಗೆ ಅವನ ಮೊದಲ ನೇಮಕ ಆದಾಗ ಮತ್ತು ಆ ತರುವಾಯ ಮಾರ್ಚ್ 31ಕ್ಕೆ ಅಂತ್ಯಗೊಳ್ಳುವಪ್ರತಿ ಹನ್ನೆರಡು ತಿಂಗಳ ಅಂತರದಲ್ಲಿ ತನ್ನ ಮತ್ತು ಮತ್ತು ತನ್ನ ಕುಟುಂಬದ ಎಲ್ಲ ಸದಸ್ಯರ ಆಸ್ತಿಗಳ ಮತ್ತು ಹೊಣೆಗಾರಿಕೆಗಳ ವಿವರಪಟ್ಟಿಯನ್ನು ಸರ್ಕಾರ ನಿಯಮಿಸುವ ನಮೂನೆ ಯಲ್ಲಿ ಸಲ್ಲಿಸುವಂತೆ' ಈ ಹಿಂದೆ ಆದೇಶಿಸಿತ್ತು.
ಮತ್ತೊಂದು ಆದೇಶದಲ್ಲಿ, `1996ರ ನಿಯಮ 23(1)(ಡಿ) ಟಿಪ್ಪಣಿ 1ರಲ್ಲಿ 23(1) ಉಪನಿಯಮ`ಡಿ' ಸಮೂಹದ ನೌಕರರಿಗೆ ಸಾಮಾನ್ಯವಾಗಿ  ಅನ್ವಯವಾಗತಕ್ಕದ್ದಲ್ಲ ಎಂದಿದ್ದರೂ , `ಸರ್ಕಾರವು ಅದು ಅಂಥ ಯಾವುದೇ ಸರ್ಕಾರಿ ನೌಕರನಿಗೆ ,ಸರ್ಕಾರಿ ನೌಕರರ ವರ್ಗಕ್ಕೆ ಅನ್ವಯವಾಗತಕ್ಕ ದ್ದೆಂದು ನಿರ್ದೇಶಿಸಬಹುದೆಂದು' ಅಭಿಪ್ರಾಯಪಟ್ಟಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT