ಮಂಗಳೂರು: ಕಾಸರಗೋಡಿನ ಗಡಿನಾಡಿನಲ್ಲಿ ಕನ್ನಡಿಗರ ಸಾಂಸ್ಕೃತಿಕ ಪ್ರತಿನಿಧಿಯಾಗಿ ಕರ್ನಾಟಕದ ಬಹುತೇಕ ಮುಖ್ಯಮಂತ್ರಿಗಳನ್ನು `ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು, ಅದು ನನ್ನಬದುಕಿನ ಕೊನೆಯ ಆಸೆ' ಎಂದು ಆಗಾಗ ಒತ್ತಾಯಿಸುತ್ತಲೇ ಬಂದಿದ್ದ ಕಯ್ಯಾರರಿಗೆ ಕೊನೆಗೂ `ಕರ್ನಾಟಕ ರತ್ನ' ದೊರಕಲಿಲ್ಲ. 2014 ಜೂ. 8ರಂದು ಕಯ್ಯಾರರಿಗೆ
ನೂರು ತುಂಬಿ ಕಯ್ಯಾರರ ಶತಮಾನೋತ್ಸವದ ಆರಂಭವಾಗಿತ್ತು.ರಾಜ್ಯ ಸರಕಾರ ಅವರಿಗೆ ಈ ವಿಶೇಷ ಸಂದರ್ಭದಲ್ಲಾದರೂ ಹುಟ್ಟುಹಬ್ಬದ ಕೊಡುಗೆಯಾಗಿ `ಕರ್ನಾಟಕ ರತ್ನ' ನೀಡುವ ನಿರೀಕ್ಷೆ ಇತ್ತು. ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್‍ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಕರ್ನಾಟಕ ಸರ್ಕಾರವನ್ನು ಪದೇ ಪದೇ ವಿನಂತಿಸಿದ್ದರು. ಮಂಗಳೂರು ವಿವಯ ಡಾಕ್ಟರ್ ಆಫ್ ಲಿಟರೇಚರ್ ಗೌರವ, ಶ್ರೇಷ್ಠ ಶಿಕ್ಷಕ ರಾಷ್ಟ್ರಪ್ರಶಸ್ತಿ, ಕರ್ನಾಟಕ ಕಯ್ಯಾರರಿಗೆ ದೊರೆತಿದೆ.
ಪದ್ಯ, ಗದ್ಯ, ಸಾಹಿತ್ಯ ಸಂಸ್ಕೃತಿ ವಿಮರ್ಶೆ, ವ್ಯಾಕರಣ, ಶಿಶು ಸಾಹಿತ್ಯ, ನವೋದಯ ವಾಚನ ಮಾಲೆ, ತುಳು ಸಾಹಿತ್ಯ ಹೀಗೆ ಸಾಹಿತ್ಯ ಎಲ್ಲಾ ಪ್ರಕಾರಗಳಲ್ಲೂ ಹೆಸರು ಮಾಡಿರುವ ಕಯ್ಯಾರರ ಹಲವಾರು ನಾಟಕಗಳನ್ನೂ ರಚಿಸಿದ್ದಾರೆ. ಇವರ ಸಾಹಿತ್ಯ ಪ್ರಾಥಮಿಕದಿಂದ ವಿಶ್ವವಿದ್ಯಾಲಯವರೆಗೆ
ಪಠ್ಯಗಳಾಗಿದೆ.
ಕಯ್ಯಾರರ ಪ್ರಮುಖ ಕೃತಿಗಳು
ಶ್ರೀಮುಖ, ಐಕ್ಯಗಾನ,
ಪುನರ್ನವ, ಚೇತನ,
ಕೊರಗ, ಶತಮಾನದ ಗಾನ,
ಗಂಧವತಿ, ಪ್ರತಿಭಾ
ಪಯಸ್ವಿನಿ
(ಕವನ ಸಂಕಲನಗಳು)
ದುಡಿತವೆ ನನ್ನ ದೇವರು
(ಆತ್ಮಕಥನ)
ಮಕ್ಕಳ ಪದ್ಯಮಂಜರಿ
(ಮಕ್ಕಳ ಕವನ ಸಂಕಲನ)
ಸಾಹಿತ್ಯದೃಷ್ಟಿ
(ಲೇಖನ ಸಂಕಲನ)
ವಿರಾಗಿಣಿ (ನಾಟಕ)
ಟಿ ಪರಶುರಾಮ
(ಕಥಾಸಂಕಲನ)
ಪಂಚಮಿ, ಆಶಾನ್‍ರ
ಖಂಡಕಾವ್ಯಗಳು
(ಅನುವಾದ ಕೃತಿಗಳು)
ಪರಿವು ಕಟ್ಟುಜಿ, ರಡ್ಡ್
ಕಣ್ಣ್‍ಡ್, ಸಾರೊ ಎಸಳ್ದ
ತಾಮರೆ, ಲೆಪ್ಪುನ್ರ್ಯೇ?,
ಬತ್ತನೊ ಈ ಬರ್ಪನೊ
(ತುಳು ಕವನ ಸಂಕಲನಗಳು)