ಜಿಲ್ಲಾ ಸುದ್ದಿ

ತಲೆನೋವಾದ ಆಪರೇಷನ್ ಸ್ಮೈಲ್

Shilpa D

ಬೆಂಗಳೂರು: ಮಗು ಎತ್ತಿಕೊಂಡು ಭಿಕ್ಷಾಟನೆಯಲ್ಲಿ ತೊಡಗಿದ್ದವರ ವಿರುದ್ಧ ಆಪರೇಷನ್ ಸ್ಮೈಲ್ ಹೆಸರಿನ ವಿಶೇಷ ಕಾರ್ಯಾಚರಣೆಯಲ್ಲಿ ರಕ್ಷಿಸಲ್ಪಟ್ಟ 190 ಮಕ್ಕಳ ಪಾಲಕರ ಗುರುತು ಪತ್ತೆ ಮಾಡುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಗುರುವಾರ ನಗರದಾದ್ಯಂತ ಕಾರ್ಯಾಚರಣೆ ನಡೆಸಿದ ಪೊಲೀಸರು, ಎನ್‍ಜಿಒ ಸದಸ್ಯರು ಭಿಕ್ಷಾಟನೆಗೆ ಬಳಕೆಯಾಗಿದ್ದ 190 ಮಕ್ಕಳ ರಕ್ಷಿಸಿ ಎನ್‍ಜಿಒ ಮತ್ತು ಸರ್ಕಾರಿ ಬಾಲಮಂದಿರದಲ್ಲಿ ಆಶ್ರಯ ಕಲ್ಪಿಸಿದ್ದಾರೆ. ಈ ಸಂಬಂಧ 86 ಮಹಿಳೆಯರು ಹಾಗೂ 8 ಪುರುಷರನ್ನೂ ವಶಕ್ಕೆ ಪಡೆದಿದ್ದಾರೆ.

ಮಕ್ಕಳ ಪಾಲಕರು ಮತ್ತು ಪೊಷಕರು ಯಾರು ಎನ್ನುವುದು ಖಚಿತವಾಗುತ್ತಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು. ಮಕ್ಕಳ ಗುರುತು ಪತ್ತೆಗೆ ಡಿಎನ್‍ಎ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಆದರೆ, ಅದಕ್ಕೆ ಕೋರ್ಟ್ ಅನುಮತಿ ಕಡ್ಡಾಯ. ಜತೆಗೆ ಹಲವು ನಿಯಮಗಳ ಪಾಲಿಸಬೇಕಿದ್ದು ಸಾಕಷ್ಟು ಸಮಯಾವಕಾಶ ಬೇಕಾಗುತ್ತದೆ ಎಂದು ಮಾಹಿತಿ ನೀಡಿದರು

SCROLL FOR NEXT